Advertisement

ಸದನಕ್ಕೆ ಚಕ್ಕರ್‌ ಹಾಕುವ ಸಚಿವರು,ಅಧಿಕಾರಿಗಳ ವಿರುದ್ಧ ಕ್ರಮ: ಹೊರಟ್ಟಿ

06:00 AM Jul 01, 2018 | Team Udayavani |

ಬೆಂಗಳೂರು: ಅಧಿವೇಶನ ಸಂದರ್ಭದಲ್ಲಿ ಕಲಾಪಕ್ಕೆ ಗೈರು ಹಾಜರಾಗುವ ಸಚಿವರು ಮತ್ತು ಅಧಿಕಾರಿಗಳ ವಿರುದ್ಧ 
ಕ್ರಮ ತೆಗೆದುಕೊಳ್ಳಲಾಗುವುದು ಎಂದು ವಿಧಾನಪರಿಷತ್‌ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಎಚ್ಚರಿಕೆ ನೀಡಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರದಿಂದ ಸಮ್ಮಿಶ್ರ ಸರ್ಕಾರದ ಮೊದಲ ಅಧಿವೇಶನ ಆರಂಭವಾಗಲಿದೆ. ಮೊದಲ ದಿನದ ಆರಂಭದಲ್ಲೇ ಸದನದಲ್ಲಿ ಇರಬೇಕಾದ ಸಚಿವರ ಮತ್ತು ಅಧಿಕಾರಿಗಳ ಹೆಸರನ್ನು ಕರೆಯಲಾಗುತ್ತದೆ. ಹೆಸರು ಕರೆದ ಸಚಿವರು, ಅಧಿಕಾರಿಗಳು ಆ ಸಂದರ್ಭ ಸದನದಲ್ಲಿ ಹಾಜರಿರಬೇಕು. ಮೊದಲ ಬಾರಿಗೆ ಇಂತಹ ವ್ಯವಸ್ಥೆ ಜಾರಿಗೆ ತರುತ್ತಿದ್ದೇವೆ ಎಂದು ಹೇಳಿದರು.

ಸದನದಲ್ಲಿ ಗೈರು ಹಾಜರಾಗುವ ಸಚಿವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡುವ ಬಗ್ಗೆಯೂ ಚಿಂತನೆ ನಡೆಸುತ್ತಿದ್ದೇವೆ. ಸದನಕ್ಕೆ ಬಾರದೇ ಇರುವ ಅಧಿಕಾರಿಗಳ ವಿರುದ್ಧ  ಈ ಹಿಂದೆ ತೆಗೆದುಕೊಂಡಿರುವ ಕ್ರಮದ ಬಗ್ಗೆಯೂ ಮಾಹಿತಿ ಪಡೆಯ ಲಾಗುತ್ತದೆ.

ಸದನದಲ್ಲಿ ಸದಸ್ಯರು ಕೇಳುವ ಪ್ರಶ್ನೆ ಅಥವಾ ಮಾಹಿತಿಗೆ ಉತ್ತರ ನೀಡಲು ಸಂಬಂಧ ಪಟ್ಟ ಸಚಿವರು ಹಾಜರಿರಬೇಕು. ಸಚಿವರು ಯಾವುದೇ ಮಾಹಿತಿ ಕೇಳಿದಾಗ ತಕ್ಷಣವೇ ಅಧಿಕಾರಿಗಳು ನೀಡು ವಂತಿರಬೇಕು. ಒಂದು ವೇಳೆ ಸಚಿವರು ಅಥವಾ ಅಧಿಕಾರಿಗಳು ಸದನದಲ್ಲಿ ಹಾಜರಿಲ್ಲದೇ ಇದ್ದರೆ ಸದನದ ಗಾಂಭೀರ್ಯತೆಗೆ ಧಕ್ಕೆ ಬರುತ್ತದೆ.
ಕಲಾಪಗಳು ಸುಗಮವಾಗಿ ನಡೆಯಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹಾಜರಿರಬೇಕು ಎಂದರು.

ಯಾವುದೇ ಮಾಹಿತಿ ನೀಡದೇ ಗೈರು ಹಾಜರಾಗುವ ಅಧಿಕಾರಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಸರ್ಕಾರದ
ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆಯಲಾಗುವುದು. ಸದನಕ್ಕೆ ಬಾರದ ಸಚಿವರ ವಿರುದ್ಧ  ಯಾವ ರೀತಿ
ಕ್ರಮ ತೆಗೆದುಕೊಳ್ಳಬಹುದು ಎಂಬುದರ ಬಗ್ಗೆಯೂ ಚಿಂತನೆ ನಡೆಸಲಿದ್ದೇವೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next