Advertisement

ಶುದ್ಧ ನೋಟ-ಕಾಯಕದಿಂದ ಮನಸ್ಸು ಶಾಂತ

08:28 AM Jan 28, 2019 | |

ಕಲಬುರಗಿ: ನಾವಿಂದು ಬಯಸಿದ್ದನ್ನು ನಿರೀಕ್ಷೆಗೂ ಮೀರಿ ಪಡೆದಿದ್ದರೂ ಮನಸ್ಸಿಗೆ ಶಾಂತಿ-ನೆಮ್ಮದಿ ಎನ್ನುವುದು ಆಗಾಗ್ಗೆ ಎನ್ನುವಂತೆ ಆಗಿರುವುದರಿಂದ ನಾವು ಶುದ್ಧ ಒಳಮನಸ್ಸು ಹೊಂದಿ, ಸದೃಢ ಕಾಯಕ ಮೈಗೂಡಿಸಿಕೊಂಡಲ್ಲಿ ಮನಸ್ಸಿಗೆ ನೆಮ್ಮದಿ ಹಾಗೂ ಶಾಂತಿ ಸಿಗಲು ಸಾಧ್ಯ ಎಂದು ಬೀದರ ಚಿದಂಬರಾಶ್ರಮ ಸಿದ್ಧಾರೂಢ ಮಠದ ಡಾ| ಶಿವಕುಮಾರ ಮಹಾ ಸ್ವಾಮೀಜಿ ಹೇಳಿದರು.

Advertisement

ಫೆಬ್ರವರಿ 10ರಿಂದ 14ರ ವರೆಗೆ ಬೀದರ್‌ನ ಸಿದ್ಧಾರೂಢ (ಗುಂಪಾ) ಮಠದಲ್ಲಿ ನಡೆಯುವ ಶ್ರೀಗಳ ಅಮೃತ ಮಹೋತ್ಸವ ಅಂಗವಾಗಿ ತಾಲೂಕಿನ ಅಷ್ಠಗಾ ಗ್ರಾಮದ ಮಹಾದೇವ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ತುಲಾಭಾರ ಹಾಗೂ ಧಾರ್ಮಿಕ ಕಾರ್ಯಕ್ರಮ ಉದ್ದೇಶಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಮನಸ್ಸು ಅಶುದ್ಧಗೊಂಡಿದ್ದಲ್ಲಿ ಅದಕ್ಕೆ ಅನುಭಾವದ ಸಂದೇಶ ಹಾಗೂ ಒಡನಾಟದಿಂದ ಪರಿಹಾರ ಸಾಧ್ಯ. ಹೀಗಾಗಿ ಗುರುಭಕ್ತಿ ತೋರಿ ಕೃಪೆಗೆ ಒಳಗಾಗಿ ಸನ್ಮಾರ್ಗದಲ್ಲಿ ಮುನ್ನಡೆಯುವುದು ಬಹಳ ಅಗತ್ಯವಿದೆ ಎಂದರು. ಕಲಬುರಗಿ ಸಿದ್ಧಾರೂಢ ಮಠದ ಮಾತೋಶ್ರೀ ಲಕ್ಷ್ಮೀತಾಯಿ ಮಾತನಾಡಿ, ಕಾಯಕ ಹಾಗೂ ಗುಣದಲ್ಲಿ ಏಕನಿಷ್ಠೆ ಜತೆಗೆ ಗುರುಭಕ್ತಿ ಹೊಂದಿ ಮುನ್ನಡೆದರೆ ಸಮಾಧಾನ ಹೊಂದಲು ಸಾಧ್ಯ ಎಂದರು.

ಪ್ರವಚನಕಾರ ಶಿವಶಂಕರ ಬಿರಾದಾರ ಕೋಟನೂರ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಶರಣಬಸಪ್ಪ ಪಾಟೀಲ ಅಷ್ಠಗಾ, ಗೋಪಾಲ ಶಾಸ್ತ್ರೀ, ಮುಖಂಡರಾದ ಶಿವಶರಣಪ್ಪ ನವಲದೆ, ಮಲ್ಲಯ್ಯ ಮಠಪತಿ, ಕಲ್ಯಾಣರಾವ್‌ ಮೂಲಗೆ, ಅಂಬಾರಾಯ ಬಿರಾದಾರ, ಅಂಬಾರಾಯ ಬೆನಕನಹಳ್ಳಿ, ಗುರುನಾಥ ಬಿರಾದಾರ, ಬಸವರಾಜ ಬಿರಾದಾರ, ಶಿವಾನಂದ ಚಿಂಚೋಳಿ, ರೇವಣಸಿದ್ದಪ್ಪ ಕೋಟಿ, ಪಾಲಿಕೆ ಸದಸ್ಯ ಶಿವಾನಂದ ಪಾಟೀಲ, ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next