Advertisement

ಹಾಲುಮತ ಸಂಸ್ಕೃತಿ ವೈಭವಕ್ಕೆ ಅದ್ಧೂರಿ ಚಾಲನೆ

03:22 PM Jan 13, 2018 | |

ಜಾಲಹಳ್ಳಿ: ತಿಂಥಿಣಿ ಬ್ರಿಜ್‌ ಕಾಗಿನೆಲೆ ಕನಕಗುರು ಪೀಠದಲ್ಲಿ ಮೂರು ದಿನಗಳ ಕಾಲ ನಡೆಯುವ ಹಾಲುಮತ ಸಂಸ್ಕೃತಿ ವೈಭವ-2018 ಕಾರ್ಯಕ್ರಮಕ್ಕೆ ಶುಕ್ರವಾರ ಅದ್ಧೂರಿ ಚಾಲನೆ ನೀಡಲಾಯಿತು. ಮೈಸೂರು ಕೆ.ಆರ್‌.ನಗರದ ಕನಕಗುರು ಪೀಠದ ಶಿವಾನಂದಪುರಿ ಸ್ವಾಮೀಜಿ ಜೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Advertisement

ಪ್ರಾಸ್ತಾವಿಕ ಮಾತನಾಡಿದ ಸಿದ್ದರಾಮಯ್ಯ ಸ್ವಾಮೀಜಿ, ಕಳೆದ ಹನ್ನೊಂದು ವರ್ಷಗಳಿಂದಲೂ ಹಾಲುಮತ ಸಾಂಸ್ಕೃತಿ ವೈಭವ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಆದರೆ ಈ ಸಲ ನಾವು ಯಾರಿಗೂ ಕಾರ್ಯಕ್ರಮ ಬಗ್ಗೆ ಮಾಹಿತಿ ನೀಡಿಲ್ಲ. ರಾಜಕಾರಣಿಗಳನ್ನು ಆಹ್ವಾನಿಸಿಲ್ಲ. ಆಹ್ವಾನ ಪತ್ರ ಮುದ್ರಿಸಿಲ್ಲ. ಕೇವಲ ನಮ್ಮ ಸಮಾಜದ ಸಾಧಕರಿಗೆ
ಮಾತ್ರ ಮಾಹಿತಿ ನೀಡಿದ್ದೆವು. ಆದರೂ ಇಷ್ಟೊಂದು ಸಂಖ್ಯೆಯಲ್ಲಿ ಸಮಾಜದ ಬಂಧುಗಳು ಸೇರಿರುವುದು ಸಂತೋಷ ಎಂದು ಹೇಳಿದರು.

ಕನಕ ಜ್ಯೋತಿ ಮೆರವಣಿಗೆ: ಬೆಳಗ್ಗೆ ತಿಂಥಿಣಿ ಗ್ರಾಮದ ಮೌನೇಶ್ವರ ದೇವಸ್ಥಾನದಿಂದ ಕನಕಗುರು ಪೀಠದವರೆಗೆ ಕನಕ ಜ್ಯೋತಿ ಮೆರವಣಿಗೆ ನಡೆಸಲಾಯಿತು. ಕುಂಭ ಹೊತ್ತ ನೂರಾರು ಮಹಿಳೆಯರು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.  

ಉಚಿತ ಚಿಕಿತ್ಸಾ ಶಿಬಿರ: ಹಾಲುಮತ ಸಂಸ್ಕೃತಿ ವೈಭವ-2018ರ ಅಂಗವಾಗಿ ಕನಕಗುರು ಪೀಠದಲ್ಲಿ ಡಾ| ಮಾಲಕರೆಡ್ಡಿ ಕಾಲೇಜು, ಬಿ.ಕೆ. ಆರ್ಗನೇಶನ್‌ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಉಚಿತ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಡಾ| ವಿಜಯಕುಮಾರ ಪಾಟೀಲ, ಡಾ| ಪ್ರೀತಿ ಪಾಟೀಲ ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ. 

ಸಾಧಕರ ಸನ್ಮಾನ: ವಿವಿಧ ಉನ್ನತ ಸ್ಥಾನಗಳಲ್ಲಿ ಸಾಧನೆ ಮಾಡಿದ ಹಾಲುಮತ ಸಮಾಜದ ಸಾಧಕರಾದ
ವಿಶ್ವನಾಥ ಅಂಗಡಿ, ಈರಪ್ಪ ಆಶಾಪುರು, ಮಂಜುನಾಥ, ಆಶಪ್ಪ, ಶರಣಮ್ಮ, ಕುಮಾರಿ ನಾಗವೇಣಿ ಸೇರಿದಂತೆ ಅನೇಕರನ್ನು ಸನ್ಮಾನಿಸಿ ಗೌರವಿಸಲಾಯಿತು.
 
ಜಾಲಹಳ್ಳಿ: ಜಗತ್ತಿನ ಅರಿವೇ ಇಲ್ಲದೇ ಗುಡ್ಡಗಾಡು, ಅರಣ್ಯ, ಕಾಡಿನಲ್ಲಿ ಜೀವನ ಸಾಗಿಸುತ್ತಿದ್ದ ಹಾಲುಮತ ಸಮಾಜ
ಎಂದು ಯಾರಿಗೂ ಏನು ಕೇಡು ಬಯಸದೆ ಪ್ರಮಾಣಿಕತೆ ಉಳಿಸಿಕೊಂಡು ಬಂದಿದೆ. ಬದಲಾವಣೆ ಎನ್ನುವುದು
ಜಗದ ನಿಯಮ. ನಾವು ಕಾಲಕ್ಕೆ ತಕ್ಕಂತೆ ಬದಲಾಗಬೇಕು ಎಂದು ಮಾಜಿ ಸಂಸದ ಕೆ.ವಿರುಪಾಕ್ಷಪ್ಪ ಹೇಳಿದರು.

Advertisement

ಆರ್ಥಿಕ, ಶೈಕ್ಷಣಿಕ, ರಾಜಕೀಯ ಮತ್ತು ಸಾಂಸ್ಕೃತಿಕವಾಗಿ ನಾವು ಮುಂದೆ ಬರಬೇಕಾದರೆ ಮಠಗಳ ಪಾತ್ರ
ಮುಖ್ಯವಾಗಿದೆ.  ಮಠಗಳು ಬೆಳೆದರೆ ಸಮಾಜ ಬೆಳೆಯುತ್ತದೆ. ಮಠಗಳು ಬೆಳೆಯಬೇಕಾದರೆ ಸಮಾಜ ಬೇಕು. ಸಮಾಜ ಬೆಳೆಯಬೇಕಾದರೆ ಮಠಗಳು ಬೇಕು. ಎಲ್ಲರೂ ಮಠಗಳ ಬೆಳವಣಿಗೆಗೆ ಸಹಕಾರ ನೀಡಬೇಕು.

ಹಲವು ವರ್ಷಗಳಿಂದ ನಮ್ಮ ನಾಲ್ಕು ವಿಭಾಗೀಯ ಮಠಗಳು ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುತ್ತಿವೆ. ಹಾಗಾಗಿ
ಸಮಾಜದಲ್ಲಿ ಸ್ವಲ್ಪ ಬದಲಾವಣೆ ಕಾಣಬಹುದಾಗಿದೆ. ಆದರೆ ಇದು ಸಾಲದು. ಇನ್ನು ಬಹಳಷ್ಟು ಬದಲಾವಣೆ
ಆಗಬೇಕಿದೆ. ನಮ್ಮ ಸಮಾಜದಲ್ಲಿ ಹಲವು ಸಾಧಕರನ್ನು ನಾವು ಕಾಣಬಹುದಾಗಿದೆ.

ಸಾಧಕರನ್ನು ಆದರ್ಶವಾಗಿಟ್ಟುಕೊಂಡಾಗ ನಾವು ಸಾಧನೆ ಮಾಡಲು ಸಾಧ್ಯವಿದೆ ಎಂದು ಹೇಳಿದರು. ಕೆ.ಆರ್‌. ನಗರ
ಕನಕಗುರು ಪೀಠದ ಶಿವಾನಂದಪುರಿ ಸ್ವಾಮೀಜಿ, ತಿಂಥಿಣಿಬ್ರಿàಜ್‌ ಕಾಗಿನಲೆ ಕನಕಗುರು ಪೀಠದ ಸಿದ್ದರಾಮನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಕುರುಬ ಸಮಾಜದ ರಾಜ್ಯ ಅಧ್ಯಕ್ಷ ನಿಂಗಣ್ಣ ಚಿಂಚೋಡಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಅಮಾತೆಪ್ಪ ಕಂದಕೂರು,
ಸಂಶೋಧಕ ಚಂದ್ರಕಾಂತ ಸ್ವಾಮೀಜಿ, ಸಮಾಜದ ಮುಖಂಡರಾದ ಸಂಗಣ್ಣ ಬಯ್ನಾಪುರು,ಟ್ರಸ್ಟಿ ತಿಪ್ಪಣ್ಣ, ಬಸವರಾಜ ವಿಭೂತಿ, ಶರಣಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next