Advertisement
ಸೇತುವೆ ಒಟ್ಟು ಆರು ಪಿಲ್ಲರ್‌ಗಳನ್ನು ಹೊಂದಿದೆ. ಇದರಲ್ಲಿ ನಡುವಿನ ಮೂರು ಪಿಲ್ಲರ್‌ಗಳು ಶಿಥಿಲಗೊಂಡಿವೆ. ಎರಡು ವರ್ಷ ಆಗಸ್ಟ್‌ನಲ್ಲಿ ಸುರಿದ ಭೀಕರ ಮಳೆಯಿಂದ ದೊಡ್ಡ ದೊಡ್ಡ ಮರಗಳು ಹಾಗೂ ಕಲ್ಲುಗಳು ಬಂದು ಪಿಲ್ಲರ್‌ಗೆ ಗುದ್ದಿದ ಪರಿಣಾಮ ಇವು ಶಿಥಿಲಗೊಂಡಿವೆ ಎಂದು ಸ್ಥಳೀಯರು ಹೇಳುತ್ತಾರೆ.
ಅರಂತೋಡು -ತೊಡಿಕಾನದ ಸಂಪರ್ಕದ ಮುಖ್ಯ ಸೇತುವೆ ಶಿಥಿಲಗೊಂಡಿದೆ. ಸೇತುವೆ ಸ್ಲಾ$Âಬ್ ಕೆಲವಡೆ ಒಡೆದು ನಿಂತಿದೆ. ವಾಹನಗಳು ಸಂಚರಿಸುವಾಗ ಸೇತುವೆಯ ಕೆಳಗಡೆ ನಿಂತರೆ ಗಡ ಗಡ ಎನ್ನುವ ಶಬ್ದ ಕೇಳುತ್ತದೆ. ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಬೇಕು ಎಂದು ಸ್ಥಳೀಯ ನಿವಾಸಿ ಹರಿಪ್ರಸಾದ್ ಹೇಳಿದ್ದಾರೆ. ತೊಡಿಕಾನ ದೇಗುಲಕ್ಕೆ ಸಂಪರ್ಕ
ಈ ಸೇತುವೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಸಂಪರ್ಕ ಸೇತುವೆಯಾಗಿದೆ. ನಿತ್ಯ ಈ ಸೇತುವೆ ಮೂಲಕ ನೂರಾರು ಭಕ್ತರು, ಉತ್ಸವ ಸಮಯದಲ್ಲಿ ಸಾವಿರಾರು ಭಕ್ತರು ತೆರಳುತ್ತಾರೆ.
Related Articles
Advertisement
ದೋಣಿ ಮೂಲಕ ಸಂಚಾರಅರಂತೋಡಿನಲ್ಲಿ ಪಯಸ್ವಿನಿ ಹೊಳೆಗೆ ಸೇತುವೆ ನಿರ್ಮಾಣವಾಗುವುದಕ್ಕೆ ಮೊ ದಲು ತೊಡಿಕಾನ ಗ್ರಾಮದವರು ಹಾಗೂ ಅರಂತೋಡು ಭಾಗದ ಜನರು ಈ ಹೊಳೆಯನ್ನು ಮಳೆಗಾಲದಲ್ಲಿ ದೋಣಿ ಮೂಲಕ ದಾಟಿಕೊಂಡು ಬರುತ್ತಿ ದ್ದರು. ತೊಡಿಕಾನ ಗ್ರಾಮದವರು ಆ ಸಮಯದಲ್ಲಿ ಅರಂತೋಡು ಸಹಕಾರಿ ಬ್ಯಾಂಕ್‌ನಿಂದ ರೇಷನ್ ಅನ್ನು ಹೊಳೆಯ ತನಕ ಹೊತ್ತುಕೊಂಡು ದೋಣಿ ಮೂಲಕ ಸಾಗಿಸುತ್ತಿದ್ದರು. ಇದು ಅರಂತೋಡು – ತೊಡಿಕಾನ ಸಂಪರ್ಕದ ಅತ್ಯಗತ್ಯ ಸೇತುವೆಯಾಗಿದೆ. ಸೇತುವೆ ಕುಸಿದರೆ ಎರಡು ಗ್ರಾಮಗಳ ಸಂಪರ್ಕಕ್ಕೆ ಸಮಸ್ಯೆ ಯಾಗಲಿದ್ದು, ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಪರಿಶೀಲಿಸುತ್ತೇನೆ
ಸೇತುವೆ ಶಿಥಿಲಗೊಂಡಿರುವುದು ನನ್ನ ಗಮನಕ್ಕೆ ಬಂದಿಲ್ಲ. ಅರಂತೋಡು-ತೊಡಿಕಾನ ಮಧ್ಯೆ ಹರಿಯುವ ಪಯಸ್ವಿನಿ ಹೊಳೆಗೆ ಅರಂತೋಡಿನ ಸಮೀಪ ನಿರ್ಮಿಸಿರುವ ಸೇತುವೆಯನ್ನು ನಾನು ಪರಿಶೀಲಿಸುತ್ತೇನೆ.
– ಹನುಂತರಾಯಪ್ಪ
ಜಿ.ಪಂ. ಎಂಜಿನಿಯರ್ ಇಲಾಖೆಗೆ ಪತ್ರ ಬರೆದಿದ್ದೇವೆ
ಗ್ರಾಮ ಪಂಚಾಯತ್ ವತಿಯಿಂದ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದಿದ್ದೇವೆ. ಸೇತುವೆ ಶಿಥಿಲಗೊಂಡಿರುವ ಬಗ್ಗೆ ಇಲಾಖೆ ಜಾಗೃತವಾಗುವುದು ಒಳಿತು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಮಸ್ಯೆಯಾಗುತ್ತದೆ.
– ಶಿವಾನಂದ ಕುಕ್ಕುಂಬಳ
ಅರಂತೋಡು ಗ್ರಾ.ಪಂ. ಉಪಾಧ್ಯಕ್ಷ -ತೇಜೇಶ್ವರ್ ಕುಂದಲ್ಪಾಡಿ