Advertisement
ಭಾರತೀಯ ವೈದ್ಯಕೀಯ ಜೀವ ರಸಾಯನ ವಿಜ್ಞಾನ ಸಂಘ(ಎಎಂಬಿಐ) ವತಿಯಿಂದ ನಗರದ ದಿ ಲಲಿತ ಮಹಲ್ ಹೋಟೆಲ್ ಆವರಣದಲ್ಲಿ ಆಯೋಜಿಸಿರುವ ಅಂಬಿಕಾನ್-2017 25ನೇ ಬೆಳ್ಳಿಹಬ್ಬದ ವಾರ್ಷಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
Related Articles
Advertisement
ಗಣನೀಯ ಕೊಡುಗೆ: ವಿಶ್ವದಲ್ಲಿ ಜೀವರಸಾಯನ ವಿಜ್ಞಾನ ಕ್ಷೇತ್ರವೂ ಮಾನವಕುಲ ಮತ್ತು ಆಧುನಿಕ ಔಷಧ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದ್ದು, ಇದರ ಪರಿಣಾಮ ಜಗತ್ತಿನಲ್ಲಿ ಹೆಚ್ಚಿನ ನೊಬೆಲ್ ಪ್ರಶಸ್ತಿ ಜೀವರಸಾಯನ ಕ್ಷೇತ್ರಕ್ಕೆ ಲಭಿಸಿದೆ. ಅಲ್ಲದೆ ಜೀವರಸಾಯನಶಾಸ್ತ್ರ ಆರಂಭಿಕ ರೋಗ ನಿರ್ಣಯಕ್ಕೆ ಜೀವಸೆಲೆಯಾಗಿರುವುದರಿಂದ ಜೀವ ರಸಾಯನಶಾಸ್ತ್ರ ಮತ್ತು ಚಿಕಿತ್ಸಾಲಯಗಳು ವೈದ್ಯಕೀಯ ಕ್ಷೇತ್ರದಲ್ಲಿ ಒಗ್ಗೂಡಿ ಕಾರ್ಯನಿರ್ವಹಿಸಬೇಕಿದೆ ಎಂದರು.
ಇದೇ ವೇಳೆ ಭಾರತೀಯ ವೈದ್ಯಕೀಯ ಜೀವ ರಸಾಯನವಿಜ್ಞಾನ ಸಂಘದ ನಿರ್ಗಮಿತ ಅಧ್ಯಕ್ಷೆ ಡಾ.ಪ್ರಜ್ಞಾ ಬಿ.ಡಾಲಿಯಾ ನೂತನ ಅಧ್ಯಕ್ಷೆ ಡಾ.ಭಾರತಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಬಳಿಕ ಅಂಬಿಕಾನ್-2017 ವಾರ್ಷಿಕ ಸಮಾವೇಶದ ಸ್ಮರಣಿಕೆ ಹಾಗೂ ವೈದ್ಯಕೀಯ ಜೀವ ರಸಾಯನಶಾಸ್ತ್ರದಲ್ಲಿ ಗಣಿತಶಾಸ್ತ್ರದ ಗಣನೆಗಳು ಪುಸ್ತಕವನ್ನು ಅತಿಥಿಗಳು ಬಿಡುಗಡೆ ಮಾಡಿದರು.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ರಾಜೀವ್‌ಗಾಂಧಿ ಆರೋಗ್ಯ ವಿವಿ ವಿಶ್ರಾಂತ ಕುಲಪತಿ ಡಾ.ಕೆ.ಎಸ್.ರವೀಂದ್ರನಾಥ್, ಮೈಸೂರು ಮೆಡಿಕಲ್ ಕಾಲೇಜಿನ ಡೀನ್ ಡಾ.ರಾಧಾಮಣಿ, ಡಾ.ವಿ.ಗೋವಿಂದರಾಜು, ಡಾ.ಶಾಂತಿ ಕೆ.ನಾಯ್ಡು, ಡಾ.ಎಂ.ಎನ್.ಸುಮಾ ಇದ್ದರು.
ಪ್ರಸ್ತುತ ಸಂದರ್ಭದಲ್ಲಿ ದೇಶದ ಶೇ.52 ಮಂದಿ ದೈಹಿಕವಾಗಿ ನಿಷ್ಕ್ರಿಯರಾಗಿದ್ದು ದೇಶದಲ್ಲಿ ಹೃದಯಾಘಾತ, ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆಗಳಿಗೆ ತುತ್ತಾಗುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಇನ್ನೂ ಇತ್ತೀಚಿನ ದಿನಗಳಲ್ಲಿ ದೇಶದ ಪ್ರತಿಯೊಬ್ಬರ ಜೀವನಶೈಲಿ ಬದಲಾಗಿರುವ ಪರಿಣಾಮ ಪ್ರತಿ 10 ಮಂದಿಯಲ್ಲಿ ಒಬ್ಬರು ರಕ್ತದೊತ್ತಡ, ಹೃದ್ರೋಗ ಸಮಸ್ಯೆ ಅಥವಾ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ.-ಡಾ.ಸಿ.ಎನ್.ಮಂಜುನಾಥ್, ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ