Advertisement

ಮಾಧ್ಯಮಗಳು ಕೃಷಿಯನ್ನು ನಿರ್ಲಕ್ಷಿಸಿವೆ: ಡಾ. ಸುರೇಶ್‌

10:02 PM Jun 14, 2021 | Team Udayavani |

ತುಮಕೂರು: ಭಾರತದಂತಹ ಕೃಷಿ ಪ್ರಧಾನವಾದರಾಷ್ಟ್ರದಲ್ಲಿ ಮಾಧ್ಯಮಗಳು ಕೃಷಿಯನ್ನು ನಿರ್ಲಕ್ಷಿಸಿವೆ.ಬೇರೆ ರೀತಿಯ ಸುದ್ದಿಗಳಿಗೆ ನೀಡಿದ ಆದ್ಯತೆ ಕೃಷಿಗೂನೀಡಬೇಕಿದೆ ಎಂದು ಮೈಸೂರಿನ ಅಂಕಣ ಬರಹಗಾರಡಾ. ಸುರೇಶ್‌ ಅಮ್ಮಸಂದ್ರ ಅಭಿಪ್ರಾಯಪಟ್ಟರು.

Advertisement

ನಗರದ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನಕೇಂದ್ರದ ವತಿಯಿಂದ ಆನ್‌ಲೈನ್‌ ನಲ್ಲಿ ಆಯೋಜಿಸಿರುವಸರಣಿ ವಿಶೇಷ ಉಪನ್ಯಾಸ ಮಾಲಿಕೆ-11 ಕೃಷಿಪತ್ರಿಕೋದ್ಯಮ ವಿಷಯದ ಕುರಿತು ವರ್ಚುಯಲ್‌ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸನೀಡಿದ ಅವರು, ಸಂವೇದನಾಶೀಲ ಬರಹ ಮತ್ತುಗ್ರಹಿಕೆ ಕೃಷಿ ಪತ್ರಕರ್ತನ ಯಶಸ್ವಿಗೆ ಪೂರಕ ಎಂದರು.ಕೃಷಿ ಸಂಶೋಧನೆಗೆ ಪೂರಕವಾಗಿದೆ. ಜೊತೆಗೆ ರೈತರಿಗೆಕೃಷಿಯ ಹೊಸ ತಂತ್ರಜ್ಞಾನಗಳ ಕುರಿತಾದ ಅರಿವುಅವಶ್ಯಕತೆ ಇದ್ದು, ಕೃಷಿ ಪತ್ರಿಕೋದ್ಯಮದಲ್ಲಿ ಮಹತ್ತರ ಸಾಧನೆಗಳಾಗಿವೆ.

ಅವು ಕೃಷಿ ಸಮುದಾಯಕ್ಕೆತಲುಪುತ್ತಿಲ್ಲ. ಕೃಷಿ ಸಾಹಿತ್ಯ ವರದಿಗಾರ ಆಗಬಯಸುವವರು ಕ್ಷೇತ್ರದ ಅಧ್ಯಯನದ ಜೊತೆಗೆ ರೈತರಬದುಕನ್ನು ಸಮಗ್ರವಾಗಿ ಅಭ್ಯಸಿಸಬೇಕು. ಗ್ರಹಿಸುವದೃಷ್ಟಿಕೋನದಿಂದ ಬರೆಯುವುದನ್ನುರೂಢಿಸಿಕೊಳ್ಳಬೇಕು. ರೈತನಂತೆ ಆಲೋಚಿಸಿಬರೆಯಬೇಕೇ ಹೊರತು ವಿಜ್ಞಾನಿಯಂತಲ್ಲ ಎಂದರು.ಕೃಷಿ ವರದಿಗಾರರಾಗಲು ಕೃಷಿ ಬಗ್ಗೆ ಪ್ರೀತಿ, ಕೃಷಿಯಹಿನ್ನೆಲೆ, ಸಾಮಾನ್ಯ ಜ್ಞಾನ ಇರಬೇಕು ಹಾಗೂ ಕೃಷಿಸುದ್ದಿಯನ್ನು ಗ್ರಹಿಸುವ ಸಾಮರ್ಥ್ಯ ಇರಬೇಕು. ಆಗ ಅತ್ಯುತ್ತಮ ಕೃಷಿ ಪತ್ರಕರ್ತರಾಗಬಹುದು ಎಂದುವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಎಸ್‌ಎಸ್‌ಸಿಎಂಎಸ್‌ ನಿರ್ದೇಶಕ ಡಾ. ಬಿ.ಟಿ ಮುದ್ದೇಶ್‌,ಸಹಾಯಕ ಪ್ರಾಧ್ಯಾಪಕ ಡಾ. ನಾಗೇಂದ್ರ, ಶ್ವೇತಾ ಎಂ.ಪಿ,ಜ್ಯೋತಿ ಸಿ., ಮನೋಜ ಕುಮಾರಿ, ಪೊ›. ರಾಮಲಿಂಗು,ಕಾಲೇಜಿನ ಹಿರಿಯ ವಿದ್ಯಾರ್ಥಿ ಲೋಕೇಶ್‌ ಎಸ್‌.ಕೆ,ಅಶೋಕ್‌, ತುಮಕೂರು, ಬಳ್ಳಾರಿ, ಬೆಂಗಳೂರು,ಗುಲ್ಬರ್ಗಾ, ಕೊಪ್ಪಳದ ಪತ್ರಿಕೋದ್ಯಮ ವಿದ್ಯಾರ್ಥಿಗಳುಹಾಗೂ ಪ್ರಾಧ್ಯಾಪಕರು ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next