Advertisement

ಪುರಭವನದ ಬಾಡಿಗೆ ದರ ಇಳಿಕೆ ಮೇಯರ್‌ಗೆ ಕಲಾವಿದರಿಂದ ಸಮ್ಮಾನ

03:45 AM Jul 04, 2017 | Harsha Rao |

ಮಹಾನಗರ: ಯಕ್ಷಗಾನ, ನಾಟಕ ಮುಂತಾದ ಉಚಿತ ಕಾರ್ಯಕ್ರಮಗಳಿಗೆ ಪುರಭವನದ ಬಾಡಿಗೆಯನ್ನು ಕಡಿತಗೊಳಿಸಿರುವುದನ್ನು ಸ್ವಾಗತಿಸಿರುವ ಮಂಗಳೂರಿನ ಕಲಾವಿದರ ಸಂಘಟನೆಗಳು ಸೋಮವಾರ ಮಂಗಳೂರು ಮೇಯರ್‌ ಕವಿತಾ ಸನಿಲ್‌ ಅವರನ್ನು ಭೇಟಿ ಮಾಡಿ ಸಮ್ಮಾನಿಸಿ ಗೌರವಿಸಿದರು. 

Advertisement

ಗೌರವ ಸ್ವೀಕರಿಸಿ ಮಾತನಾಡಿದ ಮೇಯರ್‌ ಕವಿತಾ ಸನಿಲ್‌ ಅವರು,  ಯಕ್ಷಗಾನ, ನಾಟಕ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಲು ಕಷ್ಟವಾಗುತ್ತಿರುವ ಇಂದಿನ ದಿನಗಳಲ್ಲಿ ಕಲಾವಿದರ ನೋವಿಗೆ ಸ್ಪಂದಿಸಿ ಬಾಡಿಗೆ ದರವನ್ನು ಕಡಿತಗೊಳಿಸಲಾಗಿದೆ. ಕಲಾವಿ ದರು ನಿತ್ಯ ತನ್ನ ಕಲಾ ಚಟುವಟಿಕೆಗಳ ಮೂಲಕ ಕಲಾರಸಿಕರ ಮನಸು ಗೆಲ್ಲುವಲ್ಲಿ ಶ್ರಮಿಸುವಂತಿರಬೇಕು ಎಂದರು.

ಹಿರಿಯ ರಂಗಕರ್ಮಿ ವಿ. ಜಿ. ಪಾಲ್‌ ಮಾತನಾಡಿ ಬಹಳ ದಿನಗಳಿಂದ ಪುರಭವನದ ಬಾಡಿಗೆ ದರವನ್ನು ಕಡಿತಗೊಳಿಸಲು ಕಲಾವಿದರು ವಿವಿಧ ರೀತಿಯಲ್ಲಿ ಮನವಿ ಮಾಡಿದ್ದರು. ಆದರೆ ಸೂಕ್ತ ಸ್ಪಂದನೆಯನ್ನು ಯಾರೂ ನೀಡಿರಲಿಲ್ಲ. ಆದರೆ ಮೇಯರ್‌ ಸ್ಥಾನದಿಂದ ಕವಿತಾ ಸನಿಲ್‌ ಅವರು ದಿಟ್ಟವಾಗಿ ಹಾಗೂ ತುರ್ತಾಗಿ ಬಾಡಿಗೆ ದರವನ್ನು ಕಡಿಮೆ ಮಾಡುವ ಮೂಲಕ ಕಲಾವಿದರ ಬದುಕಿಗೆ ಬೆಳಕು ನೀಡಿದ್ದಾರೆ ಎಂದರು.

ಸನಾತನ ನಾಟ್ಯಾಲಯದ ನಿರ್ದೇಶಕ ಚಂದ್ರಶೇಖರ ಶೆಟ್ಟಿ, ಲಕುಮಿ ತಂಡದ ಸಂಚಾಲಕ ಕಿಶೋರ್‌ ಡಿ. ಶೆಟ್ಟಿ, ಚಾ ಪರ್ಕ ತಂಡದ ಸಂಚಾಲಕ ದೇವದಾಸ ಕಾಪಿಕಾಡ್‌, ಚಲನಚಿತ್ರ ನಿರ್ದೇಶಕ, ಹಿರಿಯ ರಂಗಕರ್ಮಿ ವಿಜಯಕುಮಾರ್‌ ಕೊಡಿಯಾಲ್‌ಬೈಲ್‌, ಪ್ರಮುಖರಾದ ಸರಪಾಡಿ ಅಶೋಕ್‌ ಶೆಟ್ಟಿ ದಿನಕರ ಪಚ್ಚನಾಡಿ, ಶಿವಾನಂದ ಕರ್ಕೇರ, ಮೋಹನ್‌ ಕೊಪ್ಪಳ ಉಪಸ್ಥಿತರಿದ್ದರು. ಕುದ್ರೋಳಿ ಗಣೇಶ್‌ ಅವರು ಜಾದೂವಿನ ಮೂಲಕ ಮೇಯರ್‌ ಕವಿತಾ ಸನಿಲ್‌ ಅವರ ಭಾವಚಿತ್ರವನ್ನು ಪ್ರದಾನ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next