Advertisement
ಒಂದು ಕಡೆಯಿಂದ ವಿಕೆಟ್ ಉರುಳುತ್ತಿದ್ದರೂ ಜವಾಬ್ದಾರಿಯುತ ಆಟದ ಪ್ರದರ್ಶನ ನೀಡಿದ ಮಾರ್ಕ್‌ರಮ್ ಉಳಿದ ಆಟಗಾರರ ಅಮೋಘ ಬೆಂಬಲ ಪಡೆದು ಏಕಾಂಗಿಯಾಗಿ ಹೋರಾಡಿ ದ್ದರಿಂದ ತಂಡವು 47.2 ಓವರ್‌ಗಳಲ್ಲಿ 9 ವಿಕೆಟಿಗೆ 271 ರನ್ ಪೇರಿಸಿ ಜಯಭೇರಿ ಬಾರಿಸಿತು. ಈ ಗೆಲುವಿನಿಂದ ¨ಕ್ಷಿಣ ಆಫ್ರಿಕಾ ತಾನಾಡಿದ ಆರು ಪಂದ್ಯಗಳಲ್ಲಿ ಐದನೇ ಗೆಲುವು ಸಾಧಿಸಿ ಭಾರತ ಜತೆ ಒಟ್ಟು 10 ಅಂಕ ಗಳಿಸಿತು. ಆದರೆ ಉತ್ತಮ ರನ್‌ಧಾರಣೆಯ ಆಧಾರದಲ್ಲಿ ದಕ್ಷಿಣ ಆಫ್ರಿಕಾ ಅಗ್ರಸ್ಥಾನಕ್ಕೇರಿತು.
Related Articles
ಮಾರ್ಕ್‌ರಮ್ ಔಟಾದ ವೇಳೆ ತಂಡ ಗೆಲ್ಲಲು 21 ರನ್ ಗಳಿಸಬೇಕಾಗಿತ್ತು. ಆದರೆ ಬಹಳಷ್ಟು ಓವರ್ ಬಾಕಿ ಉಳಿದ ಕಾರಣ ತಂಡದ ಬಾಲಂಗೋಚಿಗಳು ಎಚ್ಚರಿಕೆಯಿಂದ ಆಡಿ ತಂಡಕ್ಕೆ ಅದ್ಭುತ ಗೆಲುವು ತಂದುಕೊಟ್ಟರು.
Advertisement
ಬಿಗು ದಾಳಿ ಸಂಘಟಿಸಿದ ಶಾಹೀನ್ ಶಾ ಅಫ್ರಿದಿ 45 ರನ್ನಿಗೆ ಮೂರು ವಿಕೆಟ್ ಪಡೆದರೆ ರವೂಫ್, ಮಿರ್ ಮತ್ತು ವಸೀಮ್ ತಲಾ ಎರಡು ವಿಕೆಟ್ ಉರುಳಿಸಿದರು.
ಬಾಬರ್, ಶಕೀಲ್ ಅರ್ಧಶತಕಗೆಲುವಿನ ನಿರೀಕ್ಷೆಯೊಂದಿಗೆ ಆಡಿದ ಪಾಕಿಸ್ಥಾನ ಬಹಳಷ್ಟು ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸಿತು. ಮೊದಲ ವಿಕೆಟ್ ಬೇಗನೇ ಉರುಳಿದರೂ ನಾಯಕ ಬಾಬರ್ ಆಜಂ ತಂಡವನ್ನು ಆಧರಿಸುವ ಪ್ರಯತ್ನ ಮಾಡಿದರು. ಅವರ ಮತ್ತು ಉಳಿದ ಆಟಗಾರರ ಉತ್ತಮ ಆಟದಿಂದಾಗಿ ತಂಡ ಉತ್ತಮ ಸ್ಥಿತಿಗೆ ತಲಪುವಂತಾಯಿತು. ಹರಿಣಗಳ ಹರಿತವಾದ ದಾಳಿಯನ್ನು ಮೆಟ್ಟಿ ನಿಲ್ಲಲು ಆಜಂ ಮತ್ತು ಸೌದ್ ಶಕೀಲ್ ಸ್ವಲ್ಪ ಮಟ್ಟಿಗೆ ಯಶಸ್ವಿಯಾದರು. ಆಜಂ 65 ಎಸೆತಗಳಿಂದ 50 ರನ್ ಹೊಡೆದರೆ ಶಕೀಲ್ ಎಸೆತಕ್ಕೊಂದು ರನ್ ಗಳಿಸಿ ಅರ್ಧಶತಕ ಪೂರೈಸಿದರು. ಶಾದಾಬ್ ಖಾನ್ ಬಿರುಸಿನ ಆಟ ಆಡಿದ್ದರಿಂದ ಪಾಕಿಸ್ಥಾನದ ಮೊತ್ತ ಏರತೊಡಗಿತು. ಅವರು 36 ಎಸೆತಗಳಿಂದ 43 ರನ್ ಹೊಡೆದರು. ಕೊನೆ ಹಂತದಲ್ಲಿ ಬ್ಯಾಟಿಂಗ್ ಕುಸಿತಕ್ಕೆ ಒಳಗಾದ ಪಾಕಿಸ್ಥಾನ 46.4 ಓವರ್‌ಗಳಲ್ಲಿ 270 ರನ್ನಿಗೆ ಆಲೌಟಾಯಿತು. ಎರಡನೇ ಪಂದ್ಯವನ್ನಾಡಿದ ಎಡಗೈ ಸ್ಪಿನ್ನರ್ ಟಬ್ರೇಜ್ ಶಮಿÕ ಗಮನಾರ್ಹ ನೀಡಿ ಪಾಕಿಸ್ಥಾನದ ಕುಸಿತಕ್ಕೆ ಕಾರಣರಾದರು. 60 ರನ್ನಿಗೆ ನಾಲ್ಕು ವಿಕೆಟ್ ಕಿತ್ತು ದಕ್ಷಿಣ ಆಫ್ರಿಕಾ ಮೇಲುಗೈ ಸಾಧಿಸುವಂತೆ ಮಾಡಿದರು. ಅವರಿಗೆ ಉತ್ತಮ ಬೆಂಬಲ ನೀಡಿದ ಮಾರ್ಕೊ ಜಾನ್ಸೆನ್ 43 ರನ್ನಿಗೆ 3 ವಿಕೆಟ್ ಪಡೆದರೆ ಗೇರಾಲ್ಡ್ ಕೋಟಿj 42 ರನ್ನಿಗೆ 2 ವಿಕೆಟ್ ಹಾರಿಸಿದರು.
ಮೇಡನ್ ಓವರೊಂದಿಗೆ ಪಾಕಿಸ್ಥಾನದ ಇನ್ನಿಂಗ್ಸ್ ಆರಂಭಗೊರಡಿತ್ತು. ಜಾನ್ಸೆನ್ ಎಸೆದ ಈ ಓವರಿನಲ್ಲಿ ಅಬುœಲ್ಲ ಮತ್ತು ಇಮಾಮ್ ಯಾವುದೇ ರನ್ ತೆಗೆಯಲಿಲ್ಲ.