Advertisement
ಭಾಲ್ಕಿಯಿಂದ ಘೊರವಾಡಿ ಮಾರ್ಗವಾಗಿ ಹುಮನಾಬಾದಗೆ ತೆರಳುವ ಮುಖ್ಯ ರಸ್ತೆ ಇದಾಗಿದೆ. ಈ ರಸ್ತೆ ಮೇಲೆ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ವಾಹನಗಳು, ಗೂಡ್ಸ್ ವಾಹನಗಳು, ಬೈಕ್, ಕಾರುಗಳು ಸೇರಿದಂತೆ ಸಾಕಷ್ಟು ವಾಹನಗಳಿಗೆ ಈ ರಸ್ತೆಯೇ ಮುಖ್ಯವಾಗಿದೆ.
Related Articles
Advertisement
ಕಳೆದ ತಿಂಗಳಲ್ಲಿ ಶಾಸಕ ಈಶ್ವರ ಖಂಡ್ರೆ ಈ ರಸ್ತೆ ಮಾರ್ಗವಾಗಿ ಓಡಾಡುವಾಗ ಅವಸ್ಥೆ ಕಂಡು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ, ಸಂಬಂಧ ಪಟ್ಟವರು ರಸ್ತೆ ಮೇಲೆ ಮಣ್ಣು ಸುರಿದು ತೇಪೆ ಹಾಕಿದರು. ಆದರೆ ಕೆಲವೇ ದಿನಗಳಲ್ಲಿ ಆ ಮಣ್ಣೆಲ್ಲ ಕೊಚ್ಚಿ ಹೋಗಿ ಮತ್ತೆ ಅದೇ ಅವಸ್ಥೆ ಈ ರಸ್ತೆಗಾಗಿದೆ ಎನ್ನುತ್ತಾರೆ ಸ್ಥಳೀಯರು.
ರಸ್ತೆ ದುರಸ್ತಿಗಾಗಿ ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಆದರೆ ಯಾರೊಬ್ಬರು ಇತ್ತ ನೋಡುತ್ತಿಲ್ಲ. ಯಾವುದಾದರೂ ಅನಾಹುತವಾದರೆ ಮಾತ್ರ ಅಧಿಕಾರಿಗಳು ಇತ್ತ ಗಮನ ಹರಿಸುವರೇ ನೋಡಬೇಕು. ಅಲ್ಲಿಯವರೆಗೆ ಇದರ ಅವಸ್ಥೆ ಇಷ್ಟೇ. -ಸುಭಾಷ ಹುಲಸೂರೆ, ಸ್ಥಳೀಯರು
ಪ್ರತಿವರ್ಷ ಮಳೆಯಾದರೆ ಹಳ್ಳ ತುಂಬಿ ಹರಿಯುತ್ತದೆ. ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆಗುತ್ತದೆ. ಈ ಕುರಿತು ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಬ್ರಿಡ್ಜ್ ಎತ್ತರ ಹೆಚ್ಚಿಸುವುದು ಸೇರಿದಂತೆ ಇದರ ದುರಸ್ತಿಗಾಗಿ ಸಾಕಷ್ಟು ಬಾರಿ ಒತ್ತಾಯಿಸಿದ್ದರೂ ಪ್ರಯೋಜನವಾಗಿಲ್ಲ. -ಗೋವಿಂದರಾವ್ ಬಿರಾದಾರ ಮಾವಿನಹಳ್ಳಿ, ಜೆಡಿಎಸ್ ಮಾಜಿ ತಾಲೂಕು ಅಧ್ಯಕ್ಷ, ಭಾಲ್ಕಿ