Advertisement
ಆರೋಗ್ಯಕ್ಕೆ ಗುಲಾಬಿ!ಸೌಂದರ್ಯಕ್ಕೆ ಗುಲಾಬಿ!
ಅಡುಗೆಯಲ್ಲಿ ಗುಲಾಬಿ!
ಮನೆಯ ಅಂದಕ್ಕೆ ಗುಲಾಬಿ!
ಗುಲಾಬಿ, ಗುಲಾಬಿದಳ, ಗುಲಾಬಿ ಜಲ, ಗುಲಾಬಿ ತೈಲ ಇವುಗಳ ವೈವಿಧ್ಯಮಯ ಬಳಕೆ, ವಿಶಿಷ್ಟ ಉಪಯೋಗ ಅರಿಯೋಣ: ಸ್ವಾಸ್ಥ್ಯ ವರ್ಧನೆಗೆ, ಸೌಂದರ್ಯ ವರ್ಧನೆಗೆ ರುಚಿಕರ ಆಹಾರ ರೂಪದಲ್ಲಿ ಹಾಗೂ ಮನೆಯ ಅಂದ, ಆನಂದ ಹೆಚ್ಚಿಸುವ ಪರಿಯನ್ನು ಅರಿಯೋಣ!
ಗುಲಾಬಿ ಜಲದ ಮ್ಯಾಜಿಕ್ ಈಜಿಪ್ತಿನ ಖ್ಯಾತ ರಾಣಿ ಕ್ಲಿಯೋಪಾತ್ರಳ ಸೌಂದರ್ಯ ಗುಲಾಬಿ ಜಲದಲ್ಲಿ ಅಡಗಿತ್ತು!
ಸಾಮಗಿ: 8-10 ತಾಜಾ ಗುಲಾಬಿ ಹೂಗಳು, 1ರಿಂದ ಒಂದೂವರೆ ಲೀಟರ್‌ನಷ್ಟು ಡಿಸ್ಟಿಲ್ ವಾಟರ್ (ಭಟ್ಟಿ ಇಳಿಸಿದ ಶುದ್ಧ ನೀರು)
Related Articles
ತದನಂತರ ಒಂದು ಮಣ್ಣಿನ ಗಡಿಗೆಯಲ್ಲಿ (ಪಾತ್ರೆ) ಈ ಗುಲಾಬಿದಳಗಳನ್ನು ತೆಗೆದುಕೊಂಡು, ಅದರಲ್ಲಿ ನೀರನ್ನು ಹಾಕಬೇಕು. ತದನಂತರ ಪಾತ್ರೆ ಮುಚ್ಚಿ ಸಣ್ಣ ಉರಿಯಲ್ಲಿ ಬಿಸಿಮಾಡಬೇಕು. ಹೀಗೆ ಬಿಸಿಯಾದ ಗುಲಾಬಿಯ ಪಕಳೆಗಳು ಬಣ್ಣ ಕಳೆದುಕೊಳ್ಳುವವರೆಗೆ ಬಿಸಿ ಮಾಡಬೇಕು. ನಂತರ ಸೋಸಿ, ಗುಲಾಬಿ ಜಲವನ್ನು ಗಾಜಿನ ಬಾಟಲಲ್ಲಿ ಸಂಗ್ರಹಿಸಬೇಕು. ಹೀಗೆ ಮನೆಯಲ್ಲಿಯೇ ಬಹೂಪಯೋಗಿ ಗುಲಾಬಿ ಜಲವನ್ನು ತಯಾರಿಸಬಹುದು.
Advertisement
ಸೌಂದರ್ಯವರ್ಧಕವಾಗಿ ಗುಲಾಬಿ ಜಲಗುಲಾಬಿ ಜಲದ ಟೋನರ್
ಬೇಕಾಗುವ ಸಾಮಗ್ರಿ: 100 ಎಂಎಲ್ ರೋಸ್‌ವಾಟರ್, 1 ಸ್ಪ್ರೆ ಬಾಟಲ್, 10-15 ಹನಿಯಷ್ಟು ರೋಸ್ ಆಯಿಲ್ (ಗುಲಾಬಿ ತೈಲ).
ಇವೆಲ್ಲವನ್ನು ಸ್ಪ್ರೆ ಬಾಟಲಿಯಲ್ಲಿ ಹಾಕಬೇಕು. ಇದನ್ನು ಬೆಳಿಗ್ಗೆ ಹಾಗೂ ಸಂಜೆ ಮುಖಕ್ಕೆ ಹಾಗೂ ಕತ್ತಿಗೆ ಸ್ಪ್ರೆà ಮಾಡಿ ಮಾಲೀಶು ಮಾಡಿದರೆ ಉತ್ತಮ ಸ್ಕಿನ್ ಟೋನರ್ ಆಗಿದೆ! ಮೇಕಪ್ ರಿಮೂವರ್
2 ಚಮಚ ಗುಲಾಬಿ ಜಲಕ್ಕೆ 1 ಚಮಚ ಬಿಸಿ ಮಾಡಿದ ಕೊಬ್ಬರಿ ಎಣ್ಣೆ ಬೆರೆಸಬೇಕು. ಇದನ್ನು ಹತ್ತಿಯ ಉಂಡೆಯಲ್ಲಿ ಅದ್ದಿ, ಮುಖದ ಮೇಕಪ್ ತೆಗೆಯಲು ಉಪಯೋಗಿಸಿದರೆ ಹಿತಕರ. ಬಾಡಿ ಮಾಯಿಶ್ಚರೈಸರ್
20 ಚಮಚ ಬಾದಾಮಿ ತೈಲಕ್ಕೆ 15 ಚಮಚ ಶುದ್ಧ ಗುಲಾಬಿ ಜಲವನ್ನು ಬೆರೆಸಬೇಕು. ಇದನ್ನು ಮೈಗೆ ಲೇಪಿಸಿ ಮಾಲೀಶು ಮಾಡಿದರೆ ತೇವಾಂಶ ಹಿಡಿದಿಟ್ಟುಕೊಂಡು ಚರ್ಮದ ಹೊಳಪು ಮತ್ತು ಸ್ನಿಗ್ಧತೆಯನ್ನು ವರ್ಧಿಸುತ್ತದೆ. ಮೊಡವೆ ನಿವಾರಕ ರೋಸ್‌ವಾಟರ್ ಫೇಸ್‌ಪ್ಯಾಕ್
ಬೇಕಾಗುವ ಸಾಮಗ್ರಿ: 10 ಚಮಚ ಗುಲಾಬಿಜಲ, 10 ಚಮಚ ಕಡಲೆಹಿಟ್ಟು , 2 ಚಮಚ ಕಿತ್ತಳೆ ರಸ, 1/2 ಚಮಚ ಗ್ಲಿಸರಿನ್ ಹಾಗೂ 2 ಚಿಟಿಕೆ ಅರಸಿನ. ವಿಧಾನ: ಇವೆಲ್ಲವನ್ನು ಚೆನ್ನಾಗಿ ಮಿಶ್ರ ಮಾಡಿದಾಗ ಕ್ರೀಮ್‌ನಂತೆ ತಯಾರಾಗುತ್ತದೆ. ದಪ್ಪವಾಗಿದ್ದರೆ ಸ್ವಲ್ಪ ಗುಲಾಬಿ ಜಲ ಬೆರೆಸಿ ತೆಳ್ಳಗೆ ಮಾಡಬೇಕು. ಇದನ್ನು ಮೊಡವೆ ಇರುವ ಭಾಗದಲ್ಲಿ ಲೇಪಿಸಿ 15 ನಿಮಿಷದ ಬಳಿಕ ತೊಳೆಯಬೇಕು. ಅದರ ನಂತರ ಸ್ಕಿನ್ ಟೋನರ್ ಆಗಿ ಗುಲಾಬಿ ಜಲ ಲೇಪಿಸಬೇಕು. ಇದರಿಂದ ಮೊಡವೆ, ಕಲೆ ನಿವಾರಣೆಯಾಗುತ್ತದೆ. ಕಪ್ಪು ವರ್ತುಲ ನಿವಾರಣೆಗೆ
ಗುಲಾಬಿ ಜಲ 3 ಚಮಚದ ಜೊತೆಗೆ 2 ಚಮಚ ಸೌತೇಕಾಯಿ ರಸ, 2 ಚಮಚ ಜೇನು ಬೆರೆಸಿ ಹತ್ತಿಯ ಉಂಡೆಯಲ್ಲಿ ಅದ್ದಿ ಲೇಪಿಸಿದರೆ ಕಣ್ಣಿನ ಸುತ್ತಲಿನ ಕಪ್ಪು ವರ್ತುಲ ನಿವಾರಣೆಯಾಗುತ್ತದೆ. ಡಾ. ಅನುರಾಧಾ ಕಾಮತ್