Advertisement

Asian Games ಎಂಬ ಮಾಯಾಲೋಕ ; ಇಂದು ಸಂಜೆ 5.30ಕ್ಕೆ ಉದ್ಘಾಟನೆ 

11:26 PM Sep 22, 2023 | Team Udayavani |

ಹ್ಯಾಂಗ್‌ಝೂ: “ಏಷ್ಯ ಖಂಡದ ಒಲಿಂಪಿಕ್ಸ್‌’ ಎಂದೇ ಖ್ಯಾತಿ ಪಡೆದಿರುವ ಏಷ್ಯನ್‌ ಗೇಮ್ಸ್‌ನ 19ನೇ ಆವೃತ್ತಿ ಶನಿವಾರ ಚೀನದ ಹ್ಯಾಂಗ್‌ಝೂನಲ್ಲಿ ಅಧಿಕೃತವಾಗಿ ಆರಂಭಗೊಳ್ಳಲಿದೆ. ಭಾರತೀಯ ಕಾಲಮಾನದ ಪ್ರಕಾರ ಸಂಜೆ 5.30ಕ್ಕೆ ಆರಂಭಗೊಳ್ಳಲಿರುವ ಪಥಸಂಚಲನ ದಲ್ಲಿ ಹರ್ಮನ್‌ಪ್ರೀತ್‌ ಸಿಂಗ್‌ ಮತ್ತು ಲವ್ಲಿನಾ ಬೊರ್ಗೊಹೇನ್‌ ತ್ರಿವರ್ಣ ಧ್ವಜಧಾರಿಗಳಾಗಿ ಸಾಗಲಿದ್ದಾರೆ.

Advertisement

“ಬಿಗ್‌ ಲೋಟಸ್‌’ ಎಂದು ಕರೆಯ ಲ್ಪಡುವ, 80 ಸಾವಿರದಷ್ಟು ವೀಕ್ಷಕರ ಸಾಮರ್ಥ್ಯ ಹೊಂದಿರುವ, ಕ್ವಿಂಟಾಂಗ್‌ ನದಿ ತೀರದ “ಹ್ಯಾಂಗ್‌ಝೂ ಒಲಿಂಪಿಕ್‌ ಸ್ಪೋರ್ಟ್ಸ್ ಸೆಂಟರ್‌ ಸ್ಟೇಡಿಯಂ’ನಲ್ಲಿ ಏಷ್ಯನ್‌ ಗೇಮ್ಸ್‌ ಉದ್ಘಾಟನ ಸಮಾ ರಂಭ ರಂಗೇರಿಸಿಕೊಳ್ಳಲಿದೆ. ಚೀನದ ಸಂಸ್ಕೃತಿ-ಸಂಪ್ರದಾಯಯದ ಜತೆಗೆ ಆಧುನಿಕ ಚೀನದ ವೈಭವವಿಲ್ಲಿ ಅನಾವರಣಗೊಳ್ಳಲಿದೆ. ಡಿಜಿಟಲ್‌ ಟಾರ್ಚ್‌ಗಳ ಮಾಯಾಲೋಕ, ತ್ರೀಡಿ ಆ್ಯನಿಮೇಶನ್‌ ವೈವಿಧ್ಯ ಕೂಡ ವರ್ಣ ವೈಭವವನ್ನು ತೆರೆದಿಡಲಿದೆ.

ಮುಖ್ಯ ಅತಿಥಿ
ಚೀನದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಏಷ್ಯನ್‌ ಗೇಮ್ಸ್‌ ಉದ್ಘಾಟನ ಸಮಾರಂಭದ ಮುಖ್ಯ ಅತಿಥಿಯಾಗಿರಲಿದ್ದಾರೆ. ಕಾಂಬೋಡಿಯಾದ ರಾಜ ನೊರೋದೋಮ್‌ ಸಿಹಾಮೋನಿ, ಸಿರಿಯಾದ ಅಧ್ಯಕ್ಷ ಬಾಶರ್‌ ಅಲ್‌ ಅಸದ್‌, ಹಾಂಕಾಂಗ್‌ ಚೀನದ ಮುಖ್ಯಸ್ಥ ಜಾನ್‌ ಕೀ ಕಾ ಶಿಯು, ರಿಪಬ್ಲಿಕ್‌ ಆಫ್ ಕೊರಿಯಾದ ಪ್ರಧಾನಿ ಹಾನ್‌ ಡಕ್‌ ಸೂ ಮೊದಲಾದವರು ಈ ಸಮಾರಂಭದಲ್ಲಿ ಉಪಸ್ಥಿತರಿರುವರು.

Advertisement

Udayavani is now on Telegram. Click here to join our channel and stay updated with the latest news.

Next