ಚೆನ್ನೈ: ವಾರ್ಷಿಕ 8 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರುವವರಿಗೆ ಆದಾಯ ತೆರಿಗೆಯಿಂದ ವಿನಾಯ್ತಿ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿರುವ ಮದ್ರಾಸ್ ಹೈಕೋರ್ಟ್ನ ಮದುರೈ ಪೀಠ, ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೋರಿ ನೋಟಿಸ್ ಜಾರಿ ಮಾಡಿದೆ.
4 ವಾರಗಳ ಒಳಗಾಗಿ ಪ್ರತಿಕ್ರಿಯೆ ನೀಡುವಂತೆ ನ್ಯಾ.ಆರ್.ಮಹದೇವನ್ ಮತ್ತು ನ್ಯಾ. ಸತ್ಯ ನಾರಾಯಣ ಪ್ರಸಾದ್ ನೇತೃತ್ವದ ನ್ಯಾಯಪೀಠ ಸೂಚಿಸಿದೆ.
ಡಿಎಂಕೆಯ ಆಸ್ತಿ ಸಂರಕ್ಷಣಾ ಮಂಡಳಿಯ ಸದಸ್ಯ, 82 ವರ್ಷದ ಕುನ್ನೂರು ಸೀನಿವಾಸನ್ ಎಂಬವರೇ ಅರ್ಜಿದಾರರು.
“ಮೇಲ್ವರ್ಗದಲ್ಲಿರುವಂಥ ಆರ್ಥಿಕವಾಗಿ ದುರ್ಬಲರಿಗೆ (ಇಡಬ್ಲ್ಯುಎಸ್) ಶೇ.10ರಷ್ಟು ಮೀಸಲಾತಿ ಒದಗಿಸಲು ಸುಪ್ರೀಂ ಕೋರ್ಟ್ ಇತ್ತೀಚೆಗೆ ಒಪ್ಪಿಗೆ ನೀಡಿದೆ. ಅದರಂತೆ, ವಾರ್ಷಿಕ 8 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬಗಳನ್ನು ಆರ್ಥಿಕವಾಗಿ ದುರ್ಬಲ ವರ್ಗ ಎಂದು ಪರಿಗಣಿಸಲಾಗಿದೆ. 8 ಲಕ್ಷಕ್ಕಿಂತ ಕಡಿಮೆ ಆದಾಯ ಇರುವವರು ಆರ್ಥಿಕವಾಗಿ ದುರ್ಬಲರು ಎನ್ನುವುದಾದರೆ, 2.50 ಲಕ್ಷ ರೂ.ಗಿಂತ ಹೆಚ್ಚು ಆದಾಯ ಇರುವವರು ಆದಾಯ ತೆರಿಗೆ ಪಾವತಿಸಬೇಕು ಎಂದು ಹೇಳುವುದು ಸರಿಯೇ’ ಎಂಬುದು ಅರ್ಜಿದಾರರ ಪ್ರಶ್ನೆಯಾಗಿದೆ.
Related Articles
ನಿರ್ದಿಷ್ಟ ವರ್ಗವನ್ನು ನಿಗದಿತ ಆದಾಯದ ಆಧಾರದಲ್ಲಿ ಆರ್ಥಿಕವಾಗಿ ದುರ್ಬಲರು ಎಂದು ಪರಿಗಣಿಸುವುದಾದರೆ, ತೆರಿಗೆ ಸಂಗ್ರಹದ ವೇಳೆಯೂ ಇದೇ ಮಾನದಂಡವನ್ನು ಅನುಸರಿಸಬೇಕು ಎನ್ನುವುದು ಅವರ ವಾದ.