Advertisement

ವಿದೇಶಿ ಪ್ರವಾಸಿಗರಿಗೆ ಕಡಿಮೆ ದರಕ್ಕೆ ಟ್ಯಾಕ್ಸಿ ವ್ಯವಸ್ಥೆ

01:14 PM Feb 26, 2017 | Team Udayavani |

ಹುಬ್ಬಳ್ಳಿ: ನಗರದಿಂದ ಹಂಪಿಗೆ ಪ್ರವಾಸಕ್ಕೆಂದು ತೆರಳಲು ವಿದೇಶಿ ದಂಪತಿಯು ಟ್ಯಾಕ್ಸಿ ಮಾಡಲು ಹೋದಾಗ ಬಾಡಿಗೆ ದರ ಹೊಂದಾಣಿಕೆಯಾಗದೆ ಪರದಾಡುತ್ತಿದ್ದಾಗ ಉಪನಗರ ಠಾಣೆಯ ಗಸ್ತು ವಾಹನದ ಪೊಲೀಸರು ಮಧ್ಯಪ್ರವೇಶಿಸಿ, ಕಡಿಮೆ ದರಕ್ಕೆ ಟ್ಯಾಕ್ಸಿ ವ್ಯವಸ್ಥೆ ಮಾಡಿ ಔದಾರ್ಯ ತೋರಿದರು. 

Advertisement

ಇಸ್ರೇಲ್‌ ಮೂಲದ ಲಿವನ್‌ ಬಾರ್ಕ್‌  ಮತ್ತು ಪರ್ನಸ್ಸಾ ದಂಪತಿಯು ಮಗಳೊಂದಿಗೆ ಭಾರತದ ಪ್ರವಾಸ ಕೈಗೊಂಡಿದ್ದಾರೆ. ಶನಿವಾರ ಇವರು ಹಂಪಿಗೆ ಪ್ರವಾಸ ಮಾಡಲೆಂದು ಬಸ್‌ನಲ್ಲಿ ಗೋವಾದಿಂದ ಹುಬ್ಬಳ್ಳಿಯ ಹಳೆ ಬಸ್‌ ನಿಲ್ದಾಣಕ್ಕೆ ಆಗಮಿಸಿದ್ದಾರೆ. ನಂತರ ಇಲ್ಲಿಂದ ಟ್ಯಾಕ್ಸಿ ಮಾಡಿಕೊಂಡು ಹಂಪಿಗೆ ಹೊರಡಲು ಮುಂದಾಗಿದ್ದಾರೆ.

ಅದಕ್ಕಾಗಿ ಈದ್ಗಾ ಮೈದಾನದಲ್ಲಿರುವ ಟ್ಯಾಕ್ಸಿದವರ ಬಳಿ ಬಾಡಿಗೆ ವಿಚಾರಿಸಿದ್ದಾರೆ. ಆದರೆ ಅಲ್ಲಿನ ಟ್ಯಾಕ್ಸಿಯವರು ಹೆಚ್ಚಿನ ದರ ಹೇಳುತ್ತಿದ್ದರಿಂದ ಅತ್ತಿಂದಿತ್ತ ತಿರುಗಾಡುತ್ತಿದ್ದರು. ಇದನ್ನು ಗಮನಿಸಿದ ಉಪನಗರ ಠಾಣೆಯ ಗಸ್ತು ವಾಹನದ ಸಿಬ್ಬಂದಿಯು ಕಡಿಮೆ ದರಕ್ಕೆ ಟ್ಯಾಕ್ಸಿಯೊಂದರ ವ್ಯವಸ್ಥೆ ಮಾಡಿ ಅವರನ್ನು ಹಂಪಿಗೆ ಕಳುಹಿಸಿ ಔದಾರ್ಯ ಮೆರೆದರು.

ಕಳೆದ ಬಾರಿಯೂ ಈ ಠಾಣೆಯ ಸಿಬ್ಬಂದಿಯು ಹಣವಿಲ್ಲದೆ ಪರದಾಡುತ್ತಿದ್ದ ವಿದೇಶಿ ಮಹಿಳೆಗೆ ಆಗ್ರಾಕ್ಕೆ ತೆರಳಲು ರೈಲಿನ ವ್ಯವಸ್ಥೆ ಮಾಡಿ ಕಳುಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next