Advertisement

ಮದರಂಗಿಯಲ್ಲಿ ಪ್ರೀತಿಯ ರಂಗು ಮೂಡಿದೆ…

10:36 AM Dec 26, 2019 | mahesh |

ಮದುವೆಯಲ್ಲಿ ಬಹಳ ಮುಖ್ಯ ಪಾತ್ರ ವಹಿಸುವುದು ಮೆಹಂದಿ. ಹೆಣ್ಣಿನ ಕೈ-ಕಾಲಿಗೆ ಮದರಂಗಿ ಬಿಡಿಸುವ ದಿನವನ್ನು “ಮೆಹಂದಿ ಶಾಸ್ತ್ರ’ದ ಹೆಸರಿನಲ್ಲಿ ಅದ್ಧೂರಿಯಾಗಿ ಆಚರಿಸುವುದುಂಟು. ಮದುವೆಯಾಗುವ ಹುಡುಗನ ಹೆಸರನ್ನು ಮದರಂಗಿಯ ಚಿತ್ತಾರದೊಳಗೆ ಸಣ್ಣದಾಗಿ ಬರೆದು, ಅದನ್ನು ವರನಿಗೆ ಹುಡುಕಲು ಹೇಳುವುದು, ಮದರಂಗಿಯಲ್ಲಿ ವಧು-ವರರ ಚಿತ್ರವನ್ನು ಮೂಡಿಸುವುದು, ಮದುವೆ ಶಾಸ್ತ್ರಗಳನ್ನು ಬಿಂಬಿಸುವ ಚಿತ್ತಾರಗಳು… ಹೀಗೆ ಅನೇಕ ಬಗೆಯ ಚಿತ್ತಾರಗಳು ಟ್ರೆಂಡ್‌ನ‌ಲ್ಲಿವೆ. ಆದರೆ, ಇಲ್ಲೊಬ್ಬಳ ಮದರಂಗಿ ಆಕೆಯ ಪ್ರೇಮ ಕತೆಯನ್ನೇ ಹೇಳಿ ಬಿಡುತ್ತದೆ.

Advertisement

ಕೋಲ್ಕತ್ತಾ ಮೂಲದ ಯುವತಿಯೊಬ್ಬಳು ತನ್ನ ಲವ್‌ಸ್ಟೋರಿಯನ್ನು, ಮದರಂಗಿ ಚಿತ್ತಾರವಾಗಿ ಕೈ ಮೇಲೆ ಮೂಡಿಸಿಕೊಂಡಿದ್ದಾಳೆ. ಅಂಗೈನಲ್ಲಿ, ಹದಿಹರೆಯದ ಹುಡುಗ-ಹುಡುಗಿಯ ಚಿತ್ರವಿದ್ದು, ಅದು ಹದಿನಾರನೇ ವಯಸ್ಸಿನಲ್ಲಿ ಅವರಿಬ್ಬರ ನಡುವೆ ಮೂಡಿದ ಪ್ರೀತಿಯನ್ನು ಬಿಂಬಿಸುತ್ತದೆ. ನಂತರ, ಆಕೆ ನ್ಯೂಯಾರ್ಕ್‌ಗೆ ಹೋಗಿದ್ದು, ಭಾರತದಲ್ಲಿದ್ದ ಹುಡುಗನನ್ನು ಮಿಸ್‌ ಮಾಡಿಕೊಂಡಿದ್ದು, ಕಾಲ-ದೇಶಗಳ ಅಂತರವಿದ್ದರೂ ಅವರ ಪ್ರೀತಿ ಕಿಂಚಿತ್ತೂ ಮುಕ್ಕಾಗದೆ ಉಳಿದಿದ್ದು…ಇವೆಲ್ಲವೂ ಮದರಂಗಿಯ ಚಿತ್ತಾರವಾಗಿ ಕೈ ಮೇಲೆ ಮೂಡಿವೆ. ಪ್ರೀತಿಸಿದವರ ಹೆಸರನ್ನು ಟ್ಯಾಟೂ ಹಾಕಿಸಿಕೊಳ್ಳುವ ಬಹಳಷ್ಟು ಜನರಿದ್ದಾರೆ. ಆದರೆ, ಇಷ್ಟು ಕ್ರಿಯೇಟಿವ್‌ ಆಗಿ ಯೋಚಿಸುವವರ ಸಂಖ್ಯೆ ಕಡಿಮೆಯೇ.

Advertisement

Udayavani is now on Telegram. Click here to join our channel and stay updated with the latest news.

Next