Advertisement

ಪೊಲೀಸರಿಂದ ಅಂಗಡಿಗಳಿಗೆ ಬೀಗ

03:08 PM Apr 23, 2021 | Team Udayavani |

ದೇವನಹಳ್ಳಿ: ಕೋವಿಡ್  ದಿನೇ ದಿನೆ ಹೆಚ್ಚಾಗುತ್ತಿರುವುದರಿಂದ ಜಿಲ್ಲೆಯಲ್ಲಿ ಅಘೋಷಿತಲಾಕ್‌ಡೌನ್‌ ವಾತಾವರಣ ನಿರ್ಮಾಣವಾಗುತ್ತಿದೆ.ರಾಜ್ಯ ಸರ್ಕಾರ ಕೊರೊನಾ ಸೋಂಕಿನನಿಯಂತ್ರಣಕ್ಕಾಗಿ ಕಠಿಣ ನಿಯಮಗಳನ್ನುಜಾರಿಗೊಳಿಸುತ್ತಿದೆ.

Advertisement

ಹೋಟೇಲ್‌, ಬಾರ್‌ ಅಂಡ್‌ರೆಸ್ಟೋರೆಂಟ್‌ ಸೇವೆಗಳ ಮೇಲೆ ನಿಯಂತ್ರಣ ವಿದಿಸಿದೆ.ದೇವಾಲಯಗಳನ್ನು ಬಂದ್‌ ಮಾಡಿಸಿದೆ.ದೇವನಹಳ್ಳಿ ಪಟ್ಟಣದ ಬಜಾರ್‌ ರಸ್ತೆಯಲ್ಲಿರುವಅಂಗಡಿ ಮುಗ್ಗಟ್ಟುಗಳನ್ನು ಪೋಲೀಸರು ಬೀಗಹಾಕಿಸುವುದರ ಮೂಲಕ ಬಂದ್‌ ಮಾಡಿಸಿದರು.ಆದರೂ ಸಹ ಜನ ಎಂದಿನಂತೆ ಓಡಾಡುತ್ತಲೇ ಇದ್ದರು.

ಕೆಲವರು ಮಾಸ್ಕ್ ಅರ್ಧಕ್ಕೆ ಮತ್ತು ಇಲ್ಲದೆ ಯೇಓಡಾಡುತ್ತಿರುವ ದೃಶ್ಯಗಳು ಕಂಡುಬಂದಿದೆ.ಪೊಲೀಸರು ಪೊಲೀಸ್‌ ಇಲಾಖಾ ವಾಹನದಲ್ಲಿಧ್ವನಿವರ್ಧಕ ಮೂಲಕ ಪ್ರತಿಯೊಬ್ಬರು ಕೊರೊನಾತಡೆಗಟ್ಟಲು ಮಾಸ್ಕ್ ಧರಿಸಬೇಕು. ಅಂಗಡಿಮುಗ್ಗಟ್ಟುಗಳನ್ನು ಮುಚ್ಚಬೇಕು ಎಂದು ಮನವಿಮಾಡಿದರು. ಬಟ್ಟೆ ಅಂಗಡಿ, ಆಭರಣ ಅಂಗಡಿ,ಎಲೆಕ್ಟ್ರಾನಿಕ್‌ ಅಂಗಡಿ, ಹಾರ್ಡ್‌ವೇರ್‌, ಸಿಮೆಂಟ್‌ಸೇರಿದಂತೆ ಇತರೆ ಅಂಗಡಿಗಳನ್ನು ಮುಚ್ಚಿಸಿದರು.

ಗ್ರಾಹಕರಿಲ್ಲದೆ ಹೊಟೇಲ್‌ ರೆಸ್ಟೋರೆಂಟ್‌ಗಳುಬಿಕೋ ಎನ್ನುತ್ತಿದ್ದವು. ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿಹೊಟೇಲ್‌ಗ‌ಳಲ್ಲಿ ಗ್ರಾಹಕರು ಪಾರ್ಸೆಲ್‌ತೆಗೆದುಕೊಂಡು ಹೋಗುತ್ತಿದ್ದರು. ಬಾರ್‌ಗಳಲ್ಲಿಅಲ್ಲಿಯೇ ಕುಡಿಯಲು ಬಿಡದೆ, ಪಾರ್ಸಲ್‌ತೆಗೆದುಕೊಂಡು ಹೋಗುತ್ತಿದ್ದರು.

ಹೊಟೇಲ್‌ಉದ್ಯಮ ಕಳೆದ ಲಾಕ್‌ಡೌನ್‌ ಸಂದರ್ಭದಲ್ಲಿ ಆರ್ಥಿಕಸಂಕಷ್ಟದಲ್ಲಿದ್ದವು. ಚೇತರಿಕೆ ಸಂದರ್ಭದಲ್ಲಿಯೇಮತ್ತೂಂದು ಬಾರಿ ಕೊರೊನಾ ಎರಡನೇ ಅಲೆಆರ್ಥಿಕತೆಗೆ ಬ್ರೇಕ್‌ ಹಾಕಿದೆ. ಜನಸಾಮಾನ್ಯರು ಸಹಊಟ, ತಿಂಡಿ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಕೊರೊನಾ ಸೋಂಕು ಹರಡುವಿಕೆಯನ್ನುತಪ್ಪಿಸಲು ಧಾರ್ಮಿಕ ಕೇಂದ್ರಗಳಲ್ಲಿ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಜಿಲ್ಲಾಡಳಿತ ಸೂಚನೆ ನೀಡಿದೆ.

Advertisement

ಜಿಲ್ಲೆಯ ಬಹುತೇಕ ದೇವಾಲಯಗಳು ಬಾಗಿಲುಹಾಕಿವೆ. ಹೂವು, ಹಣ್ಣು ವ್ಯಾಪಾರ ಮಾಡುತ್ತಿದ್ದವರುಖಾಲಿ ಕುಳಿತು ಬಿಕೋ ಎನ್ನುವ ವಾತಾವರಣನಿರ್ಮಾಣವಾಗಿದೆ. ಕೊರೊನಾದಿಂದಾಗಿ ಎಲ್ಲಾಕ್ಷೇತ್ರಗಳಲ್ಲಿಯೂ ಪರಿಣಾಮ ಬೀರಿದ್ದು, ಇಡೀಮನುಕುಲದ ಜೀವನವನ್ನೇ ಹಾಳು ಮಾಡುತ್ತಿರುವಕೊರೊನಾ ವೈರಸ್‌ ತಡೆಗಟ್ಟಲು ಏನೆಲ್ಲಾನಿಯಮಗಳನ್ನು ಎದುರಿಸುವ ಪರಿಸ್ಥಿತಿ ಸಾರ್ವಜನಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಖಾಸಗಿಬಸ್ಸುಗಳಲ್ಲಿ ಸಾಮಾಜಿಕ ಅಂತರವಿಲ್ಲದೆ ಜನರುಕುಳಿತಿರುವ ದೃಶ್ಯಗಳು ಕಂಡುಬಂತು.

Advertisement

Udayavani is now on Telegram. Click here to join our channel and stay updated with the latest news.

Next