Advertisement

ಭಾರತದ ಟಾಪ್‌ 10 ವಿಮಾನ ನಿಲ್ದಾಣಗಳ ಬಗ್ಗೆ ನಿಮಗೆ ಗೊತ್ತೇ?

10:29 AM Oct 15, 2019 | Hari Prasad |

ವಿಮಾನಯಾನ ಎಲ್ಲಾರ ಕನಸು ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೂ ಒಮ್ಮೆಯಾದರೂ ವಿಮಾನಯಾನ ಮಾಡಬೇಕೆಂಬ ಕನಸು ಇರುತ್ತದೆ. ಇದೀಗ ಈ ಕ್ಷೇತ್ರ ಕ್ಷಿಪ್ರಗತಿಯಲ್ಲಿ  ಬೆಳವಣಿಗೆಯಾಗುತ್ತಿದ್ದು, ದೇಶದಲ್ಲಿ ಅತೀ ಹೆಚ್ಚು ಬ್ಯುಸಿಯಾಗಿರುವ ವಿಮಾನ ನಿಲ್ದಾಣಗಳ ಮಾಹಿತಿ ಇಲ್ಲಿದೆ.

Advertisement

1. ದೆಹಲಿ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ


ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ದೆಹಲಿ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, 5106 ಎಕರೆಗಳಲ್ಲಿ  ನಿರ್ಮಾಣವಾಗಿದ್ದು, ದೇಶದ ಅತ್ಯಂತ ಚಟುವಟಿಕೆ ನಿರತ ವಿಮಾನ ನಿಲ್ದಾಣ ಎಂದು ಗುರುತಿಸಿಕೊಂಡಿದೆ. ಕಳೆದ ವರ್ಷ ಇಂಟರ್‌ ನ್ಯಾಷನಲ್‌ ಏರ್‌ಪೋರ್ಟ್ಸ್ ಕೌನ್ಸಿಲ್‌ ನೀಡುವ (ಐಎಸಿ) ಪ್ರಶಸ್ತಿಗೆ ಪಾತ್ರವಾಗಿದೆ. ಇನ್ನೂ ಈ ವಿಮಾನ ನಿಲ್ದಾಣದಿಂದ ಸುಮಾರು 80 ವಿಮಾಣಗಳು ವಿದೇಶಗಳಿಗೆ ಹಾರಾಡುತ್ತಿದ್ದು, 60 ಮಿಲಿಯನ್‌ ರಷ್ಟು  ಪ್ರಯಾಣಿಕರು ಪ್ರಯಾಣ ಇಲ್ಲಿಂದ ಪ್ರಯಾಣ ಬೆಳಿಸಿದ್ದಾರೆ.

2. ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಮುಂಬೈ


ದೇಶದ ವಾಣಿಜ್ಯನಗರಿ ಮುಂಬೈನಲ್ಲಿ  ಸುಮಾರು 1450 ಎಕರೆಗಳಲ್ಲಿ  ಸ್ಥಾಪನೆಯಾಗಿರುವ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಭಾರತದ ಅತಿ ಚಟುವಟಿಕೆ ನಿರತ ವಿಮಾನ ನಿಲ್ದಾಣಗಳ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿದ್ದು, ದೇಶದ ಅತೀ ದೊಡ್ಡ ವಿಮಾಣ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

3. ನೇತಾಜಿ ಸುಭಾಶ್‌ ಚಂದ್ರ ಬೋಸ್‌ ವಿಮಾನ ನಿಲ್ದಾಣ ಕೋಲ್ಕತ್ತಾ


ಸ್ವಾತಂತ್ರ ಹೋರಾಟಗಾರ ನೇತಾಜಿ ಸುಭಾಶ್‌ ಚಂದ್ರ ಬೋಸ್‌ ಅವರ ಸ್ಮರಣಾರ್ಥವಾಗಿ ನಿರ್ಮಾಣವಾಗಿರುವ ಈ ವಿಮಾಣ ನಿಲ್ದಾಣ 2460 ಎಕರೆ ವ್ಯಾಪ್ತಿಯಲ್ಲಿ ಹಬ್ಬಿದೆ. ಹಾಗೇ ಈ ವಿಮಾಣ ನಿಲ್ದಾಣಕ್ಕೆ ಎರಡು ಬಾರಿ ಪ್ರಗತಿಪಥದಲ್ಲಿರುವ ವಿಮಾಣ ನಿಲ್ದಾಣ ಎಂಬ ಪ್ರಶಸ್ತಿ ದೊರೆತಿದೆ.

4.ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು


ಉದ್ಯಾನನಗರಿ ಬೆಂಗಳೂರಿನಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ದೇಶದ ಮೂರನೇ ಅತಿ ದೊಡ್ಡ ಬ್ಯುಸಿ ವಿಮಾನ ನಿಲ್ದಾಣವಾಗಿದೆ. ಬೆಂಗಳೂರು ನಗರದಿಂದ 40 ಕಿ.ಮೀ ದೂರದಲ್ಲಿರುವ ಈ ವಿಮಾಣ ನಿಲ್ದಾಣದಿಂದ ಪ್ರತೀ ವರ್ಷ 27 ಮಿಲಿಯನ್‌ ರಷ್ಟು ಪ್ರಯಾಣಿಕರು ಪಯಾಣ ಕೈಗೊಳ್ಳುತ್ತಿದ್ದಾರೆ.

Advertisement

5. ಚೆನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ


ಬೆಂಗಳೂರಿಗೆ ನಿಕಟ ಪೈಪೋಟಿಯನ್ನು ಒಡ್ಡುತ್ತಿರುವ ಚೆನೈ ದೇಶದ ಅತ್ಯಂತ ಚಟುವಟಿಕೆ ನಿರತ ವಿಮಾನ ನಿಲ್ದಾಣಗಳಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದು, ಕಳೆದ ವರ್ಷ ಈ ವಿಮಾನ ನಿಲ್ದಾಣದಿಂದ 2 ಕೋಟಿ ಯಾತ್ರಿಕರು ಪ್ರಯಾಣಿಸಿದ್ದಾರೆ.

6. ಲೋಕಪ್ರಿಯ ಗೋಪಿನಾಥ್‌ ಬೋರ್ಡೊಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಗುವಾಹಟಿ


ದಕ್ಷಿಣ-ಪೂರ್ವ ಭಾರತದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಪೈಕಿ ಅತೀ ದೊಡ್ಡ  ವಿಮಾನ ನಿಲ್ದಾಣ ಎಂಬ ಬಿರುದನ್ನು ಪಡೆದುಕೊಂಡಿರುವ ಈ ನಿಲ್ದಾಣ 627 ಎಕರೆಗಳಲ್ಲಿ ನಿರ್ಮಾಣವಾಗಿದ್ದು, ಪ್ರತಿವರ್ಷ 12 ಲಕ್ಷ ಪ್ರಯಾಣಿಕರು ಗುವಾಹಟಿ ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣದಿಂದ ಪ್ರಯಾಣ ಬೆಳಸುತ್ತಾರೆ.

7. ಸರ್ದಾರ್‌ ವಲ್ಲಭಾಯ್‌ ಪಟೇಲ್‌ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಅಹಮಾದಾಬಾದ್‌


ಅಹಮದಾಬಾದ್‌ ದೇಶದ ಬಿಡುವಿಲ್ಲದ ವಿಮಾನ ನಿಲ್ದಾಣಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಇಲ್ಲಿನ ಸರ್ದಾರ್‌ ವಲ್ಲಭಾಯ್‌ ಪಟೇಲ್‌ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಳೆದ ವರ್ಷ 9.2 ಮಿಲಿಯನ್‌ ಪ್ರಯಾಣಿಕರು ಪ್ರಯಾಣಿಸಿದ್ದಾರೆ.

8. ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಏರ್ ಪೋರ್ಟ್‌, ಹೈದರಾಬಾದ್‌

ದೇಶದ ಪ್ರಮುಖ ಐಟಿ ನಗರಗಳಲ್ಲಿ ಒಂದಾಗಿರುವ ಹೈದರಬಾದ್‌ ಅಲ್ಲಿ ಈ ವಿಮಾನ ನಿಲ್ದಾಣವನ್ನು ನಿರ್ಮಿಸಿದ್ದು, 18.2 ಮಿಲಿಯನ್‌ ಪ್ರಯಾಣಿಕರನ್ನು ನಿರ್ವಹಿಸುವ ಮೂಲಕ ಅತ್ಯಂತ ಬ್ಯುನಿ ನಿಲ್ದಾಣಗಳ ಪೈಕಿ ರಾಜೀವ್‌ ಗಾಂಧಿ ವಿಮಾನ ನಿಲ್ದಾಣ ಆರನೇ ಸ್ಥಾನವನ್ನು ಪಡೆದುಕೊಂಡಿದೆ.

9. ಪುಣೆ ವಿಮಾನ ನಿಲ್ದಾಣ


1939 ರಲ್ಲಿ ಸ್ಥಾಪನೆಯಾದ ಈ ವಿಮಾಣ ನಿಲ್ದಾಣ ದೇಶದ ಅತ್ಯಂತ ಚಟುವಟಿಕೆ ನಿರತ ಅಂತರಾಷ್ಟ್ರೀಯ ದರ್ಜೆಯ ವಿಮಾನ ನಿಲ್ದಾಣಗಳ ಪೈಕಿ ಸ್ಥಾನ ಪಡೆದುಕೊಂಡಿದ್ದು, ಕಳೆದ ವರ್ಷ ಪುಣೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 7 ಮಿಲಿಯನ್‌ ಮಂದಿ ಯಾತ್ರಿಕರು ಪಯಣ ಕೈಗೊಂಡಿದ್ದಾರೆ.

10. ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ನಾಗ್ಪುರ


ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಈ ವಿಮಾನ ನಿಲ್ದಾಣ ಬರೋಬ್ಬರಿ 1355 ಎಕರೆ ವ್ಯಾಪ್ತಿಯಲ್ಲಿ ನಿರ್ಮಾಣವಾಗಿದೆ. ಇಲ್ಲಿಂದ 2 ಅಂತಾರಾಷ್ಟ್ರೀಯ ಮತ್ತು 5 ದೇಶೀ ವಿಮಾನಗಳಲ್ಲಿ ಪ್ರತೀದಿನ 4 ಸಾವಿರ ಪ್ರಯಾಣಿಕರು ಪ್ರಯಾಣಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next