Advertisement

ಮೃಗಾಲಯದ ಸಿಂಹಿಣಿ ರನಿತಾ ಸಾವು 

01:14 PM Dec 29, 2017 | |

ಮೈಸೂರು: ಮೃಗಾಲಯದ ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಗುಜರಾತ್‌ನ ಜುನಾಗಡ ನಗರದ ಸಕ್ಕರ್‌ಭಾಗ್‌ ಮೃಗಾಲಯದಿಂದ ತರಿಸಲಾಗಿದ್ದ ಭಾರತೀಯ ಸಿಂಹಿಣಿ ರನಿತಾ ಸಾವನ್ನಪ್ಪಿದೆ.

Advertisement

ಕಳೆದ ಅ.26ರಂದು ಜೊತೆಗಾರ ಭಾರತೀಯ ಗಂಡು ಸಿಂಹ ಕಾದಾಡಿದ ಸಂದರ್ಭದಲ್ಲಿ ರನಿತಾ ಳ ಎಡ-ಬಲ ಭುಜಗಳ ಭಾಗದಲ್ಲಿ ಸಣ್ಣಪುಟ್ಟ ಗಾಯಗಳಾಗಿತ್ತು. ಇದರಿಂದ ಅ.27ರಂದು ಆಹಾರ ಸೇವನೆಗೆ ನಿರಾಸಕ್ತಿ ತೋರಿಸಿತ್ತು, ಕೂಡಲೇ ರನಿತಾಳಿಗೆ ಚಿಕಿತ್ಸೆ ನೀಡಲಾಯಿತು.

ರಕ್ತಪರೀಕ್ಷೆ ಮಾಡಿದಾಗ ಸಾಮಾನ್ಯ ಸೋಂಕು ಇರುವುದು ಕಂಡುಬಂದ ಹಿನ್ನೆಲೆಯಲ್ಲಿ ಅಗತ್ಯ ಚಿಕಿತ್ಸೆ ನೀಡಲಾಯಿತು. ಆದರೂ ರನಿತಾಳ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬರಲಿಲ್ಲ. ಈ ಹಿನ್ನೆಲೆಯಲ್ಲಿ ಸಿಂಹಿಣಿ ರಕ್ತ ಮತ್ತು ಅಂಗಾಂಗಗಳ ಮಾದರಿಯನ್ನು ಹೈದ್ರಾಬಾದ್‌ನ ಸಿಸಿಎಂಬಿ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದ್ದು, ಅಲ್ಲಿಂದ ವರದಿ ಬರಬೇಕಿದೆ.

ಈ ಮಧ್ಯೆ ತಜ್ಞರನ್ನು ಕರೆಸಿ ಸಿಂಹಿಣಿಯನ್ನು ಪರೀಕ್ಷೆಗೊಳಪಡಿಸಲಾಯಿತಾದರೂ ಹಿಂದಿನ ಕಾಲುಗಳು ಪಾರ್ಶ್ವವಾಯು ಪೀಡಿತವಾಗಿದ್ದರಿಂದ ನಡೆಯಲಾಗದ ಸ್ಥಿತಿ ತಲುಪಿ, ಕಳೆದ ಒಂದು ವಾರದಿಂದ ಆಹಾರ ಸೇವನೆ ತ್ಯಜಿಸಿ, ಚೇತರಿಸಿಕೊಳ್ಳದ ರನಿತಾ ಬುಧವಾರ ಸಂಜೆ ಮೃತಪಟ್ಟಿದೆ ಎಂದು ಶ್ರೀಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ಅಧಿಕಾರಿ ರವಿಶಂಕರ್‌ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next