Advertisement

ಹೊಸ ಶಿಕ್ಷಣ ನೀತಿ ಸುಳ್ಳಿನ ದಂತಕತೆ

06:31 PM Aug 10, 2022 | Team Udayavani |

ಕಲಬುರಗಿ: ರಾಷ್ಟ್ರದಲ್ಲಿ ಜಾರಿಗೆ ತಂದಿರುವ ಹೊಸ ಶಿಕ್ಷಣ ನೀತಿ ವಿರೋಧಿಸಿ ಅಖೀಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಷ್ಟ್ರ ಸಮಿತಿಯ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು “ಅಖೀಲ ಭಾರತ ಪ್ರತಿಭಟನಾ ದಿನ’ ಅಂಗವಾಗಿ ಇತ್ತೀಚೆಗೆ ಹೋರಾಟ ನಡೆಸಿದರು.

Advertisement

ಈ ವೇಳೆ ಮಾತನಾಡಿದ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ರಾಮಣ್ಣ ಎಸ್‌. ಇಬ್ರಾಹಿಂಪುರ, ಎನ್‌ಇಪಿ-2020 ನೀತಿಯ ಶ್ರೇಷ್ಠತೆ ಶಿಕ್ಷಣದಲ್ಲಿ ಐತಿಹಾಸಿಕ ಕ್ರಾಂತಿ ಎಂಬಂತೆ ಹೆಣೆದ ಸುಳ್ಳಿನ ದಂತಕತೆಗಳ ಭಾಗವಾಗಿದೆ. ಕೇಂದ್ರ ಸರಕಾರ ಹೊಸ ನೀತಿ ಮೂಲಭೂತವಾಗಿ ಎಲ್ಲರಿಗೂ ಶಿಕ್ಷಣ ದೊರಕಿಸುವಂತೆ ಇರಬೇಕು. ಆದರೆ ಈಗಾಗಲೇ ಬಂದಿರುವ ಮತ್ತು ಬರುತ್ತಿರುವ ಶಿಕ್ಷಣ ನೀತಿಗಳು ದೇಶದ ಬಹುಸಂಖ್ಯಾತ ಜನಗಳಿಗೆ ಶಿಕ್ಷಣದ ಬಾಗಿಲುಗಳು ಮುಚ್ಚುವ ನೀತಿಗಳಾಗಿವೆ. ಎನ್‌.ಇ.ಪಿ-2020ರ ಶಬ್ದಾಡಂಭರದ ಡಾಕ್ಯುಮೆಂಟ್‌ ಓದಿದಾಗ ಹಲವು ವೈರುಧ್ಯಗಳಿಂದ ಕೂಡಿರುವುದು ಕಾಣುತ್ತದೆ. ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಉನ್ನತ ಶಿಕ್ಷಣ ಸಚಿವರು ಯಾವುದೇ ಚರ್ಚೆ, ಸಂವಾದಗಳನ್ನು ಮಾಡದೇ, ಅನುಷ್ಠಾನದ ರೂಪುರೇಷೆಗಳನ್ನು ರೂಪಿಸದೇ ಮತ್ತು ಪೂರ್ವ ತಯಾರಿಯಿಲ್ಲದೇ ಕೋವಿಡ್‌ ಸಂಕಷ್ಟ ಕಾಲದಲ್ಲಿ ಏಕಾಏಕಿ ರಾಜ್ಯದ ಉನ್ನತ ಶಿಕ್ಷಣದ ಮೇಲೆ ಎನ್‌ಇಪಿ-2020 ಹೇರಿದರು ಎಂದರು.

ಎಐಎಸ್‌ಇಸಿ ಜಿಲ್ಲಾ ಮುಖಂಡರಾದ ಅಶ್ವಿ‌ನಿ ಮಾತನಾಡಿ, ಎನ್‌ಇಪಿ-2020 ನೀತಿಯು ಶಿಕ್ಷಣ ವಿರೋಧಿ, ವಿದ್ಯಾರ್ಥಿ ವಿರೋಧಿಯಾದ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಎಐಎಸ್‌ಇಸಿ ಜಿಲ್ಲಾ ಸಮಿತಿಯ ಸದಸ್ಯರಾದ ವಿಶಾಲಾಕ್ಷಿ ಪಾಟೀಲ್‌, ಜಾನಕಿ ಎಸ್‌. ಗುದ್ದಿ, ಶಿವುಕುಮಾರ್‌ ಕುಸಾಳೆ, ವಿಜಯಾ ಮುಂತಾದವರು ಪಾಲ್ಗೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next