Advertisement

18ಕ್ಕೆ ತರಗತಿ ಬಹಿಷ್ಕರಿಸಲು ಉಪನ್ಯಾಸಕರ ನಿರ್ಧಾರ

01:23 AM Feb 10, 2019 | Team Udayavani |

ಬೆಂಗಳೂರು: ‘ಸಮಾನ ಕೆಲಸಕ್ಕೆ ಸಮಾನ ವೇತನ’ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಉಪನ್ಯಾಸಕರ ಒಕ್ಕೂಟ, ಫೆ.18ರಂದು ರಾಜ್ಯಾದ್ಯಂತ ತರಗತಿಗಳನ್ನು ಬಹಿಷ್ಕರಿಸಿ ಹೋರಾಟ ನಡೆಸಲು ನಿರ್ಧರಿಸಿದೆ ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ಆರ್‌.ಡಿ. ಚಲವಾದಿ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯುಜಿಸಿ ನಿಯಮಾವಳಿ ಪ್ರಕಾರ ಉಪನ್ಯಾಸಕರಿಗೆ ತಿಂಗಳಿಗೆ 50 ಸಾವಿರ ರೂ.ವೇತನ ನೀಡಬೇಕು. ಆದರೆ, ಇದುವ ರೆಗೂ ಯುಜಿಸಿ ರೂಪಿಸಿರುವ ನಿಯಮವನ್ನು ಸರ್ಕಾರ ಪಾಲನೆ ಮಾಡಿಲ್ಲ. ಆ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡು ವವರೆಗೂ ಸರ್ಕಾರ ಖಾಯಂ ಉಪನ್ಯಾಸಕ ರನ್ನು ನೇಮಿಸಲು ಅಧಿಸೂಚನೆ ಹೊರಡಿಸಬಾ ರದೆಂದು ಒತ್ತಾಯಿಸಿದರು. ಯುಜಿಸಿ ಈ ಹಿಂದೆ ಪದವಿ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾ ಸಕರಿಗೆ 1 ಪಿರಿಯಡ್‌ಗೆ 1 ಸಾವಿರ ರೂ. ನೀಡಲು ಆದೇಶ ಮಾಡಿತ್ತು. ಆದರೆ, ಸರ್ಕಾರ ಈಗ ಪದವಿ ಪೂರ್ವ ಕಾಲೇಜು ಅತಿಥಿ ಉಪನ್ಯಾ ಸಕರಿಗೆ 13 ಸಾವಿರ ರೂ.ಮತ್ತು ಸ್ನಾತಕೋತ್ತರ ಪದವಿಧರರಿಗೆ 11 ಸಾವಿರ ರೂ.ನೀಡುತ್ತಿದೆ. ಯುಜಿಸಿ ನಿಯಮಗಳನ್ನು ಉಲ್ಲಂಘಿಸುತ್ತಿರು ವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next