Advertisement

ಸತತ ಗೆಲುವಿನ ಸರದಾರರಿವರು

12:14 AM May 15, 2023 | Team Udayavani |

ಬೆಂಗಳೂರು: 93ರ ಹರೆಯದ ಶಾಮನೂರು ಶಿವಶಂಕರಪ್ಪ ಆರನೇ ಬಾರಿಗೆ ವಿಧಾನಸಭೆ ಪ್ರವೇಶಿ ಸುತ್ತಿದ್ದು ಸದನದ ಅತ್ಯಂತ ಹಿರಿಯ ಶಾಸಕರಾಗಿದ್ಧಾರೆ. ಜನತಾ ಪರಿವಾರ ಮೂಲದ, ಸದ್ಯ ಕಾಂಗ್ರೆಸ್‌ನಲ್ಲಿರುವ ಸಿದ್ದರಾಮಯ್ಯ, ಆರ್‌. ವಿ. ದೇಶಪಾಂಡೆ 9ನೇ ಬಾರಿಗೆ ವಿಧಾನ ಸಭೆ ಮೆಟ್ಟಿಲೇರುತ್ತಿದ್ದಾರೆ. ಒಟ್ಟು 101 ಶಾಸಕರು ಮೂರಕ್ಕಿಂತ ಹೆಚ್ಚು ಬಾರಿ ವಿಧಾನ ಸಭೆಯ ಸದಸ್ಯರಾಗುತ್ತಿದ್ದಾರೆ.

Advertisement

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌, ಬಿಟಿಎಂ ಲೇ ಔಟ್‌ನ ಶಾಸಕ ರಾಮಲಿಂಗಾರೆಡ್ಡಿ ಎಂಟನೇ ಸಲ ಶಾಸಕ ರಾಗಿ ಆಯ್ಕೆಯಾಗಿದ್ದಾರೆ. ಇನ್ನು ಗೋಕಾಕ್‌ನ ರಮೇಶ್‌ ಜಾರಕಿಹೊಳಿ, ಶಿರಾದ ಟಿ. ಬಿ. ಜಯಚಂದ್ರ, ಪದ್ಮನಾಭ ನಗರದ ಆರ್‌. ಅಶೋಕ್‌ ಏಳನೇ ಬಾರಿ ಗೆದ್ದಿದ್ದಾರೆ.

ಕಾಂಗ್ರೆಸ್‌ನ ಕೊರಟಗೆರೆ ಶಾಸಕ ಡಾ| ಜಿ. ಪರಮೇಶ್ವರ್‌, ಬಬಲೇಶ್ವರದ ಎಂ. ಬಿ. ಪಾಟೀಲ್‌, ಸರ್ವಜ್ಞ ನಗರದ ಕೆ. ಜೆ. ಜಾರ್ಜ್‌, ಬ್ಯಾಟರಾಯನಪುರದ ಕೃಷ್ಣ ಬೈರೇಗೌಡ, ಗಾಂಧಿ ನಗರದ ದಿನೇಶ್‌ ಗುಂಡೂ ರಾವ್‌ ಸಹಿತ 16 ಮಂದಿ ಆರನೇ ಬಾರಿ ವಿಧಾನ ಸಭೆಯಲ್ಲಿ ಕೂರುತ್ತಿದ್ದಾರೆ.

ಉಳಿದಂತೆ ರಾಮನಗರ/ಚನ್ನಪಟ್ಟಣದಿಂದ ಕುಮಾರಸ್ವಾಮಿ, ತೀರ್ಥಹಳ್ಳಿ ಆರಗ ಜ್ಞಾನೇಂದ್ರ, ಚಾಮುಂಡೇಶ್ವರಿಯಿಂದ ಜಿ. ಟಿ. ದೇವೇಗೌಡ ಸೇರಿದಂತೆ ಒಂಬತ್ತು ಮಂದಿ ಐದನೇ ಬಾರಿ, ಶಿಗ್ಗಾಂವಿಯಿಂದ ಬಸವರಾಜ ಬೊಮ್ಮಾಯಿ, ಅಥಣಿಯಿಂದ ಲಕ್ಷ್ಮಣ ಸವದಿ ಸಹಿತ 37 ಮಂದಿ ನಾಲ್ಕನೇ ಬಾರಿಗೆ ಶಾಸನ ಸಭೆ ಪ್ರವೇಶಿಸಿದ್ದಾರೆ. ಇನ್ನು 32 ಮಂದಿ ಮೂರನೇ ಬಾರಿ ವಿಧಾನಸಭೆ ಮೆಟ್ಟಿಲೇರಿದ್ದಾರೆ.

ಮೂರನೇ ಬಾರಿ
ಚಿಂತಾಮಣಿ – ಡಾ| ಎಂ. ಸಿ. ಸುಧಾಕರ್‌
ಬಾಗೇಪಲ್ಲಿ – ಎಸ್‌. ಎನ್‌. ಸುಬ್ಟಾರೆಡ್ಡಿ
ಇಂಡಿ – ಯಶವಂತರಾಯ ಪಾಟೀಲ
ಗದಗ – ಎಚ್‌. ಕೆ. ಪಾಟೀಲ್‌
ಹು-ಧಾ ಪೂರ್ವ – ಪ್ರಸಾದ ಅಬ್ಬಯ್ಯ
ಚಿಕ್ಕೋಡಿ – ಗಣೇಶ ಹುಕ್ಕೇರಿ
ನಿಪ್ಪಾಣಿ – ಶಶಿಕಲಾ ಜೊಲ್ಲೆ
ರಾಮದುರ್ಗ – ಅಶೋಕ್‌ ಪಟ್ಟಣ
ಬೆಳಗಾವಿ ದಕ್ಷಿಣ – ಅಭಯ ಪಾಟೀಲ್‌
ಹು-ಧಾ ಪಶ್ಚಿಮ – ಅರವಿಂದ ಬೆಲ್ಲದ್‌
ಹಾವೇರಿ – ರುದ್ರಪ್ಪ ಲಮಾಣಿ
ಹಿರೇಕೆರೂರು- ಯು. ಬಿ. ಬಣಕಾರ್‌
ಜೇವರ್ಗಿ – ಡಾ| ಅಜಯ್‌ ಸಿಂಗ್‌
ಚಿತ್ತಾಪುರ – ಪ್ರಿಯಾಂಕ ಖರ್ಗೆ
ಬಿಜಾಪುರ ಸಿಟಿ – ಬಸನಗೌಡ ಪಾಟೀಲ್‌ ಯತ್ನಾಳ್‌
ಸಾಗರ – ಬೇಳೂರು ಗೋಪಾಲಕೃಷ್ಣ
ತುಮಕೂರು ಗ್ರಾಮಾಂತರ – ಸುರೇಶ್‌ ಗೌಡ
ತಿಪಟೂರು – ಕೆ. ಷಡಕ್ಷರಿ
ನಾಗಮಂಗಲ – ಎನ್‌. ಚಲುವರಾಯಸ್ವಾಮಿ
ಮಳವಳ್ಳಿ – ನರೇಂದ್ರ ಸ್ವಾಮಿ
ಶ್ರೀರಂಗಪಟ್ಟಣ -ರಮೇಶ್‌ ಬಂಡಿಸಿದ್ದೇಗೌಡ
ಹೊಳಲ್ಕೆರೆ – ಎಂ. ಚಂದ್ರಪ್ಪ
ಹಿರಿಯೂರು – ಡಿ. ಸುಧಾಕರ್‌
ಚಳ್ಳಕೆರೆ – ಟಿ. ರಘುಮೂರ್ತಿ
ರಾಯಚೂರು – ಡಾ| ಶಿವರಾಜ ಪಾಟೀಲ್‌
ಮಾನ್ವಿ – ಹಂಪಯ್ಯ ನಾಯಕ್‌
ಲಿಂಗಸೂಗೂರು – ಮಾನಪ್ಪ ವಜ್ವಲ್‌
ಕಲಘಟಗಿ – ಸಂತೋಷ್‌ ಲಾಡ್‌
ಶ್ರವಣಬೆಳಗೊಳ – ಸಿ. ಎನ್‌. ಬಾಲಕೃಷ್ಣ
ಹೊನ್ನಾಳಿ – ಡಿ. ಜಿ. ಶಾಂತನಗೌಡ
ಕೊಪ್ಪಳ – ರಾಘವೇಂದ್ರ ಹಿಟ್ನಾಳ
ಕನಕಗಿರಿ – ಶಿವರಾಜ ತಂಗಡಗಿ

Advertisement

ನಾಲ್ಕನೇ ಬಾರಿ
ಔರಾದ್‌ – ಪ್ರಭು ಚವ್ಹಾಣ
ಭಾಲ್ಕಿ – ಈಶ್ವರ ಖಂಡ್ರೆ
ಬೀದರ್‌ – ರಹೀಂ ಖಾನ್‌
ನರಗುಂದ – ಸಿ. ಸಿ. ಪಾಟೀಲ್‌
ರೋಣ – ಜಿ. ಎಸ್‌. ಪಾಟೀಲ
ಅಥಣಿ – ಲಕ್ಷ್ಮಣ ಸವದಿ
ರಾಯಭಾಗ – ದುರ್ಯೋಧನ ಐಹೊಳೆ
ಯಮಕನಮರಡಿ – ಸತೀಶ್‌ ಜಾರಕಿಹೊಳಿ
ಶಿಗ್ಗಾವಿ – ಬಸವರಾಜ ಬೊಮ್ಮಾಯಿ
ಬ್ಯಾಡಗಿ – ಬಸವರಾಜ ಶಿವಣ್ಣನವರ
ಸೇಡಂ – ಡಾ| ಶರಣಪ್ರಕಾಶ್‌ ಪಾಟೀಲ್‌
ಅಫ‌ಜಲಪುರ – ಎಂ. ವೈ. ಪಾಟೀಲ್‌
ಆಳಂದ – ಬಿ. ಆರ್‌. ಪಾಟೀಲ್‌
ಭದ್ರಾವತಿ – ಬಿ. ಕೆ. ಸಂಗಮೇಶ
ಚಾಮರಾಜನಗರ – ಸಿ. ಪುಟ್ಟರಂಗಶೆಟ್ಟಿ
ಚಿಕ್ಕನಾಯಕನಹಳ್ಳಿ – ಸಿ. ಬಿ. ಸುರೇಶ್‌ ಬಾಬು
ಮಧುಗಿರಿ – ಕೆ. ಎನ್‌. ರಾಜಣ್ಣ
ಹೊಸದುರ್ಗ – ಬಿ. ಜಿ. ಗೋವಿಂದಪ್ಪ
ಸುರಪುರ – ರಾಜಾ ವೆಂಕಟಪ್ಪ
ಅರಸಿಕೆರೆ – ಶಿವಲಿಂಗೇಗೌಡ
ಅರಕಲಗೂಡು – ಎ. ಮಂಜು
ಬಳ್ಳಾರಿ ಗ್ರಾಮೀಣ – ಬಿ. ನಾಗೇಂದ್ರ
ಸಂಡೂರು – ಈ. ತುಕಾರಾಂ
ಯಲಹಂಕ – ಎಸ್‌.ಆರ್‌.ವಿಶ್ವನಾಥ್‌
ಕೆ. ಆರ್‌. ಪುರ – ಭೈರತಿ ಬಸವರಾಜು
ರಾಜರಾಜೇಶ್ವರಿ ನಗರ – ಮುನಿರತ್ನ
ಬೆಂಗಳೂರು ದಕ್ಷಿಣ – ಎಂ.ಕೃಷ್ಣಪ್ಪ
ಶಾಂತಿನಗರ – ಎನ್‌.ಎ.ಹ್ಯಾರಿಸ್‌
ಚಾಮರಾಜಪೇಟೆ – ಜಮೀರ್‌ ಅಹಮ್ಮದ್‌ ಖಾನ್‌
ವಿಜಯನಗರ – ಎಂ.ಕೃಷ್ಣಪ
ಬೊಮ್ಮನಹಳ್ಳಿ – ಸತೀಶ್‌ ರೆಡ್ಡಿ
ಬಸವನಗುಡಿ – ರವಿ ಸುಬ್ರಹ್ಮಣ್ಯ
ಯಶವಂತಪುರ – ಎಸ್‌.ಟಿ.ಸೋಮಶೇಖರ್‌
ಮಲ್ಲೇಶ್ವರ – ಡಾ|ಸಿ.ಎನ್‌.ಅಶ್ವತ್ಥ್ ನಾರಾಯಣ
ಮಹಾಲಕ್ಷ್ಮಿ ಲೇ ಔಟ್‌ – ಕೆ.ಗೋಪಾಲಯ್ಯ
ಸಿ. ವಿ. ರಾಮನ್‌ ನಗರ – ಎಸ್‌.ರಘು
ಕಾರ್ಕಳ – ಸುನಿಲ್‌ ಕುಮಾರ್‌

ಐದನೇ ಬಾರಿ
ರಾಮನಗರ/ಚನ್ನಪಟ್ಟಣ – ಕುಮಾರಸ್ವಾಮಿ
ಕಾಗವಾಡ – ರಾಜು ಕಾಗೆ
ತೀರ್ಥಹಳ್ಳಿ – ಆರಗ ಜ್ಞಾನೇಂದ್ರ
ಗುಬ್ಬಿ – ಎಸ್‌. ಆರ್‌. ಶ್ರೀನಿವಾಸ್‌
ಮೊಳಕಾಲ್ಮೂರು – ಎನ್‌. ವೈ. ಗೋಪಾಲಕೃಷ್ಣ
ಶಹಾಪುರ – ಶರಣಬಸಪ್ಪಗೌಡ ದರ್ಶನಾಪುರ
ಸಿಂಧನೂರು – ಹಂಪನ ಗೌಡ ಬಾದರ್ಲಿ
ಚಾಮುಂಡೇಶ್ವರಿ – ಜಿ. ಟಿ. ದೇವೇ ಗೌಡ
ಮಾಗಡಿ – ಎಚ್‌. ಸಿ. ಬಾಲಕೃಷ್ಣ
ಮಂಗಳೂರು – ಯು.ಟಿ. ಖಾ ದ ರ್‌

ಆರನೇ ಬಾರಿ
ಮುದ್ದೇಬಿಹಾಳ – ಸಿ. ಎಸ್‌. ನಾಡಗೌಡ
ಬಸವನಬಾಗೇವಾಡಿ -ಶಿವಾನಂದ ಪಾಟೀಲ
ಬಬಲೇಶ್ವರ – ಎಂ. ಬಿ. ಪಾಟೀಲ
ಅರಭಾವಿ – ಬಾಲಚಂದ್ರ ಜಾರಕಿಹೊಳಿ
ಕೊರಟಗೆರೆ – ಜಿ. ಪರಮೇಶ್ವರ
ನರಸಿಂಹರಾಜ – ತನ್ವೀರ್‌ ಸೇs…
ತೀ ನರಸೀಪುರ -ಎಚ್‌. ಸಿ. ಮಹದೇವಪ್ಪ
ಪಿರಿಯಾಪಟ್ಟಣ – ಕೆ. ವೆಂಕಟೇಶ್‌
ಹೊಳೆನರಸೀಪುರ – ಎಚ್‌. ಡಿ. ರೇವಣ್ಣ
ದಾವಣಗೆರೆ ದಕ್ಷಿಣ – ಶಾಮನೂರು ಶಿವಶಂಕರಪ್ಪ
ದಾವಣಗೆರೆ ಉತ್ತರ – ಮಲ್ಲಿಕಾರ್ಜುನ
ಯಲಬುರ್ಗ – ಬಸವರಾಜ ರಾಯರೆಡ್ಡಿ
ಗಾಂಧಿನಗರ – ದಿನೇಶ್‌ ಗುಂಡೂರಾವ್‌
ರಾಜಾಜಿನಗರ – ಸುರೇಶ್‌ ಕುಮಾರ್‌
ಸರ್ವಜ್ಞನಗರ – ಕೆ.ಜೆ.ಜಾರ್ಜ್‌
ಬ್ಯಾಟರಾಯನಪುರ – ಕೃಷ್ಣಭೈರೇಗೌಡ

ಏಳನೇ ಬಾರಿ
ಗೋಕಾಕ್‌- ರಮೇಶ್‌ ಜಾರಕಿಹೊಳಿ
ಶಿರಾ – ಟಿ. ಬಿ. ಜಯಚಂದ್ರ
ಪದ್ಮನಾಭನಗರ – ಆರ್‌. ಅಶೋಕ್‌

ಎಂಟನೇ ಬಾರಿ
ಕನಕಪುರ-ಡಿ.ಕೆ.ಶಿವಕುಮಾರ್‌
ಬಿಟಿಎಂ ಲೇ ಔಟ್‌ – ರಾಮಲಿಂಗಾರೆಡ್ಡಿ

9ನೇ ಬಾರಿ
ವರುಣ – ಸಿದ್ದರಾಮಯ್ಯ
ಹಳಿಯಾಳ – ಆರ್‌. ವಿ. ದೇಶಪಾಂಡೆ

Advertisement

Udayavani is now on Telegram. Click here to join our channel and stay updated with the latest news.

Next