Advertisement
ತಾಲೂಕಿನ ಮುತ್ತಿನಮುಳಸೋಗೆ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ರಾಜ್ಯದಲ್ಲಿ ಬಿಜೆಪಿ ಈಗಾಗಲೇ ಗೆದ್ದಾಗೋಯ್ತು, ಜೇಬಲ್ಲಿ 150 ಸೀಟು ಇದೆ. ಮತದಾರರನ್ನು ಜೇಬಿಗೆ ಹಾಕಿಕೊಂಡಿದ್ದೇನೆ ಎಂದು ಯಡಿಯೂರಪ್ಪ ಓಡಾಡ್ತಾವೆ° ಎಂದು ಯಡಿಯೂರಪ್ಪರ ಹಾವಭಾವವನ್ನು ಪ್ರದರ್ಶಿಸಿ ಟೀಕಿಸಿದರು.
Related Articles
Advertisement
ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನೇ ಹಾಕಲಿಲ್ಲ. ನಂಜನಗೂಡು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನನಗೂ ಸಿದ್ದರಾಮಯ್ಯಗೂ ಯುದ್ಧ ಎಂದು ಹೇಳಿದರೆ, ಯಡಿಯೂರಪ್ಪ ನಾವೀಗಾಗಲೇ ಗೆದ್ದಾಯ್ತು ವಿಜಯೋತ್ಸವ ಆಚರಣೆಗೆ ಹೋಗುತ್ತಿದ್ದೇವೆ ಎಂದಿದ್ದರು,
ಆದರೆ, ನಾನು ಯಾರನ್ನೂ ವೈಯಕ್ತಿಕ ಟೀಕೆ ಮಾಡಲಿಲ್ಲ. ನಿಮ್ಮ ಎಲ್ಲ ಕೆಲಸ ಮಾಡಿದ್ದೇನೆ. ಗೆಯ್ಯೋ ಎತ್ತಿಗೆ ಹುಲ್ಲು ಹಾಕಿ, ಕಳ್ಳ ಎತ್ತಿಗೆ ಹುಲ್ಲು ಹಾಕಬೇಡಿ ಎಂದಷ್ಟೇ ನಾನು ಕೇಳಿದ್ದು, ಯಡಿಯೂರಪ್ಪ ಉಪ ಚುನಾವಣೆಗಾಗಿ ಒಂದು ತಿಂಗಳು ಕ್ಯಾಂಪ್ ಹಾಕಿದ್ದರು, ಆದರೂ ಎರಡು ಕ್ಷೇತ್ರದ ಜನತೆ ನಮ್ಮ ನಿರೀಕ್ಷೆಗಿಂತ ಹೆಚ್ಚು ಮತ ನೀಡಿದರು ಎಂದು ಹೇಳಿದರು.
ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಮಾತನಾಡಿ, ಇದು ಸರ್ಕಾರಿ ಕಾರ್ಯಕ್ರಮ. ಇಲ್ಲಿ ಈ ಮಾತು ಹೇಳಬಾರದು, ಆದರೂ ಹೇಳುತ್ತಿದ್ದೇನೆ ಎಂದು ಚುನಾವಣಾ ಭಾಷಣಕ್ಕೆ ಪೀಠಿಕೆ ಹಾಕಿದವರು, ಕೆಲಸ ಮಾಡಿದವರಿಗೆ ಕೂಲಿ ಮಾಡಬೇಕಾಗುತ್ತದೆ. ಕೆ.ವೆಂಕಟೇಶ್‌ರನ್ನು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.
ಆರೋಗ್ಯ ಸಚಿವ ಕೆ.ಆರ್.ರಮೇಶ್ ಕುಮಾರ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾಜಕಲ್ಯಾಣದ ಕೆಲಸದ ಜತೆಗೆ ಅಭಿವೃದ್ಧಿ ಕಾರ್ಯವನ್ನೂ ಮಾಡುತ್ತಿದ್ದಾರೆ. ಅವರಲ್ಲಿ ಬಡವರಿಗೆ ಸ್ಪಂದಿಸುವ ಹೃದಯವಿದೆ. ಆದರೂ 20 ವರ್ಷ ಮುಖ್ಯಮಂತ್ರಿಯಾಗಿ ಅವರನ್ನು ಇಡೋಕಾಗಲ್ಲ. ಮುಂದಿನ ಒಂದು ವರ್ಷದಲ್ಲಿ ಚುನಾವಣೆ ಬರುತ್ತೆ. ಕ್ಷೇತ್ರದ ಜನ ವಿವೇಚನಾಯುತವಾಗಿ ನಿರ್ಣಯ ಕೈಗೊಳ್ಳಿ ಎಂದರು.
ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ಶಾಸಕ ವೆಂಕಟೇಶ್ ತಾಲೂಕಿನಲ್ಲಿ ಅಂಬೇಡ್ಕರ್ ಭವನ, ವಾಲ್ಮೀಕಿ ಭವನ, ಬಾಬೂ ಜಗಜೀವನ್ ರಾಮ್ ಭ ವನಗಳಿಗೆ ಹೆಚ್ಚುವರಿ ಹಣ ಕೇಳಿದ್ದಾರೆ. ಅವರ ಭವಿಷ್ಯದ ದೃಷ್ಟಿಯಿಂದ ಹೆಚ್ಚುವರಿ ಹಣ ಕೊಡುತ್ತೇನೆ. ಆದರೆ ಅವರ ಕೈಬಿಡಬೇಡಿ ಎಂದು ಹೇಳಿದರು.
ಶಾಸಕ ವೆಂಕಟೇಶ್ ಮಾತನಾಡಿ, ತಾಲೂಕಿನ 150 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ಕೊಟ್ಟಿದ್ದು ತಮಗೆ ಖುಷಿಕೊಟ್ಟಿದೆ. ನನ್ನನ್ನು ಮಂತ್ರಿ ಮಾಡಿದ್ದರು ಇಷ್ಟು ಸಂತೋಷ ವಾಗುತ್ತಿರಲಿಲ್ಲ. ಮುಂದಿನ ತಲೆಮಾರು ನೆನೆಯುವಂತಹ ಕಾರ್ಯಕ್ರಮ ಇದು. ಚುನಾವಣೆ ವೇಳೆಗೆ ಕೆರೆಗಳಿಗೆ ನೀರು ಬಿಟ್ಟರೆ ಅಷ್ಟೇ ಸಾಕು, ಪೈಪ್‌ಲೈನ್ ಹಾಕಲು ರೈತರು ಜಮೀನು ಬೇಗ ಬಿಟ್ಟು ಕೊಟ್ಟರೆ ಕೆಲಸವೂ ಬೇಗ ಆಗುತ್ತದೆ ಎಂದರು.