ಅವಧಿ: 104 ನಿಮಿಷ
ನಿರ್ದೇಶಕ: ಸ್ಟುವರ್ಟ್ ಬೀಟಿ
Advertisement
ಆ ಏಳು ಹುಡುಗರ ಪಾಲಿಗೆ ಅದು ಸ್ವಾತಂತ್ರ್ಯದ ಕೊನೆಯ ದಿನ. ಈ ಸತ್ಯ ಮಾತ್ರ ಆ ಮುಗ್ಧರಿಗೆ ಗೊತ್ತೇ ಇರೋದಿಲ್ಲ. ವಾರಾಂತ್ಯದ ಮೋಜು ಅನುಭವಿಸಲು, ಒಂದು ಬೆಟ್ಟಕ್ಕೆ ಬಂದಿರುತ್ತಾರೆ. ಕ್ಯಾಂಪ್‌ಫೈರ್‌ನ ಬೆಚ್ಚನೆ ಸುಖ ಹೀರುತ್ತಾ, ಸಂಗೀತ ಕೇಳುತ್ತಾ ನಿದ್ರೆಗೆ ಜಾರುತ್ತಿರುವಾಗ, ತಮ್ಮ ದೇಶಗಳ ಮೇಲೆ ರಾಕೆಟ್ ಬಾಂಬ್ ಒಂದು ಹಾದು ಹೋಗುತ್ತೆ. ಆಗಲೇ ಅವರಿಗೆ ಗೊತ್ತಾಗೋದು, ತಮ್ಮ ದೇಶ ಮರುದಿನ ಯುದ್ಧಕ್ಕೆ ಎದುರುಗೊಳ್ಳುತ್ತಿದೆ ಎಂದು. ತಂದೆ- ತಾಯಿಗಳು ಕರೆಯ ಸಂಪರ್ಕಕ್ಕೂ ಸಿಗೋದಿಲ್ಲ. ನಿಂತ ನೆಲ ಧಸಕ್ಕನೆ ಕುಸಿದ ಹಾಗಾಗುತ್ತೆ. ಮಸ್ತಿ ಅನುಭವಿಸಲು ಬಂದ ಸ್ನೇಹಿತರೊಳಗೇ ಸೈನಿಕ ಹುಟ್ಟಿಕೊಳ್ಳುತ್ತಾನೆ. ಶತ್ರುಗಳ ದಾಳಿ ಬೇಧಿಸುತ್ತಲೇ, ಮನೆ ತಲುಪುವ ಇವರ ಕತೆ ಸ್ಫೂರ್ತಿದಾಯಕ.