Advertisement

ಸ್ವಾತಂತ್ರ್ಯದ ಕಿಚ್ಚು ಹಚ್ಚಿದ್ದು ಹಿಂದಿ ಭಾಷೆ: ಚೌದ್ರಿ

03:48 PM Sep 15, 2022 | Team Udayavani |

ಶಹಾಬಾದ: ಛಿದ್ರ ಛಿದ್ರವಾಗಿ ಹರಿದು ಹೋದ ಅಂದಿನ ಭಾರತವನ್ನು ಒಂದೇ ಸೂರಿನಡಿ ತಂದು ಸ್ವಾತಂತ್ರ್ಯದ ಕಿಚ್ಚು ಹಚ್ಚಿ ಸ್ವಾತಂತ್ರ್ಯ ದೊರಕಿಸಿಕೊಟ್ಟ ಭಾಷೆ ಹಾಗೂ ನಿರ್ಣಾಯಕ ಪಾತ್ರವಹಿಸಿದ ಭಾಷೆಯೇ ಹಿಂದಿ ಭಾಷೆ ಎಂದು ಸಾಹಿತಿ ಹಾಗೂ ಕಲಬುರಗಿ ದಯಾನಂದ ಹಿಂದಿ ಶಾಲೆ ಶಿಕ್ಷಕ ಸುನೀಲ ಚೌದ್ರಿ ಹೇಳಿದರು.

Advertisement

ಬುಧವಾರ ನಗರದ ರಾಷ್ಟ್ರ ಭಾಷಾ ಶಿಕ್ಷಣ ಸಮಿ ತಿಯ ಸೇಠ ಗೋವರ್ಧನಲಾಲ ಹಿಂದಿ ಮಹಾ ವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಹಿಂದಿ ದಿನಾಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪಾಚೀನಕಾಲದಿಂದಲೂ ತನ್ನದೇಯಾದ ಪರಂಪರೆ, ಸಂಸ್ಕೃತಿ ಬೆಳೆಸಿಕೊಂಡು ಬಂದಿರುವ ಸುಂದರ, ಸ್ವಾರಸ್ಯಕರ ಹಾಗೂ ಕೇಳುವುದಕ್ಕೂ ಹಿತವಾಗಿರುವ ಸಂಪರ್ಕ ಭಾಷೆಯೇ ಹಿಂದಿ ಭಾಷೆಯಾಗಿದೆ. ರಾಷ್ಟ್ರೀಯ ಭಾಷೆಯಾಗಿರುವ ಹಿಂದಿ ದೇಶದ ಐಕ್ಯತೆ ಹಾಗೂ ಭಾವೈಕ್ಯತೆ ಸಾರುವ ಭಾಷೆಯಾಗಿದ್ದು, ಎಲ್ಲರೂ ಗೌರವಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಆಂಗ್ಲ ಭಾಷೆ ವ್ಯಾಮೋಹದ ಮಧ್ಯೆಯೂ ಈ ಭಾಗದಲ್ಲಿ ಹಿಂದಿ ಮಾಧ್ಯಮ ಶಾಲೆಯನ್ನು ಪ್ರಾರಂಭಿಸಿ ರಾಷ್ಟ್ರ ಭಾಷೆ ಪ್ರಚಾರ, ಪ್ರಸಾರ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಸ್ವಾತಂತ್ರ್ಯ ಪಡೆದ ನಂತರ ಹಿಂದಿ ರಾಷ್ಟ್ರ ಭಾಷೆಯಾಗಿ ಯಾವ ಮಟ್ಟದಲ್ಲಿ ಬೆಳೆಯಬೇಕಾ ಗಿತ್ತೋ, ಆ ಮಟ್ಟದಲ್ಲಿ ಬೆಳೆಯದೇ ಇರುವದು ವಿಷಾದನೀ ಯವಾಗಿದೆ. ಇಡೀ ದೇಶವನ್ನು ಬೆಸೆಯುವ ಸಂಪರ್ಕ ಭಾಷೆಯಾಗಿರುವ ಹಿಂದಿಯು ಶೇ.53ರಷ್ಟು ಮಾತ್ರ ಬೆಳವಣಿಗೆ ಕಂಡಿರುವುದು ಕಳವಳಕಾರಿ ಸಂಗತಿ ಎಂದರು.

ಮುಖ್ಯ ಅತಿಥಿಯಾಗಿದ್ದ ಎಸ್‌.ಎಸ್‌.ಮರ ಗೋಳ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ|ಅನಿಲಕುಮಾರ ಕೊಪ್ಪಳಕರ್‌ ಮಾತನಾಡಿ, ಸಾಹಿತ್ಯಿಕವಾಗಿ ಸಮೃದ್ಧ ಭಾಷೆಯಾಗಿರುವ ಹಿಂದಿ ಯಲ್ಲಿ ಅತೀ ಹೆಚ್ಚಿನ ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಹಿರಿಮೆ ಇದೆ. ಇಂತಹ ದೇಶದ ಜನರೊಂದಿಗೆ ಬಾಂ ಧವ್ಯ ಬೆಸೆಯುವ ಹಿಂದಿ ಭಾಷೆಯನ್ನು ನಾವೆಲ್ಲರೂ ಗೌರವಿಸಿ ಬೆಳೆಸಬೇಕಾಗಿದೆ ಎಂದು ಹೇಳಿದರು.

Advertisement

ರಾಷ್ಟ್ರಭಾಷಾ ಶಿಕ್ಷಣ ಸಮಿತಿ ಅಧ್ಯಕ್ಷ ಬಾಲಕಿಶನ್‌ ವರ್ಮಾ, ಉಪಾಧ್ಯಕ್ಷ ಹಣಮಂತರಾಯ ಇಂಗಿನಶೆಟ್ಟಿ, ಕಾರ್ಯದರ್ಶಿ ದಿಲೀಪ ಯಲಶೆಟ್ಟಿ, ಸಿ.ಎ.ಇಂಗಿನಶೆಟ್ಟಿ ಕಾಲೇಜಿನ ಪ್ರಾಂಶುಪಾಲ ರಾಜಗೋಪಾಲ ಜೂಜಾರೆ, ಹಿಂದಿ ವಿದ್ಯಾಲಯದ ಮುಖ್ಯಗುರು ಬಾಬಾಸಾಹೇಬ ಸಾಳುಂಕೆ, ಹಿಂದಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಅನಿತಾ ಶರ್ಮಾ, ಎಸ್‌.ಎಸ್‌.ನಂದಿ ಪ್ರೌಢಶಾಲೆ ಮುಖ್ಯಶಿಕ್ಷಕ ಸುಧೀರ ಕುಲಕರ್ಣಿ ವೇದಿಕೆ ಮೇಲಿದ್ದರು. ಶಿಕ್ಷಕಿಯರಾದ ಲತಾ ಸಾಳುಂಕೆ ಹಾಗೂ ಸುಕನ್ಯಾ ಪ್ರಾರ್ಥಿಸಿದರು, ಮಲ್ಲಿನಾಥ ಪಾಟೀಲ ಸ್ವಾಗತಿಸಿದರು, ಮಹೇಶ್ವರಿ ಗುಳಿಗಿ ನಿರೂಪಿಸಿದರು, ಪ್ರಕಾಶ ಕೋಸಗಿಕರ್‌, ಪರಿಚಯಿಸಿದರು, ಅನಿತಾ ಶರ್ಮಾ ವಂದಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next