ಶಹಾಪುರ: ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಮೂಲಕ ಈ ಭಾಗದ ರೈತರ ಪಾಲಿಗೆವರವಾದ ಕೃಷ್ಣಾ ಭಾಗ್ಯ ಜಲ ನಿಗಮ ಕಚೇರಿ ಕಟ್ಟಡದಲ್ಲಿ ಆರಂಭದಿಂದಲೂ ಗ್ರಂಥಾಲಯ ವ್ಯವಸ್ಥೆ ಮಾಡಲಾಗಿದ್ದು, ಇಲ್ಲಿವರೆಗೂ ಈಗ್ರಂಥಾಲಯ ಓದುಗರ ಮನ ತಣಿಸಿದೆ. ಆದರೆ ಇದೀಗ ಗ್ರಂಥಾಲಯ ದುರಸ್ತಿ ಹಂತದಲ್ಲಿದ್ದು, ಓದುಗರಿಗೆ ಕಿರಿಕಿರಿಯುಂಟು ಮಾಡಿದೆ.
ಸುಮಾರು 30 ವರ್ಷಗಳಿಂದ ಈಗ್ರಂಥಾಲಯ ಓದುಗರ ಅಭಿರುಚಿಗೆ ತಕ್ಕಂತೆ,ಪುಸ್ತಕ, ಹಲವಾರು ಕೃತಿಗಳು ಸೇರಿದಂತೆಪ್ರಮುಖ ಕನ್ನಡ ದಿನ ಪತ್ರಿಕೆ, ಮ್ಯಾಗಜಿನ್ ಗಳನ್ನು ಒದಗಿಸುತ್ತ ಬಂದಿದೆ. ಪ್ರಸ್ತುತಗ್ರಂಥಾಲಯ 40/60 ಅಳತೆ ಹೊಂದಿದ್ದು, ಓರ್ವ ಗ್ರಂಥಾಲಯ ಸಹಾಯಕ ಮತ್ತು ಒಬ್ಬಶುಚಿಗಾರ ಮಾತ್ರ ಇಲ್ಲಿ ಕಾರ್ಯನಿರ್ವಹಿಸುತ್ತ ಬಂದಿದ್ದಾರೆ.
ಹನಿ ನೀರಿಲ್ಲ: ಕೃಷ್ಣಾ ಕಾಡಾ ಕಚೇರಿ ನೌಕರರಿಗೆ ಓದಲು ಅನುಕೂಲವಾಗಿದೆ. ಅಲ್ಲದೆ ಕಾಡಾ ವಸತಿ ಪ್ರದೇಶದ ಜನರು ಮತ್ತು ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಶಿಕ್ಷಕ, ವೃಂದ ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಆದರೆ ಕಟ್ಟಡದುರಸ್ತಿ ಕಾಣದೇ ಹಾಳು ಕೊಂಪೆಯಾಗಿದ್ದು, ಓದುಗರಿಗೆ ಇಲ್ಲಿ ಕುಡಿಯಲು ಹನಿ ನೀರು ಕೂಡ ಸಿಗದಾಗಿದೆ. ಗ್ರಂಥಾಲಯದಲ್ಲಿ ಒಟ್ಟು 22,920 ಪುಸ್ತಕಗಳು, ಪಠ್ಯ ಪುಸ್ತಕಗಳು, ಸ್ಪರ್ಧಾತ್ಮಕಗ್ರಂಥಗಳು ಇಲ್ಲಿವೆ.
ಓರ್ವ ಸದಸ್ಯರಿಂದ 101 ರೂ. ಶುಲ್ಕ ಪಡೆಯಲಾಗುತ್ತಿದೆ. ಸದಸ್ಯರೊಬ್ಬರಿಗೆ ಎರಡು ಪುಸ್ತಕ ನೀಡಲಾಗುತ್ತಿದ್ದು, 15 ದಿನಕ್ಕೊಮ್ಮೆ ಪುಸ್ತಕ ಬದಲಾಯಿಸಲಾಗುತ್ತದೆ ಎನ್ನುತ್ತಾರೆ ಗ್ರಂಥಾಲಯ ಶುಚಿಗಾರ. ಕಟ್ಟಡ ದುರಸ್ತಿ ಕಂಡಿಲ್ಲ, ಕಿಟಕಿ ಗಾಜುಗಳುಒಡೆದಿವೆ, ಮಳೆ ನೀರಿಗೆ ಕಟ್ಟಡ ಹೆಚ್ಚು ತೇವಾಂಶ ಹಿಡಿದಿದೆ. ಕಟ್ಟಡದ ಮೂರನೇಮಹಡಿಯಲ್ಲಿ ಗ್ರಂಥಾಲಯ ಇರುವುದರಿಂದ ಕಟ್ಟಡ ಮೇಲ್ಛಾವಣಿ ಮಳೆ ನೀರಿನಿಂದ ತೀರ ತೇವಾಂಶ ಹೀರಿಕೊಂಡಿದೆ. ಆದ್ದರಿಂದ ಕಟ್ಟಡ ದುರಸ್ತಿ ಅವಶ್ಯ ಎನ್ನುತ್ತಾರೆ ಓದುಗರು.
ಸುರಕ್ಷತೆ ಇಲ್ಲ: ಕಿಟಕಿ ಗಾಜುಗಳು ಒಡೆದಿದ್ದು, ಮಳೆ ಜೋರಾಗಿ ಬಂದಾಗ ಕಿಟಕಿ ಮೂಲಕ ನೀರು ಕಚೇರಿಯೊಳಗೆ ನುಗ್ಗುತ್ತದೆ. ಈಸಮಸ್ಯೆ ಕುರಿತು ಜಿಲ್ಲಾ ಗ್ರಂಥಾಲಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಗ್ರಂಥಾಲಯ ಸಹಾಯಕ ತಿಳಿಸುತ್ತಾರೆ. ಶುಚಿಗಾರನೇ ಇಲ್ಲಿ ಗ್ರಂಥ ಪಾಲಕ. ಕರ್ತವ್ಯಕ್ಕೆಹಾಜರಾಗದ ಗ್ರಂಥಾಲಯ ಸಹಾಯಕ, ಕುಡಿಯಲು ನೀರಿಲ್ಲವೆನ್ನುವುದು ಓದುಗರ ದೂರು. ಒಟ್ಟಿನಲ್ಲಿ ಗ್ರಂಥಾಲಯದ ಕಟ್ಟಡದುರಸ್ತಿಯೊಂದಿಗೆ ಗ್ರಂಥಾಲಯ ಸಹಾಯಕಸಮರ್ಪಕ ಕರ್ತವ್ಯ ನಿರ್ವಹಿಸಬೇಕೆನ್ನುವುದು ಓದುಗರ ಒತ್ತಾಸೆಯಾಗಿದೆ.
-ಮಲ್ಲಿಕಾರ್ಜುನ ಮುದ್ನೂರ