Advertisement
ಪಾಲಿಕೆಯಿಂದಲೇ ಕನ್ನಡ ಶಾಲೆ: ಮುಂಬೈ ಮಹಾನಗರದಲ್ಲಿ ಒಂದು ಅಂದಾಜಿನ ಪ್ರಕಾರ ಸುಮಾರು 20 ಲಕ್ಷಕ್ಕೂ ಹೆಚ್ಚು ಕನ್ನಡಿಗರು ನೆಲೆಸಿದ್ದಾರೆ. ಸ್ವಾತಂತ್ರ್ಯಪೂರ್ವದಲ್ಲಿಯೇ 1939 ರಲ್ಲಿ ವಡಾಲಾದಲ್ಲಿ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಮೂಲಕ ಕನ್ನಡ
ಶಾಲೆಯನ್ನು ಆರಂಭಿಸಲಾಗಿತ್ತು. ನಂತರ ಮುಂಬೈ ಮಹಾನಗರ ಪಾಲಿಕೆಯೇ 92 ಕನ್ನಡ ಶಾಲೆಗಳನ್ನು ಆರಂಭಿಸಿ ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಸುವ ಕಾರ್ಯಕ್ಕೆ ಪೋತ್ಸಾಹ ನೀಡುತ್ತಿತ್ತು. ಅದಲ್ಲದೇ 12 ಕನ್ನಡ ಶಾಲೆಗಳನ್ನು ಖಾಸಗಿಯವರು ಆರಂಭಿಸಿದ್ದರು. ಪಾಲಿಕೆ ಅನುದಾನದಿಂದ ಬಂಟರ ಸಂಘದವರು 18ಕ್ಕೂ ಹೆಚ್ಚು ಕನ್ನಡದ ರಾತ್ರಿ ಶಾಲೆಗಳನ್ನೂ ಆರಂಭಿಸಿದರು. ಮುಂಬೈ ಮಹಾನಗರ ಪಾಲಿಕೆ ಇದಕ್ಕೆ ಅನುದಾನವನ್ನೂ ನೀಡುತ್ತಿತ್ತು. ಒಂದು ಕಾಲದಲ್ಲಿ ಒಂದೇ ಕ್ಲಾಸಿಗೆ 6 ವಿಭಾಗಗಳು
ನಡೆಯುತ್ತಿದ್ದವು, ಕನ್ನಡೇತರರ ಮಕ್ಕಳು. ಕನ್ನಡವನ್ನು ಒಂದು ಭಾಷೆಯಾಗಿ ಅಧ್ಯಯನ ಮಾಡುತ್ತಿದ್ದರು.
ತೋರಿಸುತ್ತಿರುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿ ಒಂದೊಂದೆ ಶಾಲೆಗಳನ್ನು ಮುಂಬೈ ಮಹಾನಗರ ಪಾಲಿಕೆ ಬಾಗಿಲು ಮುಚ್ಚಿಸುತ್ತಿದೆ. ಶಿವಸೇನೆಯ ವಿರೋಧದ ನಡುವೆಯೂ ಕನ್ನಡ ಶಾಲೆಗಳನ್ನು ಜೀವಂತ ಇಡುವಲ್ಲಿ ಕನ್ನಡ ಸಂಘಗಳು ಪ್ರಯತ್ನ ನಡೆಸಿವೆ. ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಕನ್ನಡ ಮಾಧ್ಯಮವನ್ನು ಜೀವಂತವಾಗಿಡಲು ಈ ಶಾಲೆಗೆ ಸೇರುವ ಯಾವುದೇ ಭಾಷೆಯ ವಿದ್ಯಾರ್ಥಿಗಳಿಗೂ ಕನ್ನಡ ಒಂದು ಭಾಷೆಯಾಗಿ ಕಲಿಯುವುದನ್ನು ಕಡ್ಡಾಯಗೊಳಿಸಿದೆ. ಸುಮಾರು 2000 ಮಕ್ಕಳಿರುವ ಈ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿಯೇ ಓದುವ ಮಕ್ಕಳ ಸಂಖ್ಯೆ ಕಡಿಮೆ ಇದ್ದರೂ ಎಲ್ಲ ಮಕ್ಕಳಿಗೂ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಕಲಿಸುತ್ತಿದ್ದಾರೆ. ಸಂಸ್ಕೃತಿ ಜೀವಂತಕ್ಕೆ ಕಸರತ್ತು: ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸಲು ಇಷ್ಟ ಪಡದ ಪೋಷಕರು, ಕನ್ನಡ ಬಾಷೆ ಮತ್ತು ಸಂಸ್ಕೃತಿ ಜೀವಂತವಾಗಿಡುವಲ್ಲಿ ಮಾತ್ರ ಶ್ರಮಿಸುತ್ತಿದ್ದಾರೆ. ರಾಷ್ಟ್ರೀಯ ಶಿಕ್ಷಣ ಸಂಸ್ಥೆ, ಚಂಬೂರು ಕನ್ನಡ ಸಂಘ, ಕೋರ್ಟ್ ಕನ್ನಡ ಸಂಘ, ಚಿನ್ನರ ಬಿಂಬ, ಬಿಲ್ಲವ, ಮೊಗವೀರ, ಬಂಟರ ಸಂಘಟನೆಗಳು ಮಕ್ಕಳಿಗೆ ಕನ್ನಡ ಭಾಷೆ, ಜಾನಪದ, ಕರಾವಳಿ ಸಂಸ್ಕೃತಿ ಕಲಿಸುವ, ಕನ್ನಡ ನೃತ್ಯಗಳ ಮೂಲಕ ಹಾಗೂ ನಾಟಕಗಳನ್ನು ಆಡಿಸುವ ಮೂಲಕ ಮಕ್ಕಳಿಗೆ ಮನಸಲ್ಲಿ ಕನ್ನಡ ನಾಡಿನಬಗ್ಗೆ ಹೆಮ್ಮೆ ಮೂಡಿಸುವ ಪ್ರಯತ್ನ ನಡೆಸುತ್ತಿದ್ದಾರೆ.
Related Articles
ಆಗಿರುವ ಶಂಕರಲಿಂಗ ಅವರು ಅಭಿಪ್ರಾಯಪಡುತ್ತಾರೆ.
Advertisement
ತಂದೆ, ತಾಯಿಗಳಿಗೆ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗಿದೆ. ಕನ್ನಡ ಶಾಲೆಗಳು ಮುಚ್ಚಲು ಪೋಷಕರೇ ಕಾರಣ. ಇಲ್ಲಿಯೇ ಕನ್ನಡ ಶಾಲೆಯಲ್ಲಿ ಓದಿ ದೊಡ್ಡ ಉದ್ಯಮಿಗಳಾಗಿದ್ದಾರೆ. ಈಗ ಅವರು ತಮ್ಮ ಮಕ್ಕಳನ್ನು ಕನ್ನಡ ಬದಲಿಗೆ ಇಂಗ್ಲಿಷ್ ಶಾಲೆಗೆ ಸೇರಿಸುತ್ತಾರೆ. ಹೀಗಾಗಿ ಕನ್ನಡಕ್ಕೆ ಈ ಸ್ಥಿತಿ ಬಂದಿದೆ. ಪಾಲಿಕೆ ಶಾಲೆ ಇಟ್ಟುಕೊಂಡು ಏನು ಮಾಡುತ್ತದೆ.● ಡಾ. ಮಂಜುನಾಥ, ಮೈಸೂರು ಅಸೋಸಿಯೇಷನ್‌ನ ಹಿರಿಯ ಕನ್ನಡಿಗ ಶಂಕರ ಪಾಗೋಜಿ