Advertisement

Congress ಅಧಿಕಾರಕ್ಕೆ ಬಂದ ತಿಂಗಳಲ್ಲೇ ಅದಾನಿ ಹಗರಣ ತನಿಖೆಗೆ ಜೆಪಿಸಿ ರಚನೆ

01:17 AM May 23, 2024 | Team Udayavani |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಗೆ ಆಪ್ತರಾಗಿರುವ ಉದ್ಯಮಿ ಗೌತಮ್‌ ಅದಾನಿ ಮಾಲಕತ್ವದ ಕಂಪೆನಿ ನಡೆಸಿದೆ ಎನ್ನಲಾದ ಕಲ್ಲಿದ್ದಲು ಹಗರಣವನ್ನು ತನಿಖೆಗೆ ಒಳಪಡಿಸುತ್ತೇವೆ. ಅದಕ್ಕಾಗಿ ಕಾಂಗ್ರೆಸ್‌ ನೇತೃತ್ವದ ಸರಕಾರ ಅಧಿ ಕಾರಕ್ಕೆ ಬಂದ ಒಂದು ತಿಂಗಳಲ್ಲಿ ಸಂಸತ್‌ನ ಜಂಟಿ ಸಮಿತಿ (ಜೆಪಿಸಿ) ರಚಿಸಲಾಗುತ್ತದೆ ಎಂದು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಹೇಳಿದ್ದಾರೆ.

Advertisement

ಈ ಬಗ್ಗೆ ಬುಧವಾರ ಟ್ವೀಟ್‌ ಮಾಡಿರುವ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಅಧಿಕಾರಾವಧಿಯಲ್ಲಿ ದೊಡ್ಡ ಕಲ್ಲಿದ್ದಲು ಹಗರಣ ಬೆಳಕಿಗೆ ಬಂದಿದೆ. ಪ್ರಧಾನಿಗೆ ಆಪ್ತರಾಗಿ ರುವ ಅದಾನಿ ಗ್ರೂಪ್‌ ಕಳಪೆ ಗುಣಮಟ್ಟದ ಕಲ್ಲಿದ್ದಲನ್ನು ದುಬಾರಿ ಬೆಲೆಗೆ ಮಾರಾಟ ಮಾಡಿ ಕೋಟ್ಯಂತರ ರೂ. ಲೂಟಿ ಮಾಡಿದೆ. ಅದಕ್ಕೆ ದೇಶದ ಸಾಮಾನ್ಯ ಜನರು, ವಿದ್ಯುತ್‌ ಬಿಲ್‌ ಪಾವತಿಸುವ ಮೂಲಕ ಬೆಲೆ ತೆತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಎಷ್ಟು ಟೆಂಪೋಗಳು?
ಈ ಹಗರಣವನ್ನು ಮುಚ್ಚಿಡುವುದಕ್ಕೆ ಇ.ಡಿ., ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಯ ಬಾಯಿ ಮುಚ್ಚಿಸಲು ಪ್ರಧಾನಿ ಮೋದಿ ಎಷ್ಟು ಟೆಂಪೋಗಳನ್ನು ಬಳಸಿದ್ದಾರೆ ಎಂದು ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆ. ಈ ಬಗ್ಗೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಕೂಡ ಪ್ರತ್ಯೇಕ ಹೇಳಿಕೆ ನೀಡಿ, “ಮುಂದಿನ ತಿಂಗಳ 4ರಂದು ಫ‌ಲಿತಾಂಶ ಪ್ರಕಟವಾದ ಬಳಿಕ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲಿದೆ. ಮೊದಾನಿ (ಮೋದಿ ಮತ್ತು ಅದಾನಿ) ನೇತೃತ್ವದಲ್ಲಿ ನಡೆದಿರುವ ಹಗರಣದ ಬಗ್ಗೆ ನಮ್ಮ ಸರಕಾರ 1 ತಿಂಗಳಲ್ಲಿ ಜೆಪಿಸಿ ಮೂಲಕ ತನಿಖೆ ನಡೆಸಲಿದೆ ಎಂದು ಘೋಷಿಸಿದ್ದಾರೆ. ಕಲ್ಲಿದ್ದಲು ಮಾರಾಟದ ಮೂಲಕ ಅದಾನಿ ಗ್ರೂಪ್‌ 3 ಸಾವಿರ ಕೋಟಿ ರೂ. ಸಂಪಾದಿಸಿದೆ ಎಂದು ಅವರು ಆರೋಪಿಸಿದ್ದಾರೆ. ಕಾಂಗ್ರೆಸ್‌ನ ಇಬ್ಬರು ಪ್ರಮುಖ ನಾಯಕರ ಆರೋಪಗಳಿಗೆ ಅದಾನಿ ಗ್ರೂಪ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ರಾಹುಲ್‌, ಜೈರಾಂ ವಾಗ್ಧಾಳಿ
– ಅದಾನಿ ಗ್ರೂಪ್‌ ವಿರುದ್ಧ ಫೈನಾನ್ಶಿಯಲ್‌ ಟೈಮ್ಸ್‌ ಪತ್ರಿಕೆ ವರದಿ ಉಲ್ಲೇಖೀಸಿದ ಕಾಂಗ್ರೆಸ್‌
– ಕಳಪೆ ಕಲ್ಲಿದ್ದಲು ಮಾರಾಟ ಮಾಡಿ 3,000 ಕೋಟಿ ರೂ. ಸಂಪಾದಿಸಿದ ಅದಾನಿ ಗ್ರೂಪ್‌
– ಹೊಸ ಸರಕಾರದ ಅವಧಿಯಲ್ಲಿ ಅಕ್ರಮದ ಬಗ್ಗೆ ತನಿಖೆ ನಡೆಸಲು ಕ್ರಮ
– ಕೇಂದ್ರ ತನಿಖಾ ಸಂಸ್ಥೆಗಳ ಬಾಯಿ ಮಚ್ಚಿಸಲು ಎಷ್ಟು ಟೆಂಪೋ ಬಳಕೆ ಎಂದು ಪ್ರಶ್ನೆ

ಏನಿದು ಪ್ರಕರಣ?
ಅದಾನಿ ಗ್ರೂಪ್‌ 2014ರಲ್ಲಿ ಇಂಡೋನೇಷ್ಯಾದಿಂದ ಕಳಪೆ ಕಲ್ಲಿದ್ದಲ್ಲನ್ನು ಕಡಿಮೆ ಬೆಲೆಗೆ ಖರೀದಿಸಿ ತಮಿಳುನಾಡಿನ ಸಾರ್ವ ಜನಿಕ ವಲಯದ ಉತ್ಪಾ ದನ ಮತ್ತು ವಿತರಣ ನಿಗಮಕ್ಕೆ (ಟಿಎಎನ್‌ಜಿಡಿಸಿಒ) 3 ಪಟ್ಟು ಹೆಚ್ಚು ಬೆಲೆಗೆ ಮಾರಿದೆ ಎಂದು ಫೈನಾನ್ಶಿಯಲ್‌ ಟೈಮ್ಸ್‌ ಹೇಳಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next