Advertisement

ಮನಸ್ಸಿನ ಆನಂದಕ್ಕೆಬಣ್ಣ ಪೂರಕ: ಹೆಬ್ಟಾರ

11:12 AM Mar 03, 2018 | |

ಕಲಬುರಗಿ: ಕಾಮನ ದಹನ ಮಾಡಿ ಮರುದಿನ ಓಕುಳಿ ಆಡುವ ಮೂಲಕ ಬಣ್ಣಗಳಲ್ಲಿ ಮಿಂದೆದ್ದು ಕುಣಿದು ಕುಪ್ಪಳಿಸಿ ಖುಷಿ ಪಡುವುದರಲ್ಲಿ ಜೀವನದ ಪರಮಾನಂದವಿದೆ. ಬಣ್ಣಗಳಿಂದ ಮನಸ್ಸಿಗೆ ಮುದ ನೀಡಿ ಆನಂದಕ್ಕೆ ಪೂರಕ ಪ್ರೇರಣೆ ನೀಡುತ್ತವೆ ಎಂದು ಜಿಲ್ಲಾ ವಿಜ್ಞಾನ ಕೇಂದ್ರದ ಮುಖ್ಯಸ್ಥ ಲಕ್ಷ್ಮೀನಾರಾಯಣ ಹೆಬ್ಟಾರ ಹೇಳಿದರು.

Advertisement

ನಗರದ ಬಸವೇಶ್ವರ ಆಸ್ಪತ್ರೆ ಎದುರಿನ ಮಲ್ಲಿಕಾರ್ಜುನ ದೇವಸ್ಥನದ ಆವರಣದಲ್ಲಿ ವಿದ್ಯಾನಗರ ವೇಲ್‌ಫೇರ್‌ ಸೂಸೈಟಿ ಆಶ್ರಯದಲ್ಲಿ ಮಲ್ಲಿಕಾರ್ಜುನ ತರುಣ ಸಂಘ ಹಮ್ಮಿಕೊಂಡಿದ್ದ ಕಾಮದಹನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಮಯ ಬದಲಾದಂತೆ ಆಚರಣೆಯಲ್ಲಿ ಸಂಘರ್ಷ ಮೂಡಿದೆ. ಪೊಲೀಸರ ಕಾವಲಿನಲ್ಲಿ ಬಣ್ಣ ಎರಚಿಕೊಂಡು ತಾತ್ಕಾಲಿಕ ಖುಷಿ ಪಡುವ ದಿನಗಳನ್ನು ಎದುರಿಸುತ್ತಿದ್ದೇವೆ. ಹೀಗಾಗಿ ಗ್ರಾಮೀಣ ಸೊಗಡಿನ ಆಚರಣೆ ನಮ್ಮ ನಾಗರಿಕ ಎಚ್ಚರಿಕೆಯಿಂದಾಗಿ ಮರೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಆಧ್ಯಾತ್ಮಿಕವಾಗಿ ಪ್ರತಿಯೊಂದು ಬಣ್ಣದಲ್ಲು ಒಂದೊಂದು ಸಂದೇಶವಿದೆ. ಇತ್ತೀಚೆಗೆ ಬಣ್ಣಗಳಿಂದ ಚಿಕಿತ್ಸೆ ಕೊಡಲಾಗುತ್ತಿದ್ದು, ಹಾಗಾಗಿ ಬಣ್ಣ ಮನಸ್ಸಿನ ಆನಂದಕ್ಕೆ ಪೂರಕ, ಪ್ರೇರಕ ಶಕ್ತಿಯಾಗಿದೆ ಎಂದು ಹೇಳಿದರು.

ಮಲ್ಲಿಕಾರ್ಜುನ ತರುಣ ಸಂಘದ ಅಧ್ಯಕ್ಷ ಶಿವರಾಜ ಅಂಡಗಿ ಮಾತನಾಡಿ, ಕಾಮದಹನದ ಹಿಂದೆ ರೋಚಕ ಪುರಾಣ ಕಥೆಯೂ ಇದೆ. ಕಾಮದಹನದ ವೇಳೆಯಲ್ಲಿ ಗ್ರಾಮೀಣ ಭಾಗದಲ್ಲಿನ ಹಾಡುಗಳು ನಿಜಕ್ಕೂ ನಮ್ಮೊಳಗಿನ ಗತ್ತು ಮತ್ತು ಅಹಂಕಾರ ಕಳೆಯುತ್ತವೆ. ಅಂತಹ ಹಬ್ಬದ ಆಚರಣೆಗಾಗಿ ನಾವು ಅತಿಥಿಗಳನ್ನು ಕರೆಯಿಸಿ ಅವರಿಂದ ಕಾಮದಹನ ಮಾಡಿಸಿ, ಬೊಬ್ಬೆ ಹಾಕಿ ಸಂಭ್ರಮಿಸುತ್ತಿರುವುದು ನೋಡಲು ಸ್ವಲ್ಪ ಭಿನ್ನ ಎನ್ನಿಸಿದರೂ ಅದರೊಳಗೊಂದು ಖುಷಿ ಇದೆ ಎಂದು ಹೇಳಿದರು. 

ಅಥಿತಿಗಳಾಗಿ ವಿದ್ಯಾನಗರ ವೇಲ್‌ಫೇರ್‌ ಸೂಸೈಟಿ ಅಧ್ಯಕ್ಷ ಮಲ್ಲಿನಾಥ ದೇಶಮುಖ. ಕಾರ್ಯದರ್ಶಿ ಶ್ರೀಮಂತ ಶೆಳ್ಳಗಿ, ತರುಣ ಸಂಘದ ಉಪಾಧ್ಯಕ್ಷ ವೀರೇಶ ನಾಗಶೆಟ್ಟಿ ಕಾರ್ಯದರ್ಶಿ ಕರಣ ಆದೋಲಾ, ತರುಣ ಸಂಘದ ಪದಾಧಿಕಾರಿಗಳಾದ ಅಮಿತ್‌ ಜಿವಣಗಿ, ಮಾಹಾದೇವ ತಂಬಾಕೆ, ಶಿವರಾಜ ಕೊಳಕೂರ ಅಮಿತ್‌ ಸಿಕೇದ್‌, ಅನಿಲ ನಾಗೂರ, ಸಂಜು ತಂಭಾಕೆ, ಡಾ| ಸಂತೋಷ ಪಾಟೀಲ, ಕುನಾಲ್‌ ಆಂದೋಲಾ, ಅಚಲ್‌ರಾಜ್‌ ಅಂಡಗಿ, ಅನೀಶ ದಶ್ಮಾ ಶಿವಾನಂದ ಸಂದಿಮಠ. ವಿನೋದ ಪಾಟೀಲ, ಶಿವರಾಜ ಮಠಪತಿ, ಮಾವಿನ್‌ ಉಪ್ಪನ್‌, ಸಿದ್ದು ಬಾವಿಕಟ್ಟಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next