Advertisement

ಕೇಂದ್ರ ಸಚಿವರಿಂದ ಬೇಜವಾಬ್ದಾರಿ ಹೇಳಿಕೆ

07:55 AM Sep 11, 2017 | Team Udayavani |

ಮೈಸೂರು: ಗೌರಿ ಹತ್ಯೆ ವಿಚಾರದಲ್ಲಿ ಕೇಂದ್ರ ಸಚಿವ ರವಿಶಂಕರ ಪ್ರಸಾದ್‌ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆಂದು ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಭಾನುವಾರ ಸುದ್ದಿಗಾರರ ಜತೆ ಅವರು ಮಾತ ನಾಡಿದರು. ಗೌರಿ ಹತ್ಯೆ ನಂತರ ಸರ್ಕಾರ ಸ್ವಯಂಪ್ರೇರಿತವಾಗಿ ಪ್ರಗತಿಪರ ಸಾಹಿತಿಗಳು, ಚಿಂತಕರಿಗೆ ಭದ್ರತೆ ಕಲ್ಪಿಸಲು ನಿರ್ಧರಿಸಿದೆ. ಕಳೆದ ವಾರ ಮೋಹನ್‌ ಕೊಂಡಜ್ಜಿ, ವಿಮಲಾ ಜತೆಗೆ ತಮ್ಮನ್ನು ಭೇಟಿ ಮಾಡಿದ್ದ ಗೌರಿ ಲಂಕೇಶ್‌, ಪತ್ರಿಕೆಯ ವಿಶೇಷ ಸಂಚಿಕೆಗೆ ಜಾಹಿರಾತು ಕೊಡಿಸಲು ಮನವಿ ಮಾಡಿದ್ದರೇ ಹೊರತು, ರಕ್ಷಣೆ ಕೋರಿರಲಿಲ್ಲ. ಅವರು ರಕ್ಷಣೆ ಕೇಳಿದ್ದರೆ ಸರ್ಕಾರ ಕೊಡದೆ ಇರುತ್ತಿತ್ತೇ? ಕೇಂದ್ರ ಸಚಿವರಾದವರು ಇಂತಹ ವಿಚಾರದಲ್ಲಿ ಬೇಜವಾಬ್ದಾರಿ ಹೇಳಿಕೆ ನೀಡಬಾರದು ಎಂದರು. ಗೌರಿ ಕುಟುಂಬದವರೇ ಸಿಬಿಐ ತನಿಖೆ ಬೇಡ, ಎಸ್‌ಐಟಿ ತನಿಖೆಯನ್ನೇ ಮುಂದುವರೆಸಿ ಎಂದು ಕೇಳಿಕೊಂಡಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next