Advertisement

ರಿಕ್ಷಾದಲ್ಲಿ ಬಾಕಿಯಾಗಿದ್ದ ಐಫೋನ್‌ ಹಿಂದಿರುಗಿಸಿದ ಚಾಲಕ

11:15 AM May 15, 2018 | |

ಮಹಾನಗರ: ರಿಕ್ಷಾದಲ್ಲಿ ಬಾಕಿಯಾಗಿದ್ದ ಐಫೋನ್‌ 7 ಮೊಬೈಲ್‌ನ್ನು ವಾರಸುದಾರರಿಗೆ ಹಿಂದಿರುಗಿಸಿ ರಿಕ್ಷಾ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

Advertisement

ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಿಂದ ಪಡೀಲ್‌ ಫಸ್ಟ್‌ ನ್ಯೂರೋ ಆಸ್ಪತ್ರೆಗೆ ತೆರಳಬೇಕಾಗಿದ್ದ ಕೇರಳ ಮೂಲದ ಪ್ರಯಾಣಿಕರೊಬ್ಬರು ಸುಮಾರು 45,000 ರೂ. ವೆಚ್ಚದ ಐಫೋನ್‌ 7 ಮೊಬೈ ಲ್‌ನ್ನು ರೈಲು ನಿಲ್ದಾಣದ ಪ್ರಿಪೇಯ್ಡ ಕೌಂಟರ್‌ ನಿಂದ ಹತ್ತಿದ ರಿಕ್ಷಾದಲ್ಲೇ ಬಿಟ್ಟು ಹೋಗಿದ್ದರು. ಆಸ್ಪತ್ರೆಯಲ್ಲಿ ಇಳಿದ ಬಳಿಕ ಮೊಬೈಲ್‌ ಕಾಣದಿರುವುದು ಪ್ರಯಾಣಿಕನ ಗಮನಕ್ಕೆ ಬಂದಿದೆ. ಆಸ್ಪತ್ರೆಯಿಂದ ಮರಳಿ ರೈಲು ನಿಲ್ದಾಣಕ್ಕೆ ಬಂದ ಪ್ರಯಾಣಿಕ ಅಲ್ಲಿದ್ದ ಕದ್ರಿ ಠಾಣೆಯ ಟ್ರಾಫಿಕ್‌ ಪೊಲೀಸ್‌ ಬಸವ ರಾಜು ಅವರ ಗಮನಕ್ಕೆ ತಂದಿದ್ದಾರೆ. ಬಸವ ರಾಜು ಅವರು ಪ್ರಿಪೇಯ್ಡ ಕೌಂಟರ್‌ನಲ್ಲಿ ನೀಡಿದ್ದ ಟಿಕೆಟ್‌ ಮೂಲಕ ರಿಕ್ಷಾ ಸಂಖ್ಯೆ, ಮೊಬೈಲ್‌ ಸಂಖ್ಯೆ ಪಡೆದು ಕರೆ ಮಾಡಿ ದ್ದಾರೆ. ವಿಷಯ ತಿಳಿದ ರಿಕ್ಷಾ ಚಾಲಕ ಅಭಿಷೇಕ್‌ ಮೊಬೈಲ್‌ ತಂದು ಪ್ರಯಾಣಿಕನಿಗೆ ಹಿಂದಿರುಗಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next