ಮುಂಬಯಿ: ಸಾಲಗಳ ಮೇಲಿನ ಬಡ್ಡಿದರ ಹೆಚ್ಚಾಗಲಿದೆಯೇ ಎಂದು ಚಿಂತಿಸುತ್ತಿದ್ದ ವರಿಗೆ ನೆಮ್ಮದಿ. ಸತತ ಎಂಟನೇ ಬಾರಿಗೆ ಆರ್‌ಬಿಐ ಬಡ್ಡಿದರವನ್ನು ಶೇ.4ರ ಪ್ರಮಾಣದಲ್ಲಿಯೇ ಯಥಾಸ್ಥಿತಿಯಲ್ಲಿ ಇರಿಸಲು ನಿರ್ಧರಿಸಿದೆ.
ಬುಧವಾರದಿಂದ ಶುರುವಾಗಿದ್ದ ತ್ತೈಮಾ ಸಿಕ ಸಾಲ ನೀತಿ ಪರಿಶೀಲನೆ ಸಭೆ ಶುಕ್ರ ವಾರ ಮುಕ್ತಾಯವಾಗಿದೆ. ಬಳಿಕ ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ನಿರ್ಧಾರ ಪ್ರಕಟಿಸಿದ್ದಾರೆ.
ಹೀಗಾಗಿ, ವಾಹನ ಸಾಲ, ಗೃಹ ಸಾಲ ಸೇರಿದಂತೆ ಸಾಲಗಳ ಮೇಲಿನ ಬಡ್ಡಿ ದರ ಯಥಾಸ್ಥಿತಿ ಯನ್ನು ಕಾಯ್ದುಕೊಳ್ಳಲಿವೆ. ಜತೆಗೆ ಸೋಂಕಿನ ಪ್ರಭಾವಕ್ಕೆ ತುತ್ತಾಗಿದ್ದ ದೇಶದ ಅರ್ಥ ವ್ಯವಸ್ಥೆ ಚೇತರಿಸಿ ಕೊಳ್ಳಲು ಶುರುವಾಗಿದೆ ಎಂಬ ಸೂಚನೆಯನ್ನೂ ಅವರು ನೀಡಿದ್ದಾರೆ.
ಇದನ್ನೂ ಓದಿ:500 ರೂ., 2 ಸಾವಿರ ರೂ. ನೋಟಿಂದ ಮಹಾತ್ಮಾ ಗಾಂಧಿ ಫೋಟೋ ತೆಗೆಯಿರಿ
ಸೋಂಕು ಹೆಚ್ಚಾಗಿದ್ದ ಅವಧಿಯಲ್ಲಿ ಅರ್ಥ ವ್ಯವಸ್ಥೆ ಪುನಶ್ಚೇತನಕ್ಕಾಗಿ 100ಕ್ಕೂ ಹೆಚ್ಚು ಕ್ರಮಗಳನ್ನು ಕೈಗೊಂಡಿದೆ ಎಂದಿದ್ದಾರೆ. ಕೇಂದ್ರ ಸರಕಾರ 2.2 ಲಕ್ಷ ಕೋಟಿ ರೂ.ಮೌಲ್ಯದ ಬಾಂಡ್‌ಗಳನ್ನು ಆರ್‌ಬಿಐ ಖರೀದಿಸಿದೆ ಎಂದು ಹೇಳಿದ್ದಾರೆ. ಪ್ರಸಕ್ತ ವಿತ್ತೀಯ ವರ್ಷದಲ್ಲಿ ಜಿಡಿಪಿ
ದರ ಶೇ.9.5ನ್ನೇ ನಿರೀಕ್ಷಿತ ದರವನ್ನಾಗಿ ಇರಿಸಿಕೊಳ್ಳಲಾಗಿದೆ. ಜತೆಗೆ ಹಣದುಬ್ಬರ ದರವನ್ನು ಶೇ.5.7ರಿಂದ ಶೇ.5.3ಕ್ಕೆ ಇಳಿಕೆ ಮಾಡಿದೆ ಎಂದರು ದಾಸ್.
ಕಳವಳ: ಹೆಚ್ಚುತ್ತಿರುವ ತೈಲೋತ್ಪನ್ನಗಳ ಬೆಲೆ ಕಳವಳಕಾರಿ. ಆದರೆ ಅವುಗಳ ಮೇಲೆ ಇರುವ ತೆರಿಗೆ ಪ್ರಮಾಣ ಕಡಿಮೆ ಮಾಡುವುದು ಕೇಂದ್ರ ಸರಕಾರಕ್ಕೆ ಬಿಟ್ಟ ವಿಚಾರ ಎಂದರು.