Advertisement

ರೋಗ ನಿರೋಧಕ ಶಕ್ತಿ ಹೆಚ್ಚಿಸಬಲ್ಲ ವಿಟಮಿನ್‌ ಸಿ

04:32 PM Apr 26, 2019 | mahesh |

ನಾವು ಆಹಾರಗಳನ್ನು ಸೇವಿಸುತ್ತೇವೆ. ಆದರೆ ಅದರಲ್ಲಿ ಏನೆಲ್ಲ ಪೋಷಕಾಂಶಗಳಿರುತ್ತವೆ ಎಂಬುದನ್ನು ತಿಳಿದುಕೊಳ್ಳಲು ಹೋಗುವುದಿಲ್ಲ. ಇದರಿಂದ ದೇಹಕ್ಕೆ ಬೇಕಾದ ಪೋಷಕಾಂಶ ಸಿಗದೆ ಹಲವು ರೋಗಗಳಿಗೆ ಆಹ್ವಾನ ನೀಡಿದಂತಾಗುವುದು. ಹೀಗಾಗಿ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಬಲ್ಲ ಪೋಷಕಾಂಶ ಹೊಂದಿರುವ ಆಹಾರದ ಸೇವನೆ ಎಲ್ಲರಿಗೂ ಮುಖ್ಯ. ದೇಹಕ್ಕೆ ಬೇಕಾದ ಪೋಷಕಾಂಶಗಳಲ್ಲಿ ‘ವಿಟಮಿನ್‌ ಸಿ’ ಕೂಡ ಒಂದು. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇದು ಅತೀ ಅಗತ್ಯ.

Advertisement

ವಿಟಮಿನ್‌ ಸಿ ಯ ಪ್ರಯೋಜನಗಳು
• ವಿಟಮಿನ್‌ ಸಿ ಯು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಪ್ರತಿದಿನ 500 ಮಿ. ಗ್ರಾಂ ನಷ್ಟು ವಿಟಮಿನ್‌ ಸಿ ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆ ದೂರವಿಡಬಹುದು.

••ಕೊಲೆಸ್ಟ್ರಾಲ್ ನಿವಾರಣೆಗೂ ಇದು ಸಹಕಾರಿ.

••ಊರಿಯೂತ ಮತ್ತು ಸಂಧಿವಾತ ಕಡಿಮೆ ಮಾಡಲು ವಿಟಮಿನ್‌ ಸಿ ಸಹಾಯಕ.

• ದೇಹಕ್ಕೆ ಬೇಕಾದ ಕೆಂಪು ರಕ್ತ ಕಣಗಳು ವಿಟಮಿನ್‌ ಸಿ ಯಿಂದ ಹೇರಳವಾಗಿ ದೊರೆಯುತ್ತದೆ. ಕುತೂಹಾಲಕಾರಿ ಅಂಶವೆಂದರೆ ವಿಟಮಿನ್‌ ಸಿ ಯೂ ಆಹಾರದಲ್ಲಿರುವ ಕಬ್ಬಿಣಾಂಶ ಹೀರಿಕೊಂಡು ದೇಹಕ್ಕೆ ಬೇಕಾಗುವ ಪೋಷಕಾಂಶವನ್ನು ನೀಡುತ್ತದೆ.

Advertisement

•• ವಯಸ್ಸಾದಂತೆ ನೆನಪು ಶಕ್ತಿ ಕಡಿಮೆಯಾಗುವುದು ಸಹಜ ವಿಟಮಿನ್‌ ಸಿಯಿಂದ ಈ ಕೊರತೆಯನ್ನು ನಿವಾರಿಸಲು ಸಹಕಾರಿಯಾಗಿದೆ.

• ಸಾಮಾನ್ಯ ಶೀತ, ಕಣ್ಣಿನ ಪೊರೆಯಂತಹ ಸಮಸ್ಯೆಗೂ ವಿಟಮಿನ್‌ ಸಿ ಪರಿಹಾರ ನೀಡುತ್ತದೆ.

ವಿಟಮಿನ್‌ ಸಿ ಇರುವ ಪದಾರ್ಥಗಳು
ಹೂಕೋಸು, ಬ್ರೋಕೆಲಿ ಮೊದಲಾದ ಕೋಸುಗಡ್ಡೆಗಳಲ್ಲಿ 51ಮಿ.ಗ್ರಾಂ, ಸೀಬೆಹಣ್ಣಿನಲ್ಲಿ 126 ಮಿ.ಗ್ರಾಂ, ಪಪ್ಪಾಯ (145 ಗ್ರಾಂ) ದಲ್ಲಿ 87 ಮಿ.ಗ್ರಾಂ, ಲಿಂಬೆ ಹಣ್ಣಿನಲ್ಲಿ 83 ಮಿ. ಗ್ರಾಂ, ಕಿತ್ತಳೆ ಹಣ್ಣುನಲ್ಲಿ 96 ಮಿ.ಗ್ರಾಂ, ಟೋಮೆಟೋದಲ್ಲಿ 55 ಮಿ.ಗ್ರಾಂ, ಪಾಲಕ್‌ ಸೊಪ್ಪು 28 ಮಿ.ಗ್ರಾಂ ನಲ್ಲಿ ವಿಟಮಿನ್‌ ಸಿ ಇದೆ. ಎಲೆ ಕೋಸು, ಮೂಲಂಗಿ, ಗೆಣಸು, ಆಲೂಗಡ್ಡೆ , ಹಸಿರು ಮತ್ತು ಕೆಂಪು ಮೆಣಸುಗಳು ನಮ್ಮ ದೇಹಕ್ಕೆ ಬೇಕಾಗಿರುವ ವಿಟಮಿನ್‌ ಸಿ ಒದಗಿಸುತ್ತದೆ. ನಮ್ಮ ದೇಹದ ಎಲ್ಲ ಅಂಗಾಂಶಗಳ ಬೆಳವಣಿಗೆಗೂ ವಿಟಮಿನ್‌ ಸಿ ಅಗತ್ಯವಾಗಿದೆ. ಹೀಗಾಗಿ ಪ್ರತಿದಿನ ನಮ್ಮ ಆಹಾರದಲ್ಲಿ ವಿಟಮಿನ್‌ ಸಿ ಸೇರಿಸಿಕೊಳ್ಳಲೇಬೇಕು.

••ಧನ್ಯಶ್ರೀ ಬೋಳಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next