Advertisement

ಕೇರಳ ಶಾಸಕನ ಕೈಹಿಡಿದ ಐಎಎಸ್‌ ಅಧಿಕಾರಿ ದಿವ್ಯಾ

03:45 AM Jul 01, 2017 | Team Udayavani |

ತಿರುವನಂತಪುರ: ರಾಜಕಾರಣಿ-ಅಧಿಕಾರಿ ನಂಟು! ಬರೀ ನಂಟಲ್ಲ ಸ್ವಾಮಿ, ಗಂಟು, ಬ್ರಹ್ಮಗಂಟು! ಇದೇ ಮೊದಲ ಬಾರಿಗೆ ಅತಿ ಕಿರಿಯ ವಯಸ್ಸಿನ ಕೇರಳ ಶಾಸಕರೊಬ್ಬರು ಐಎಎಸ್‌ ಆಧಿಕಾರಿಯನ್ನು ಮದುವೆಯಾಗಿದ್ದಾರೆ. ಕಾಂಗ್ರೆಸ್‌ ಶಾಸಕ ಕೆ.ಎಸ್‌. ಶಬರಿ ನಾಥನ್‌ ಮತ್ತು ಐಎಎಸ್‌ ಅಧಿಕಾರಿ, ವೈದ್ಯೆ ದಿವ್ಯಾ ಎಸ್‌. ಅಯ್ಯರ್‌ ಅವರು ತಮಿಳುನಾಡಿನ ಕನ್ಯಾಕುಮಾರಿಯ ಭಗವಾನ್‌ ಮುರುಗ ದೇವಾಲಯದಲ್ಲಿ ಶುಕ್ರವಾರ ಬೆಳಗ್ಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೇರಳ ವಿಪಕ್ಷ ನಾಯಕ ರಮೇಶ್‌ ಚೆನ್ನಿತ್ತಲ, ಮಾಜಿ ಸಿಎಂ ಉಮ್ಮನ್‌ ಚಾಂಡಿ ಮತ್ತಿತರರು ಹಾಜರಾಗಿ ಶುಭಕೋರಿದರು. ಮೊದಲ ಬಾರಿ ರಾಜಕಾರಣಿ-ಅಧಿಕಾರಿ ಮದುವೆಯಾಗುವ ಕಾರಣ ಇದು ಭಾರೀ ಸುದ್ದಿ ಮಾಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next