ಅಫಜಲಪುರ: ಕ್ಷೇತ್ರಕ್ಕೊಬ್ಬರು ಶಾಸಕರು, ಅವರಿಗೊಂದು ಭವನ. ಏಕೆಂದರೆ ಜನಸಾಮಾನ್ಯರು ತಮ್ಮ ಅಹವಾಲುಗಳನ್ನು ಶಾಸಕರಿಗೆ ತಿಳಿಸಬೇಕಾದರೆ ಅವರಿಗೊಂದು ನಿರ್ಧಿಷ್ಟ ಸ್ಥಳ ಬೇಕು. ಹೀಗಾಗಿ ಶಾಸಕರ
ಭವನ ಕಟ್ಟಿರುತ್ತಾರೆ. ಆದರೆ ಪಟ್ಟಣದಲ್ಲಿನ ಶಾಸಕರ ಭವನವನ್ನು ಹುಡುಕುವಂತ ಪರಿಸ್ಥಿತಿ
ನಿರ್ಮಾಣವಾಗಿದೆ.
Advertisement
ಪಟ್ಟಣದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಲೋಕೋಪಯೋಗಿ ಇಲಾಖೆ ಕಟ್ಟಡದಲ್ಲಿರುವ ತಾತ್ಕಾಲಿಕ ಶಾಸಕರ ಭವನವೀಗ ಅಕ್ಷರಶಃ ಖಾಸಗಿ ವಾಹನಗಳ ಅಡ್ಡೆ ಮತ್ತು ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗಿದೆ. ಈ ಭವನದ ಆವರಣದಲ್ಲಿ ಖಾಸಗಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಕಡ್ಡದ ಎದುರು ಮತ್ತು ಅಕ್ಕಪಕ್ಕದಲ್ಲಿರುವ ಚರಂಡಿಗಳು ತುಂಬಿಕೊಂಡಿದ್ದು ಚರಂಡಿ ನೀರು ರಸ್ತೆಯ ಮೇಲೆಲ್ಲ ಹರಿದಾಡಿ ಕೊಳಗೇರಿಯಂತೆ ಕಾಣುತ್ತಿದೆ.ಕೊಳಗೇರಿಯಂತೆ ಕಾಣುತ್ತಿದೆ.
Related Articles
Advertisement
ಮುಖ್ಯ ರಸ್ತೆಗೆ ಚರಂಡಿ ಇಲ್ಲದಿರುವುದೇ ಸಮಸ್ಯೆಗೆ ಕಾರಣ: ಪಟ್ಟಣದಲ್ಲಿ ದ್ವಿಪಥ ಮುಖ್ಯ ರಸ್ತೆ ನಿರ್ಮಿಸಲಾಗಿದೆ. ಮುಖ್ಯ ರಸ್ತೆಗೆ ಎರಡೂ ಬದಿಯಲ್ಲಿ ಗುಣಮಟ್ಟದ ಮತ್ತು ಸುಸಜ್ಜಿತ ಚರಂಡಿ ನಿರ್ಮಿಸಬೇಕಾಗಿತ್ತು. ಆದರೆ ಸಂಬಂಧ ಪಟ್ಟವರು ಇತ್ತ ಕಡೆ ಗಮನ ಹರಿಸದ ಕಾರಣದಿಂದ ಮತ್ತು ಜನಪ್ರತಿನಿಧಿಗಳು,ಅಧಿಕಾರಿಗಳ ಜವಾಬ್ದಾರಿತನದಿಂದಾಗಿ ಹಳೆಯ ಚರಂಡಿಗಳನ್ನು ಹಾಗೆ ಬಿಡಲಾಗಿದೆ. ಇದರಿಂದಾಗಿ ಚರಂಡಿಗಳು ಮುಚ್ಚಿಕೊಂಡಿದ್ದು, ಚರಂಡಿ ನೀರು ರಸ್ತೆ ಮೇಲೆ ಹರಿದಾಡುತ್ತಿದೆ.ಪುರಸಭೆಯವರು ಚರಂಡಿ ಸ್ವಚ್ಚಗೊಳಿಸುವ ಗೋಜಿಗೆ ಹೋಗಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.
ರಾಷ್ಟ್ರೀಯ ಹಬ್ಬಗಳಂದು ನೆನಪಾಗುವ ಭವನ: ಶಾಸಕರ ಭವನ ಎನ್ನುವುದು ಕೇವಲ ರಾಷ್ಟ್ರೀಯ ಹಬ್ಬಗಳ ದಿನ ಧ್ವಜಾರೋಹಣಕ್ಕಾಗಿ ಮಾತ್ರ ಇದೆ ಎನ್ನುವಂತಾಗಿದೆ. ಯಾರೇ ಜನಪ್ರತಿನಿಧಿಗಳಿರಲಿ, ಶಾಸಕರಾಗಿರಲಿ ಅವರುಕೇವಲ ಸ್ವಾತಂತ್ರ ದಿನ, ಗಣರಾಜ್ಯ ದಿನ, ಹೈ.ಕ ವಿಮೋಚನಾ ದಿನಗಳಲ್ಲಿ ಮಾತ್ರ ಭವನಕ್ಕೆ ಬಂದು ಧ್ವಜಾರೋಹಣ ನೆರವೇರಿಸಿ ಹೋಗುತ್ತಾರೆ.ಪುನಃ ಇತ್ತ ಕಡೆ ತಿರುಗಿಯೂ ನೋಡುವುದಿಲ್ಲ. ಹೀಗಾಗಿ ಶಾಸಕರ ಭವನ ಎನ್ನುವುದು ಅನೈತಿಕ ಚಟುವಟಿಕೆಗಳ ಅಡ್ಡೆಯಾಗಿ ಮಾರ್ಪಟ್ಟಿದೆ. ಈ ಕುರಿತು ನೂತನ ಶಾಸಕರು ಕ್ರಮ ಕೈಗೊಳ್ಳುವರೇ ಎಂದು ಕಾಯ್ದು ನೋಡಬೇಕಿದೆ. ನಾನು 2004ರಲ್ಲಿ ಶಾಸಕನಾಗಿದ್ದ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಕಟ್ಟಡವನ್ನು ಶಾಸಕರ
ಭವನವನ್ನಾಗಿ ಮಾಡಿದ್ದೆ. ಉದ್ಯಾನವನ ನಿರ್ಮಿಸಿ ಒಳ್ಳೆಯ ವಾತಾವರಣ ಸೃಷ್ಟಿಸಿದ್ದೆ. ಆದರೆ ಈ ಹಿಂದೆ ಇದ್ದ ಶಾಸಕರು ಭವನದ ಬಗ್ಗೆ ಗಮನ ಹರಿಸಿಲ್ಲ, ಹೀಗಾಗಿ ಅವ್ಯವಸ್ಥೆಗೆ ಕಾರಣವಾಗಿದೆ. ಆದರೀಗ ಈ ಕಟ್ಟಡ ಕೆಡವಿ ಹೊಸ ಭವನ ಕಟ್ಟಿಸಲಾಗುತ್ತದೆ.
ಎಂ.ವೈ. ಪಾಟೀಲ, ಶಾಸಕರು ಶಾಸಕರ ಭವನ ಹಾಳಾಗಿದ್ದರ ಬಗ್ಗೆ ಗಮನಕ್ಕೆ ಬಂದಿದೆ. ಸ್ಥಳ ಪರಿಶೀಲಿಸಿದ್ದೇವೆ. ಶೀಘ್ರವೇ ಭವನಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ದುರಸ್ತಿ ಮಾಡಲಾಗುವುದು.
ಮಾಣಿಕ ಕನಕಟ್ಟಿ, ಪಿಡಬ್ಲ್ಯುಡಿ ಎಇಇ