ಬೆಂಗಳೂರು: ದೇಶದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪತ್ತೆಯಾಗಿವೆ! ಈ ಮೂಲಕ ಮಹಾನಗರಗಳ ಸೋಂಕು ಪ್ರಕರಣಗಳ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನಕ್ಕೇರಿದೆ. ಭಾನುವಾರ ನಗರದಲ್ಲಿ 21,199 ಮಂದಿಗೆ ಸೋಂಕು ತಗುಲಿದ್ದು, 64 ಸೋಂಕಿತರ ಸಾವಾಗಿದೆ.
ಶನಿವಾರದವರೆಗೂ ದೆಹಲಿ ಮೊದಲ ಸ್ಥಾನದಲ್ಲಿದ್ದು,ಎರಡನೇ ಸ್ಥಾನದಲ್ಲಿ ಬೆಂಗಳೂರಿತ್ತು. ಆದರೆ, ಭಾನುವಾರ ದೆಹಲಿಯಲ್ಲಿ 20,394 ಮಂದಿಗೆ ಸೋಂಕು ತಗುಲಿದೆ. ದೆಹಲಿಗಿಂತ 805 ಹೆಚ್ಚು ಮಂದಿ ಸೋಂಕಿತರು ಪತ್ತೆಯಾಗುವ ಮೂಲಕ ದೇಶದ ಮಹಾನಗರಗಳ ಪೈಕಿ ಬೆಂಗಳೂರು ಮೊದಲ ಸ್ಥಾನಕ್ಕೇರಿದೆ.
ಮಹಾರಾಷ್ಟ್ರದ ನಗರಗಳಲ್ಲಿ ಸೋಂಕು ಇಳಿಕೆಯಾಗಿದೆ. ಸದ್ಯ ದೆಹಲಿಯಲ್ಲಿಯೂ 40 ಸಾವಿರದಿಂದ20 ಸಾವಿರ ಆಸುಪಾಸಿಗೆ ತಗ್ಗಿದೆ. ಆದರೆ, ಬೆಂಗಳೂರಿನಲ್ಲಿ ಪ್ರಕರಣಗಳ ತೀವ್ರತೆ ಮುಂದುವರೆದಿದೆ. ಭಾನುವಾರ ಮುಂಬೈಗಿಂತ ಆರು ಪಟ್ಟು, ಪುಣೆಗಿಂತ ದುಪ್ಪಟ್ಟು ಪ್ರಕರಣಗಳು ಬೆಂಗಳೂರಿನಲ್ಲಿ ಪತ್ತೆಯಾಗಿವೆ. ಈ ಮೂಲಕ ಮತ್ತೂಮ್ಮೆ ಕೊರೊನಾಕ್ಕೆರಾಷ್ಟ್ರ ರಾಜಧಾನಿ ಎನಿಸಿಕೊಂಡಿದೆ.
ಅತಿ ಹೆಚ್ಚು ಸೋಂಕಿತರು ಚಿಕಿತ್ಸೆ/ ಆರೈಕೆಯಲ್ಲಿ: ಕಳೆದ ವಾರವೇ ಸಕ್ರಿಯ ಪ್ರಕರಣಗಳಲ್ಲಿ ಬೆಂಗಳೂರುಮೊದಲ ಸ್ಥಾನಕ್ಕೇರಿದ್ದು, ಇಂದಿಗೂ ಮುಂದುವರೆದಿದೆ. ಸಕ್ರಿಯ ಪ್ರಕರಣಗಳು ಮೂರು ಲಕ್ಷ ದತ್ತಸಾಗಿವೆ. ಸದ್ಯ ದೇಶದಲ್ಲಿ ಅತಿ ಹೆಚ್ಚು 2,81,767ಸೋಂಕಿತರು ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ. ಈಪೈಕಿ 18 ಸಾವಿರ ಮಂದಿ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದು, ಎರಡೂವರೆ ಲಕ್ಷ ಮಂದಿ ಮನೆಯಲ್ಲಿಯೇ ಹೋಂ ಐಸೋಲೇಷನ್‌ನಲ್ಲಿದ್ದಾರೆ.
ಸಕ್ರಿಯ ಪ್ರಕರಣಗಳು ಹೆಚ್ಚಳವಾದ ಹಿನ್ನೆಲೆ ಆಸ್ಪತ್ರೆಗಳಲ್ಲಿ ಆಕ್ಸಿಜನ್, ವೆಂಟಿಲೇಟರ್ ಹಾಸಿಗೆಗಳ ಕೊರತೆ ಎದುರಾಗಿದೆ. ನಿತ್ಯ ಆಸ್ಪತ್ರೆಗಳ ಮುಂದೆ ಸೋಂಕಿತರುಹಾಸಿಗೆ ಸಿಗದೆ ಪರದಾಟ ನಡೆಸುತ್ತಿದ್ದಾರೆ.
ಸಾವು ಕಡಿಮೆ: ದೆಹಲಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಸೋಂಕಿತರ ಸಾವು ಐದು ಪಟ್ಟು ಕಡಿಮೆ ಇದೆ. ಇನ್ನು ನಗರದಲ್ಲಿ ಕಳೆದ ಶುಕ್ರವಾರ ಮತ್ತು ಶನಿವಾರ150 ದಾಟಿದ್ದ ಸೋಂಕಿತರ ಸಾವು ಸಾವು ಅರ್ಧಕ್ಕರ್ಧಇಳಿಕೆಯಾಗಿದೆ. ದೇಶದ ಇತರೆ ಮಹಾನಗರಗಳಿಗೆ ಹೋಲಿಸಿದರೆ ಸಾವು ತುಸು ಕಡಿಮೆ ಇದೆ.
ಐದು ಲಕ್ಷ ಗುಣಮುಖರು: ಒಂದೇ ದಿನ ನಗರದಲ್ಲಿ10,361 ಸೋಂಕಿತರು ಗುಣಮುಖರಾಗುವಮೂಲಕ ಒಟ್ಟಾರೆ ಗುಣಮುಖರ ಸಂಖ್ಯೆ ಐದು ಲಕ್ಷ ಗಡಿದಾಟಿದೆ. ಸದ್ಯ ನಗರದ ಒಟ್ಟಾರೆ ಸೋಂಕುಪ್ರಕರಣಗಳು 7.97ಕ್ಕೆ ಹೆಚ್ಚಳವಾಗಿದ್ದು, ಸೋಮವಾರಎಂಟು ಲಕ್ಷ ಗಡಿದಾಟಲಿದೆ. ಒಟ್ಟಾರೆ ಸೋಂಕುಪ್ರಕರಣಗಳಲ್ಲಿ ದೆಹಲಿ, ಪುಣೆ ನಂತರದ ಮೂರನೇಸ್ಥಾನದಲ್ಲಿದೆ. ಈವರೆಗೂ 6601 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
ಜಯಪ್ರಕಾಶ್ ಬಿರಾದಾರ್