Advertisement
ಈ ಕುರಿತು ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಪ್ರೊ. ರಾಜೀವಗೌಡ, ಶಾಸಕಿ ಸೌಮ್ಯ ರೆಡ್ಡಿ, ಪಿಯುಸಿಎಲ್ ಸಂಘಟನೆ ಹಾಗೂ ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾ. ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿತು.
Related Articles
Advertisement
“”ಪೊಲೀಸ್ ಮಹಾನಿರ್ದೇಶಕರ ಪತ್ರ ಆಧರಿಸಿ ಆಯುಕ್ತರು ಸೆಕ್ಷನ್ 144 ಜಾರಿಗೊಳಿಸಿ¨ªಾರೆ. ಆದೇಶ ಜಾರಿಗೊಳಿಸುವಾಗ ನಗರ ಪೊಲೀಸ್ ಆಯುಕ್ತರು ಜಿಲ್ಲಾ ಮ್ಯಾಜಿಸ್ಟ್ರೇಟ್ ರೀತಿ ಕಾರ್ಯ ನಿರ್ವಹಿಸಬೇಕು, ಸೆಕ್ಷನ್ ಜಾರಿಗೊಳಿಸಬೇಕೋ ಬೇಡವೋ ಎಂಬ ಬಗ್ಗೆ ಸ್ವತಃ ನಿರ್ಧರಿಸಬೇಕು. ನಗರದ ಡಿಸಿಪಿಗಳ ವರದಿ ಆಧರಿಸಿ ಆಯುಕ್ತರು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಆದರೆ ವರದಿ ಬಗ್ಗೆ ಪೊಲೀಸ್ ಆಯುಕ್ತರು ಸೂಕ್ತ ವಿಚಾರಣೆ ನಡೆಸಿಲ್ಲ. ಕೆಲ ಡಿಸಿಪಿಗಳು ಪ್ರತಿಭಟನೆಗೆ ಅನುಮತಿ ನೀಡಿದ್ದರು. ಆದರೆ ನಂತರ ಸೆಕ್ಷನ್ 144 ಜಾರಿ ಮಾಡುವಂತೆ ವರದಿ ನೀಡಿದ್ದಾರೆ. ನಿಷೇಧಾಜ್ಞೆ ಜಾರಿಗೆ ಆಯುಕ್ತರು ಸಮರ್ಥ ಕಾರಣಗಳನ್ನು ಕೊಟ್ಟಿಲ್ಲ. ಯಾಂತ್ರಿಕವಾಗಿ ಆದೇಶ ಹೊರಡಿಸಲಾಗಿದೆ’ ಎಂದು ನ್ಯಾಯಪೀಠ ಆದೇಶದಲ್ಲಿ ಉಲ್ಲೇಖೀಸಿದೆ.ರಾಮ್‌ಲೀಲಾ ಮೈದಾನದ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಅವಕಾಶವಿದೆ. ಅದು ಮೂಲಭೂತ ಹಕ್ಕು ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳ ನೀತಿ ನಿರ್ಧಾರಗಳ ವಿರುದ್ಧ ಶಾಂತಿಯುತ ಪ್ರತಿಭಟನೆ, ಬಂದ್, ರಾಸ್ತಾರೋಕೊ, ಮೆರವಣಿಗೆ ನಡೆಸುವ ಎಲ್ಲ ಅ ಧಿಕಾರ ಜನರಿಗೆ ಇದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಆದರಂತೆ, ಬೆಂಗಳೂರು ನಗರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆಗಳನ್ನು ನಡೆಸಲು ಅನುಮತಿ ನೀಡಿದ ಪೊಲೀಸರು ನಂತರ ಆ ಅನುಮತಿಗಳನ್ನು ಹತ್ತಿಕ್ಕಲು ನಿಷೇಧಾಜ್ಞೆ ಜಾರಿಗೊಳಿಸುವ ಮೂಲಕ ಪ್ರತಿಭಟನಾಕಾರರ ಮೂಲಭೂತ ಹಕ್ಕು ಕಸಿದುಕೊಂಡಿದ್ದಾರೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.