Advertisement

ಎದೆಗುಂದದ ಸಂಘಟಕ

08:25 PM Dec 29, 2019 | Lakshmi GovindaRaj |

ಸ್ವಾಮಿಗಳು ಮುಂದಾಲೋಚನೆ ಇಲ್ಲದೆ ಎಂದೂ ಮುಂದುವರಿಯುವವರಲ್ಲ. ಒಮ್ಮೆ ಮುಂದಡಿಯಿಟ್ಟರೆ ಏನೇ ಎಡರು-ತೊಡರುಗಳು ಬಂದರೂ ಕಂಗೆಡುವುದಿಲ್ಲ. ಯಾವ ಸಮಸ್ಯೆಯನ್ನೂ ಧೈರ್ಯವಾಗಿ ಪರಿಹರಿಸುತ್ತಾರೆ. ಆಪತ್ತು ಬಂದಾಗ ನಿದ್ರಾಹಾರಗಳನ್ನು ತೊರೆದು, ದೇವರ ಧ್ಯಾನ, ಪ್ರಾರ್ಥನೆ, ಪಾರಾಯಣ ಇವೇ ಆಪತ್ತಿನಿಂದ ಅವರನ್ನು ಪಾರು ಮಾಡುವ ಸಾಧನಗಳಾಗಿವೆ.

Advertisement

ಇದಕ್ಕೊಂದು ನಿದರ್ಶನ ಅವರು ಪ್ರಥಮವಾಗಿ ನಡೆಸಿದ ಮಾಧ್ವ ತಣ್ತೀ ಜ್ಞಾನ ಸಮ್ಮೇಳನ. ಆಗ ಎಲ್ಲೆಡೆಯಿಂದ ಆತಂಕ, ಆರ್ಥಿಕ ಅಡಚಣೆ ಎದುರಾಯಿತು. ಪರಿಸ್ಥಿತಿ ತುಂಬಾ ಚಿಂತಾಜನಕವಾಯಿತು. ಶ್ರೀಗಳು ಎದೆಗುಂದದೆ ಶ್ರೀ ಮಧ್ವಾ ಚಾರ್ಯರ ದಿವ್ಯ ಪೀಠದಲ್ಲಿ ಕುಳಿತು ಜಾಗರಣೆಯಿಂದಿದ್ದು, ಗೀತಾ ಪಾರಾಯಣ ಮಾಡಲು ಉಪಕ್ರಮಿಸಿದರು.

ತಂದೆ-ತಾಯಿಯೇ ಮೊದಲಾದವರು ಬಂದು ಪ್ರಾರ್ಥಿಸಿದರೂ ಆಹಾರ ವನ್ನು ಸ್ವೀಕರಿಸದೆ ತದೇಕಚಿತ್ತದಿಂದ ಭಗವಂತನನ್ನು ರಾತ್ರಿಯಿಡೀ ಪ್ರಾರ್ಥಿಸಿದರು. ಒದಗಿಬಂದ ಆತಂಕಗಳು ದೂರ ತೊಲಗಿ ಸಮ್ಮೇಳನವು “ನ ಭೂತೋ ನ ಭವಿಷ್ಯತಿ” ಎಂಬಂತೆ ವೈಭವದಿಂದ ಜರಗಿತು. ಅಖೀಲ ಭಾರತ ಮಾಧ್ವ ಮಹಾಮಂಡಲದ ಉದಯವಾಯಿತು. ಲಕ್ಷಾಂತರ ರೂ.ಗಳ ಸಾಲದ ಭೀತಿಯೂ ಮಾಯವಾಗಿ ಹತ್ತು ಸಹಸ್ರ ರೂ.ಗಳ ಉಳಿತಾಯ ಸಮ್ಮೇಳನದಿಂದ ಆಯಿತು.

Advertisement

Udayavani is now on Telegram. Click here to join our channel and stay updated with the latest news.

Next