Advertisement

ಉಕ್ರೇನ್ ಸಂಕಷ್ಟ: ಸ್ವದೇಶಕ್ಕೆ ಮರಳಲು ಏಳು ತಾಸು ನಡಿಗೆ! 

10:32 AM Feb 27, 2022 | Team Udayavani |

ಸಾಗರ: ಯುದ್ಧಗ್ರಸ್ತ ಉಕ್ರೇನ್ ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಸಾಗರದ ವಿದ್ಯಾರ್ಥಿನಿ ಮನಿಷಾ ಶನಿವಾರ ಗಡಿಭಾಗದ ಎಲ್‌ವಿವ್ ನಗರಕ್ಕೆ ಪ್ರಯಾಣ ಆರಂಭಿಸಿದ್ದಾರೆ.

Advertisement

ಅಣಲೇಕೊಪ್ಪದ ನಿವಾಸಿ ಎಲೆಕ್ಟ್ರಿಕ್ ದುರಸ್ತಿ ವೃತ್ತಿಯ ಜಾನ್ ಲೋಬೋ ಮತ್ತು ಬ್ಯೂಟಿ ಪಾರ್ಲರ್ ನಡೆಸುತ್ತಿರುವ ತ್ರೀಜಾ ಲೋಬೋ ಅವರ ಏಕೈಕ ಪುತ್ರಿ ಮನಿಷಾ ಲೋಬೋ ಉಕ್ರೇನ್ ನ ಕೀವ್ ನಗರದ ಕೀವ್ ವಿವಿಯಲ್ಲಿ 6 ವರ್ಷಗಳಿಂದ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾರೆ. ಅಂತಿಮ ವರ್ಷದಲ್ಲಿ ಅಭ್ಯಾಸ ಮಾಡುತ್ತಿರುವ ಮನಿಷಾ ಅವರು ಫೆ.28 ರಂದು ಭಾರತಕ್ಕೆ ಮರಳಲು ಸಿದ್ಧತೆ ನಡೆಸಿದ್ದರು. ಯದ್ಧ ಭೀತಿಯ ನಡುವೆ ಮನಿಷಾ ಬಂಕರ್ ನಲ್ಲಿ ಆಶ್ರಯ ಪಡೆದಿದ್ದರು.

ಇದನ್ನೂ ಓದಿ:ಉಕ್ರೇನ್ ಸಂಕಷ್ಟ: ಕೆಐಎಲ್ ನಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ಸಚಿವರಿಂದ ಸ್ವಾಗತ

ಗಡಿಭಾಗದ ಪ್ರಯಾಣದ ಕುರಿತು ಮಾಹಿತಿ ನೀಡಿದ ಮನಿಷಾ, ಎಲ್‌ವಿವ್ ನಗರಕ್ಕೆ ಶನಿವಾರ ಪ್ರಯಾಣ ಆರಂಭವಾಗಿದೆ. ಅಂದಾಜು 7 ತಾಸುಗಳ ನಡಿಗೆಯ ಪ್ರಯಾಣ ಇದಾಗಿದ್ದು, ಪೊಲಾಂಡ್ ದೇಶದ ಗಡಿಭಾಗದಲ್ಲಿರುವ ಉಕ್ರೇನ್‌ನ ನಗರ ಇದಾಗಿದೆ. ಅಲ್ಲಿಂದ ಭಾರತಕ್ಕೆ ನಮ್ಮನ್ನೆಲ್ಲ ಸಾಗಿಸಲು ವ್ಯವಸ್ಥೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ಪ್ರಯಾಣ ಮುಂದುವರಿಸಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next