Advertisement

ಜೀವನದಲ್ಲಿ ಯಶಸ್ಸಿಗೆ ಕಠಿನ ಶ್ರಮ ಮಾತ್ರ ದಾರಿ: ಬಿಷಪ್‌

08:52 PM Jun 10, 2019 | Sriram |

ಕುಂದಾಪುರ: ವಿದ್ಯಾರ್ಥಿಗಳು ತಾವು ಏನಾಗಬೇಕೆಂಬ ಸ್ಪಷ್ಟ ಗುರಿ ಹೊಂದಿರಬೇಕು. ಜೀವನದಲ್ಲಿ ಯಶಸ್ಸು ಗಳಿಸಲು ಕಠಿನ ಶ್ರಮ ಬಿಟ್ಟರೆ ಬೇರೆ ದಾರಿಯಿಲ್ಲ. ಅಸಾಧ್ಯ ಮತ್ತು ಅನುತ್ತೀರ್ಣ ಎಂಬ ಪದಗಳು ನಿಮ್ಮ ಶಬ್ದ ಕೋಶದಲ್ಲಿ ಇರಬಾರದು ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ| ಜೆರಾಲ್ಡ್‌ ಐಸಾಕ್‌ ಲೋಬೊ ಅವರು ಹೇಳಿದರು.

Advertisement

ಇಲ್ಲಿನ ಸಂತ ಮೇರಿಸ್‌ ಪಿ.ಯು. ಕಾಲೇಜಿನ ಪ್ರಾರಂಭೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜೀವನದಲ್ಲಿ ಪ್ರಯತ್ನ ಪಡುತ್ತಲೇ ಇರಬೇಕು. ಥಾಮಸ್‌ ಆಲ್ವಾ ಎಡಿಸನ್‌ ಹಲವಾರು ಬಾರಿ ಪ್ರಯೋಗಗಳಲ್ಲಿ ಸಫಲನಾಗದಿದ್ದರೂ, ಛಲದಿಂದ ಪ್ರಯತ್ನ ಪಡುತ್ತಾ ಕೊನೆಗೆ ಯಶಸ್ಸನ್ನು ಪಡೆದು ಜಗತ್ತಿಗೆ ಬೆಳಕು ನೀಡಿದ. ಅವರಂತೆ ನಿಮ್ಮ ಪ್ರಯತ್ನ ಸಾಗಲಿ ಎಂದರು.

ವೈದ್ಯೆ ಡಾ| ರೆನ್ನಿ ವಿಲ್ಸನ್‌, ಪ್ರಪಂಚದಲ್ಲಿ ಯಶಸ್ಸು ಪಡೆದವರ ಬಗ್ಗೆ ತಿಳಿದುಕೊಂಡರೆ, ಅವರುಗಳು ಕಷ್ಟ ಪಟ್ಟು ಪರಿಶ್ರಮ ಪಟ್ಟು ಯಶಸ್ಸು ಗಳಿಸಿದ್ದಾರೆ. ನೀವು ಏನಾಗಬೇಕೆಂದು ಮೊದಲು ಕನಸು ಕಾಣಬೇಕು. ಅದನ್ನು ಸಾಕಾರಗೊಳಿಸಲು ಕಠಿನ ಪರಿಶ್ರಮ ಪಡಿ. ಆಗ ನಿಮಗೆ ಯಶಸ್ಸು ದೊರಕುತ್ತದೆ ಎಂದರು.

ಕಾಲೇಜಿನ ಜಂಟಿ ಕಾರ್ಯದರ್ಶಿ ಫಾ| ಸ್ಟ್ಯಾನಿ ತಾವ್ರೊ, ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳು, ಕಾಲೇಜಿನ ಶಿಸ್ತನ್ನು ರೂಢಿಸಿಕೊಳ್ಳಬೇಕು ಎಂದರು.

ಧರ್ಮಾಧ್ಯಕ್ಷರು ಕಾಲೇಜಿನ ಮ್ಯಾಗಜಿನ್‌ ಬ್ಲೊಸಮ್‌ನ್ನು ಉದ್ಘಾಟನೆ ಮಾಡಿದರು.

Advertisement

ದ್ವಿತಿಯ ಪಿ.ಯು.ಸಿ. ಪ್ರಥಮ ಪಿ.ಯು.ಸಿ. ಮತ್ತು ಎಸೆಸೆಲ್ಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದವರನ್ನು ಗೌರವಿಸಲಾಯಿತು. ವರ್ಗಾವಣೆಗೊಂಡ ರೋಜರಿ ಚರ್ಚ್‌ನ ಧರ್ಮಗುರು ಫಾ| ರೋಯ್‌ ಲೋಬೊ ಅವರಿಗೆ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.

ಪ್ರಾಂಶುಪಾಲ ಫಾ| ಪ್ರವೀಣ್‌ ಅಮೃತ್‌ ಮಾರ್ಟಿಸ್‌ ಕಾಲೇಜಿನ ಬಗ್ಗೆ, ಕಾಲೇಜಿನ ನೀತಿ ನಿಯಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಿದರು.

ಸಹಾಯಕ ಧರ್ಮಗುರು ಫಾ| ವಿಜಯ್‌ ಡಿ’ಸೋಜಾ, ವಿದ್ಯಾರ್ಥಿಗಳ ಪೋಷಕರ ಪ್ರತಿನಿಧಿಯಾಗಿ ವೇಲಾ ಬ್ರಗಾಂಜಾ, ದೇವದಾಸ್‌ ವಿ.ಜೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಉಪ ಪ್ರಾಂಶುಪಾಲೆ ಮಂಜುಳಾ ನಾಯರ್‌ ಸ್ವಾಗತಿಸಿದರು. ಪ್ರಾಧ್ಯಾಪಕಿಯರಾದ ಅಸ್ಮಿತಾ ಕೊರೆಯಾ, ಸ್ವಾತಿ, ನಿಶಾ ಸುವಾರಿಸ್‌ ಮತ್ತು ವಿದ್ಯಾರ್ಥಿನಿ ಮೇಲಿಟಾ ಡಿಸೋಜಾ ನಿರ್ವಹಿಸಿದರು. ಮೇಲಿÅಯಾ ಕ್ರಾಸ್ತಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next