Advertisement
ಮುಖ್ಯ ನ್ಯಾಯಮೂರ್ತಿಗಳ ಮೇಲಿನ ಆರೋಪವು ಅವರ ವಿರುದ್ಧ ನಡೆಯುತ್ತಿರುವ ಸಂಚಿನ ಒಂದು ಭಾಗವೇ ಎಂಬುದರ ಕುರಿತಾಗಿ ತನಿಖೆ ಮಾಡಲು ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎ.ಕೆ. ಪಟ್ನಾಯಕ್ ಅವರನ್ನು ನೇಮಿಸಲಾಗಿತ್ತು. ನ್ಯಾಯವಾದಿ ಉತ್ಸವ್ ಸಿಂಗ್ ಬೈನ್ಸ್ ಅವರು ಸಲ್ಲಿಸಿದ ಅಫಿದವಿತ್ ಸಹಿತ ಹಲವು ವಿಚಾರಗಳನ್ನು ಪರಿಶೀಲಿಸುವಂತೆ ಅವರಿಗೆ ಮನವಿ ಮಾಡಲಾಗಿತ್ತು. ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ದಾಖಲಿಸಿರುವ ಲೈಂಗಿಕ ಕಿರುಕುಳದ ದೂರು ಸುಳ್ಳು. ಅದು ನ್ಯಾ| ಗೊಗೊಯ್ ವಿರುದ್ಧ ನ್ಯಾಯಾಲಯದ ಕೆಲವು ಮಾಜಿ ನೌಕರರು, ಪ್ರಭಾವಶಾಲಿ ಉದ್ಯಮಿಗಳು ಹಾಗೂ ಕಾರ್ಪೊರೇಟ್ ಸಂಸ್ಥೆಗಳ ಸಂಚು ಎಂದು ಬೈನ್ಸ್ ಅವರು ಆರೋಪಿಸಿದ್ದರು.
Related Articles
Advertisement
ಮಹಿಳೆಯ ದಿಟ್ಟತನ
ಮುಖ್ಯ ನ್ಯಾಯಮೂರ್ತಿ ಗೊಗೊಯ್ ವಿರುದ್ಧ ದೂರಿತ್ತ ಮಹಿಳೆಯೂ ‘ಲೈಂಗಿಕವಾಗಿ ದುರ್ಬಲ ವರ್ಗದ’ ಸಾಮಾನ್ಯ ಸದಸ್ಯೆಯೇನಲ್ಲ. ಆಕೆಯಲ್ಲಿ ಧೈರ್ಯ, ಮನೋಬಲ ಇದ್ದಂತಿದೆ. ಬಾಹ್ಯ ಬೆಂಬಲವೂ ಇರುವಂತಿದೆ. ಆಂತರಿಕ ಸಮಿತಿಯ ಸದಸ್ಯರು ಯಾರಾಗಬೇಕು ಎಂಬುದನ್ನು ಅವರು ಅಕ್ಷರಶಃ ನಿರ್ದೇಶಿಸಿದರು. ಹಿರಿಯ ನ್ಯಾಯಮೂರ್ತಿ ಎನ್.ವಿ. ರಮಣ್ ಅವರನ್ನು ಸಮಿತಿಯನ್ನು ಸೇರಿಸಿಕೊಳ್ಳುವುದನ್ನು ಈ ಮಹಿಳೆ ಆರಂಭದಲ್ಲೇ ವಿರೋಧಿಸಿದರು. ಮುಖ್ಯ ನ್ಯಾಯಾಧೀಶರ ನಿವಾಸಕ್ಕೆ ಅವರು ಆಗಾಗ ಭೇಟಿ ನೀಡುತ್ತಾರೆ ಎಂಬುದೇ ಇದಕ್ಕೆ ಕಾರಣವಾಗಿತ್ತು. ಹೀಗಾಗಿ ಜಸ್ಟೀಸ್ ರಮಣ್ ಅವರು ನ್ಯಾಯಪೀಠದಲ್ಲಿ ಕೂರಲು ನಿರಾಕರಿಸಿದರು. ವಕೀಲರು ಪ್ರತಿನಿಧಿಸಲು ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ಈ ಮಹಿಳೆ ನ್ಯಾಯಪೀಠದ ವಿಚಾರಣೆಯಿಂದಲೂ ಹೊರನಡೆದರು. ಒಬ್ಬ ಮುನ್ಸಿಫ್ ಅಥವಾ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಅವರನ್ನು ಎದುರು ಹಾಕಿಕೊಳ್ಳಲು ದೂರುದಾರರು ಅಥವಾ ವಕೀಲರು ಹಿಂದೇಟು ಹಾಕುತ್ತಿರುವ ಸನ್ನಿವೇಶದಲ್ಲಿ ಈ ಮಹಿಳೆ ಭಾರತದ ಮುಖ್ಯ ನ್ಯಾಯಮೂರ್ತಿಗಳ ಜತೆಗೇ ಸಂಘರ್ಷಕ್ಕೆ ಇಳಿದರು!
ಬೆಂಕಿಯೊಂದಿಗೆ ಸರಸಸುಪ್ರೀಂ ಕೋರ್ಟ್ ನಲ್ಲಿರುವ ‘ಫಿಕ್ಸರ್’ಗಳ ಕುರಿತು ಮಾತನಾಡುವಾಗ ನ್ಯಾ| ಅರುಣ್ ಮಿಶ್ರಾ ಅವರು ಇತ್ತೀಚೆಗೆ ಆಡಿದ ಮಾತುಗಳನ್ನು ನೆನಪು ಮಾಡಿಕೊಳ್ಳಬೇಕು. ‘ಶ್ರೀಮಂತರು ಹಾಗೂ ಬಲಾಡ್ಯರು ನ್ಯಾಯಾಲಯವನ್ನು ತಮ್ಮಿಚ್ಛೆಯಂತೆ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಅವರು ಬೆಂಕಿಯೊಂದಿಗೆ ಸರಸ ಆಡುತ್ತಿದ್ದಾರೆ’ ಎಂದಿದ್ದರು. ಶ್ರೀಮಂತರು ಹಾಗೂ ಪ್ರಭಾವಿಗಳು ಅತಿ ಹೆಚ್ಚು ಫೀಸ್ ಪಡೆಯುವ ವಕೀಲರನ್ನೇ ನೇಮಿಸಿಕೊಳ್ಳುತ್ತಿದ್ದಾರೆ. ಅವರು ತಮ್ಮ ದಾಷ್ಟ್ಯರ್ದ ಮೂಲಕವೇ ಕೆಲವಾದರೂ ನ್ಯಾಯಮೂರ್ತಿಗಳನ್ನು ‘ನೋಡಿಕೊಳ್ಳುವಲ್ಲಿ’ ಯಶಸ್ವಿಯಾಗುತ್ತಾರೆ ಎಂಬ ಅಭಿಪ್ರಾಯ ಜನಸಾಮಾನ್ಯರಲ್ಲಿ ಮೂಡಿದೆ. ಬೆಂಗಳೂರಿನ ಉದ್ಯಮಿಯೊಬ್ಬರು ನನ್ನನ್ನು ಭೇಟಿಯಾಗಿದ್ದರು. ಅವರು ತಮಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳೂ ತಮ್ಮ ವಿರುದ್ಧ ತೀರ್ಪು ನೀಡಲಾರರು ಎಂದು ಬಹಿರಂಗವಾಗಿಯೇ ಹೇಳುತ್ತಿದ್ದರು. ಮುಂದೆ ನ್ಯಾಯಾಲಯವೂ ಅವರ ಪ್ರಕರಣವನ್ನು ವಜಾಗೊಳಿಸಿತು! ನ್ಯಾಯಮೂರ್ತಿಗಳ ಘನತೆಯ ವಿಚಾರದಲ್ಲಿ ಕೆಲವು ನ್ಯಾಯವಾದಿಗಳೇ ಜನರ ಮನಸ್ಸನ್ನು ಎಲ್ಲ ಹಂತಗಳಲ್ಲೂ ಕಲುಷಿತಗೊಳಿಸುತ್ತಿದ್ದಾರೆ. ನ್ಯಾಯಾಂಗದ ಅಧಿಕಾರಿಗಳ ವಿರುದ್ಧ ಹೇರಳವಾಗಿ ಬರುವ ಬೇನಾಮಿ ದೂರುಗಳನ್ನು ಹೈಕೋರ್ಟ್ ನ್ಯಾಯಮೂರ್ತಿಗಳ ಪರಿಶೀಲನೆಗೆ ಕಳುಹಿಸಲಾಗುತ್ತದೆ. ಅದೇ ರೀತಿ, ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನೂ ಗುರಿಯಾಗಿಸಿ ಆರೋಪಗಳನ್ನು ಮಾಡಲಾಗುತ್ತದೆ. ಕಹಿಗುಳಿಗೆ
ನಮ್ಮದು ಮಧ್ಯವರ್ತಿಗಳ ದೇಶ. ಇದಕ್ಕೆ ದೇಶದ ಸರ್ವೋಚ್ಚ ನ್ಯಾಯಾಲಯವೂ ಹೊರತಾಗಿಲ್ಲ ಎಂಬುದರಲ್ಲಿ ಆಶ್ಚರ್ಯವೇನೂ ಇಲ್ಲ. ರಾಜೀವ್ ಗಾಂಧಿ ಅವರು ಹೇಳಿದಂತೆ ರಾಜಕಾರಣದಲ್ಲಿ ಕೆಲವು ಪ್ರಖ್ಯಾತ ಫಿಕ್ಸರ್‌ಗಳು ಹಾಗೂ ಪವರ್ ಬ್ರೋಕರ್‌ಗಳು ಇರುತ್ತಾರೆ. ಅವರು ಮಂತ್ರಿಗಳಿಗೂ ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಾರೆ. ಸರಕಾರಗಳ ರಚನೆ ಮತ್ತು ಕೆಡವಲು ಶಕ್ತರಾಗಿರುತ್ತಾರೆ. ವಿಧಾನಸೌಧದಲ್ಲಿ ಮಂತ್ರಿಗಳ ಅಥವಾ ಸಂಸತ್ತಿನಲ್ಲಿ ಕೇಂದ್ರ ಸಚಿವರ ಕೋಣೆಗಳಿಗೂ ಅವರಿಗೆ ಸುಲಭವಾಗಿ ಪ್ರವೇಶ ಸಿಗುತ್ತದೆ. ಹಲವು ಕಾರ್ಪೊರೇಟ್ ಕಂಪನಿಗಳು ಮಂತ್ರಿಗಳ ಮೇಲೆ ಪ್ರಭಾವ ಬೀರಲೆಂದೇ ಕೆಲವರನ್ನು ನೇಮಿಸಿಕೊಳ್ಳುತ್ತವೆ. ಇತ್ತೀಚೆಗೆ ರಿಲಯನ್ಸ್ ಸಂಸ್ಥೆಯ ಉದ್ಯಮಿ ಅನಿಲ್ ಅಂಬಾನಿ ಅವರು ಟೆಲಿಕಾಂ ಕಂಪನಿಯೊಂದಕ್ಕೆ ಬಾಕಿ ಇರಿಸಿಕೊಂಡಿದ್ದ ದೊಡ್ಡ ಮೊತ್ತವನ್ನು ಪಾವತಿಸುವಂತೆ ನಿರ್ದೇಶನ ನೀಡಿ ಒಳ್ಳೆಯ ಕೆಲಸವನ್ನೇ ಮಾಡಿದೆ. ಹಣದ ಮೂಲಕ ಏನನ್ನಾದರೂ ಖರೀದಿಸಬಹುದು ಎಂಬ ಭ್ರಮೆಯಲ್ಲಿರುವ ವ್ಯಕ್ತಿಗಳಿಗೆ ಈ ಮೂಲಕ ಕಹಿಗುಳಿಗೆ ತಿನ್ನಿಸಿದೆ. ಜಸ್ಟೀಸ್ ಎ.ಕೆ. ಪಟ್ನಾಯಕ್ ಅವರ ನೇತೃತ್ವದ ಸಮಿತಿಯ ತನಿಖೆ ಕುರಿತು ತೀವ್ರ ಕುತೂಹಲವಿದೆ. ಆಂತರಿಕ ಸಮಿತಿ ಈ ಸೂಕ್ಷ್ಮ ವಿಚಾರದಲ್ಲಿ ತನ್ನ ಕೆಲಸವನ್ನು ಹೇಗೆ ನಿರ್ವಹಿಸುತ್ತದೆ ಎಂಬುದನ್ನೂ ನೋಡಬೇಕಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ವಿರುದ್ಧದ ಆರೋಪಗಳ ತನಿಖೆಗೂ ಆಂತರಿಕ ವಿಧಾನವನ್ನು ಅನುಸರಿಸಲಾಯಿತು. ಇಲ್ಲದಿದ್ದರೆ ಈ ವಿಚಾರ ಸದನ ಸಮಿತಿಗೆ ವರ್ಗಾವಣೆ ಆಗುತ್ತಿತ್ತು. ಅಲ್ಲಿ ರಾಜಕೀಯ ಪ್ರವೇಶವೂ ಆಗುತ್ತಿತ್ತು ಎಂಬುದು ಸ್ಪಷ್ಟ.