Advertisement

ಅತಿಥಿ ಉಪನ್ಯಾಸಕರಿಗೆ ಕನಿಷ್ಠ 25 ಸಾವಿರ ರೂ. ಪಾವತಿಸಿ

10:57 PM Oct 14, 2019 | Lakshmi GovindaRaju |

ಬೆಂಗಳೂರು: ರಾಜ್ಯದ 423 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಸಾವಿರಾರು ಅತಿಥಿ ಉಪನ್ಯಾಸಕರು ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಸೇವಾ ಭದ್ರತೆ ಹಾಗೂ ಗೌರವಧನ ವಿಚಾರದಲ್ಲಿ ಆನ್ಯಾಯವಾಗುತ್ತಿದೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ, ಜೆಡಿಎಸ್‌ ವಕ್ತಾರ ರಮೇಶ್‌ ಬಾಬು ಆರೋಪಿಸಿದ್ದಾರೆ.

Advertisement

ಅತಿಥಿ ಉಪನ್ಯಾಸಕರಿಗೆ ಯುಜಿಸಿ ನಿಯಮಾವಳಿ ಪ್ರಕಾರ ಕನಿಷ್ಠ 50 ಸಾವಿರ ರೂ. ಮಾಸಿಕ ಗೌರವಧನ ನೀಡುವ ಅವಕಾಶವಿದ್ದು, ಆದರೆ, ಕೊಡುತ್ತಿಲ್ಲ. 3 ತಿಂಗ‌ಳ ಹಿಂದೆ ಅತಿಥಿ ಉಪನ್ಯಾಸಕರಿಗೆ ಈಗ ನೀಡುತ್ತಿರುವ ಗೌರವಧನದ ಜತೆಗೆ ಐದು ಸಾವಿರ ರೂ. ಹೆಚ್ಚುವರಿ ನೀಡುವ ಆದೇಶ ಹೊರಡಿಸಲಾಯಿತು.

ಆದರೆ, ಅದೂ ಪಾವತಿಯಾ ಗುತ್ತಿಲ್ಲ. ಹೀಗಾಗಿ, ಅತಿಥಿ ಉಪನ್ಯಾಸ ಕರಿಗೆ ಮಾಸಿಕ ಕನಿಷ್ಠ 25 ಸಾವಿರ ರೂ. ನೀಡಬೇಕು. ರಜೆ ಅವಧಿ ಕಡಿತಗೊಳಿಸದೆ ಪೂರ್ಣ ಪ್ರಮಾಣದ ವೇತನ ನೀಡಬೇಕು. ಮಹಿಳಾ ಅತಿಥಿ ಉಪನ್ಯಾಸಕರಿಗೆ ಹೆರಿಗೆ ಭತ್ಯೆ ಸೌಲಭ್ಯ ನೀಡಬೇಕೆಂದು ಆಗ್ರಹಿಸಿದ್ದಾರೆ. ಅತಿಥಿ ಉಪನ್ಯಾಸ ಕರ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next