ಲಕ್ಷ್ಮೇಶ್ವರ: ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ಶ್ರೀ ಅಂಬಾಭವಾನಿ ನೂತನ ದೇವಸ್ಥಾನ ಲೋಕಾರ್ಪಣೆ ಮತ್ತು ದೇವಿ ಮೂರ್ತಿಯ ಪುನರ್ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಗುರುವಾರ ಶ್ರೀ ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮಾಜದಿಂದ ದೇವಿ ಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು. ಪಟ್ಟಣದ ಭಾವಸಾರ ಕ್ಷತ್ರೀಯ ಸಮಾಜದ ಪಾಂಡುರಂಗ ದೇವಸ್ಥಾನದಿಂದ ಹೊರಟ ಭವ್ಯ ಮೆರವಣಿಗೆಯಲ್ಲಿ ನೂರಾರು ಮುತ್ತೈದೆಯಯರಿಂದ ಪೂರ್ಣಕುಂಭ ಕಳಸ, ಸಮಾಜ ಬಾಂಧವರಿಂದ ಫಂಡರಿ ಸಂಪ್ರದಾಯ ಭಜನೆ, ಮಂಗಲ ವಾದ್ಯ, ವೇಷಭೂಷಣ, ಯಕ್ಷಗಾನ, ಗೊಂಬೆಗಳ ನೃತ್ಯ ಮೆರಗು ನೀಡಿತು.
ಮೆರವಣಿಗೆಯಲ್ಲಿ ಪುರುಷರು ಶ್ವೇತ ವಸ್ತ್ರ ಮತ್ತು ಮಹಿಳೆಯರು ಗುಲಾಬಿ ಹಸಿರು ಬಣ್ಣದ ಸೀರೆಯುಟ್ಟು ಗಮನ ಸೆಳೆದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಶ್ರದ್ಧಾಭಕ್ತಿಯಿಂದ ನಡೆದ ದೇವಿಮೂರ್ತಿಯ ಮೆರವಣಿಗೆ ನಂತರ ನೂತನ ದೇವಸ್ಥಾನದಲ್ಲಿ ಜಲಾ ವಾಸಕ್ಕೆ ಅಣಿಯಾಯಿತು. ದೇವಿಮೂರ್ತಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಮಾಜಿ ಶಾಸಕ ಜಿ.ಎಸ್.ಗಡ್ಡದೇವರಮಠ, ಜಿ.ಎಂ.ಮಹಾಂತಶೆಟ್ಟರ ಅವರು, ಶ್ರೀ ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮಾಜ ಚಿಕ್ಕದಾದರೂ, ಸಮಾಜದವರ ಕಾರ್ಯ ಅತ್ಯಂತ ವಿಶೇಷ ಮತ್ತು ಇತರೆಲ್ಲ ಸಮಾಜಕ್ಕೆ ಮಾದರಿಯಾಗಿರುತ್ತದೆ. ದೇವರು, ಧರ್ಮ ಕಾರ್ಯಗಳ ಬಗ್ಗೆ ಅತ್ಯಂತ ಶ್ರದ್ಧೆ, ಭಕ್ತಿ, ನಂಬಿಕೆ ಮತ್ತು ತನು-ಮನ-ಧನದ ಸೇವಾ ಮನೋಭಾವ ಇರುವುದರಿಂದಲೇ ಭವ್ಯ ದೇವಸ್ಥಾನ ನಿರ್ಮಾಣ ಸಾಧ್ಯವಾಗಿದೆ ಎಂದರು.
ಈ ವೇಳೆ ಪಂಚಮಸಾಲಿ ಸಮಾಜದ ಮಾಜಿ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ, ಹಾಲುಮತ ಸಮಾಜದ ಅಧ್ಯಕ್ಷ ನಿಂಗಪ್ಪ ಬನ್ನಿ, ಆನಂದಯ್ಯ ಗಡ್ಡದೇವರಮಠ, ಗುರುನಾಥ ದಾನಪ್ಪನವರ, ರಾಜೀವ ಕುಂಬಿ, ಪಂಚ ಟ್ರಸ್ಟ್ ಕಮಿಟಿಯ ಲಕ್ಷ್ಮಣಸಾ ರಾಜೋಳಿ, ತುಕಾರಾಮಸಾ ಬದಿ, ವಿಠ್ಠಲಸಾ ಶಿದ್ಲಿಂಗ, ಆನಂದಸಾ ಬದಿ, ಯಲ್ಲಪ್ಪ ಬದಿ, ತಿಪ್ಪಣ್ಣಸಾ ಬಾಕಳೆ, ಪಾಂಡುಸಾ ಬದಿ, ಛಾಯಾಸಾ ಬದಿ, ಗಣಪತಸಾ ಪೂಜಾರಿ, ರಂಗನಾಥಸಾ ಬದ್ದಿ, ಶಾಂತಾಬಾಯಿ ಪವಾರ, ಸರೋಜಾಬಾಯಿ ಬದ್ದಿ, ಇಂದುಬಾಯಿ ಬದ್ದಿ, ಲಕ್ಷ್ಮೀಬಾಯಿ ಬದ್ದಿ, ಲೀಲಾಬಾಯಿ ಬಾಕಳೆ, ಶೋಭಾಬಾಯಿ ಬಸವಾ, ಕಲಾವಿದ ಶಾಂತರಾಮ ಸೇರಿ ಸೋಮವಂಶ, ಭಾವಸಾರ ಕ್ಷತ್ರೀಯ ಸಮಾಜ ಬಾಂಧವರು, ಗಣ್ಯರು ಪಾಲ್ಗೊಂಡಿದ್ದರು.
ಜೂ.17, 18, 19 ರಂದು ದೇವಸ್ಥಾನದಲ್ಲಿ ನಿತ್ಯ ಪೂಜೆ, ಹೋಮ, ಹವನ, ಪಾರಾಯಣ, ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ಜೂ. 20 ರಂದು ಬ್ರಾಹ್ಮಿà ಮುಹೂರ್ತದಲ್ಲಿ ಶ್ರೀ ದೇವಿ ಮೂರ್ತಿಯ ಉತ್ಥಾಪನ, ಪ್ರಾಣ ಪ್ರತಿಷ್ಠಾಪನಾ ಪೂಜಾ ಕಾರ್ಯಕ್ರಮ, ನಂತರ ಬೆಳಿಗ್ಗೆ 10ಕ್ಕೆ ಧರ್ಮಸಭೆ ನಡೆಯಲಿದೆ. ಹುಬ್ಬಳ್ಳಿ ಅಧೈತ ವಿದ್ಯಾಶ್ರಮದ ಪೂಜ್ಯ ಶ್ರೀ ಪ್ರಣವಾನಂದ ತೀರ್ಥ ಶ್ರೀಗಳು ಮತ್ತು ಶಿರಹಟ್ಟಿ ಶ್ರೀ ಫಕೀರೇಶ್ವರ ಸಂಸ್ಥಾನಮಠದ ಉತ್ತರಾ ಧಿಕಾರಿಗಳಾದ ಫಕೀರ ದಿಂಗಾಲೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸುವರು. ಶ್ರೀನಿವಾಸ ಹರೀಸಾ ಖೋಡೆ ಅವರಿಂದ ದೇವಸ್ಥಾನ ಲೋಕಾರ್ಪಣೆ ನೆರವೇರಲಿದೆ.