Advertisement

ಶರಣಬಸವೇಶ್ವರ ದೇವಸ್ಥಾನದ ಮಹಾದ್ವಾರ ಉದ್ಘಾಟನೆ

02:40 PM May 04, 2022 | Team Udayavani |

ಕಾರಟಗಿ: ಪಟ್ಟಣದ ಆರಾಧ್ಯ ದೈವ, ಇತಿಹಾಸ ಪ್ರಸಿದ್ಧ ಶ್ರೀ ಶರಣಬಸವೇಶ್ವರ ದೇವಸ್ಥಾನದ ಮಹಾದ್ವಾರವನ್ನು ಮಂಗಳವಾರ ಲೋಕಾರ್ಪಣೆಗೊಳಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾಜಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಕಲಬುರ್ಗಿಯ ಮಹಾ ದಾಸೋಹಿ, ಜ್ಞಾನಿ, ಕಾಯಕಯೋಗಿ ಶ್ರೀ ಶರಣಬಸವೇಶ್ವರರು 18ನೇ ಶತಮಾನದ ಸಂತರು ತಮ್ಮ ತ್ರಿವಿಧ ದಾಸೋಹದ ಮೂಲಕ ಈ ನಾಡಿಗೆ ಪ್ರೇರಣೆಯಾದಂತೆ ವಾಣಿಜ್ಯ ನಗರಿ ಕಾರಟಗಿ ಪಟ್ಟಣಕ್ಕೂ ಪ್ರೇರಣೆಯಾಗಿದ್ದಾರೆ. ಹಲವು ದಶಕಗಳ ಹಿಂದೆ ಪಟ್ಟಣದಲ್ಲಿ ದೇವಸ್ಥಾನ ನಿರ್ಮಾಣವಾಗಿ ನಿತ್ಯ ಪೂಜೆ, ಪ್ರತಿ ವರ್ಷ ಜಾತ್ರೆ, ಅನ್ನದಾಸೋಹ ನಡೆಸಿಕೊಂಡು ಬರಲಾಗಿದೆ. ಇಂದು ಆ ದೇವಸ್ಥಾನದ ಸುಂದರವಾದ ಮಹಾದ್ವಾರ (ಸ್ವಾಗತ ಕಮಾನ)ವನ್ನು ದೇವಸ್ಥಾನ ಟ್ರಸ್ಟ್‌ ಕಮಿಟಿಯವರು ದಾನಿಗಳ ನೆರವಿನಿಂದ ನಿರ್ಮಿಸಿ ಲೋಕಾರ್ಪಣೆಗೊಳಿಸಿರುವುದು ಸಂತಸದ ವಿಷಯ. ಶ್ರೀ ಶರಣಬಸವೇಶ್ವರರು ಈ ನಾಡಿನ ಭಕ್ತರ ಮನೋಭಿಲಾಷೆಗಳನ್ನು ಈಡೇರಿಸಿ ಸಮೃದ್ಧ ಮಳೆ, ಬೆಳೆಯನ್ನು ಕರುಣಿಸಲಿ ಎಂದರು.

ದೇವಸ್ಥಾನ ಸಮಿತಿಯಿಂದ ಶಾಸಕ ಬಸವರಾಜ ಧಡೇಸುಗೂರ, ಮಾಜಿ ಸಚಿವ ಶಿವರಾಜ ತಂಗಡಗಿ, ಬಿಜೆಪಿ ಮುಖಂಡ ತಿಮ್ಮಾರೆಡ್ಡಿ ಗಿಲ್ಲೇಸೂಗೂರು, ಪುರಸಭೆ ಸದಸ್ಯೆ ಸೌಮ್ಯ ಮಹೇಶ್‌ ಕಂದಗಲ್‌ ದಂಪತಿ, ಪ್ರಮುಖರಾದ ಗುಂಡಪ್ಪ ಕುಳಗಿ, ಬೂದಿ ಗಿರಿಯಪ್ಪ, ಉದ್ಯಮಿ ವೀರೇಶಪ್ಪ ಚಿನಿವಾಲ್‌, ಶಿವರೆಡ್ಡಿ ನಾಯಕ್‌, ವೀರೇಶ ಸಾಲೋಣಿ, ಹಾಗೂ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ಅವರನ್ನು ಸನ್ಮಾನಿಸಲಾಯಿತು. ಪುರಸಭೆ ಸದಸ್ಯರಾದ ಹಿರೇಬಸಪ್ಪ ಸಜ್ಜನ್‌, ಸೋಮಶೇಖರ ಬೇರಿಗೆ, ರಾಜಶೇಖರ ಸಿರಿಗೇರಿ, ಅರ್ಚಕ ಮುತ್ತಯ್ಯ ಸ್ವಾಮಿ, ಪ್ರಮುಖರಾದ ಜಗದೀಶ ಅವರಾದಿ, ಕಿರಾಣಿ ವರ್ತಕರ ಸಂಘದ ಮಲ್ಲಿಕಾರ್ಜುನ ಕೊಟಗಿ, ಖಾಜಾ ಹುಸೇನ್‌ ಮುಲ್ಲಾ, ಅಮರೇಶಪ್ಪ ಸಾಲಗುಂದಾ, ಶರಣಪ್ಪ ಗದ್ದಿ, ಶರಣಪ್ಪ ದಿವಟರ್‌, ಬಾಬುಸಾಬ್‌ ಬಳಿಗಾರ್‌, ಬಸನಗೌಡ ಕಾಯಿ ಅಂಗಡಿ, ಕಲ್ಯಾಣಪ್ಪ ರೌಡಕುಂದಿ, ಪಾಲಾಕ್ಷಪ್ಪ ಕೆಂಡದ್‌ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next