Advertisement
ಈ ಸಂದರ್ಭದಲ್ಲಿ ಮಾಜಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಕಲಬುರ್ಗಿಯ ಮಹಾ ದಾಸೋಹಿ, ಜ್ಞಾನಿ, ಕಾಯಕಯೋಗಿ ಶ್ರೀ ಶರಣಬಸವೇಶ್ವರರು 18ನೇ ಶತಮಾನದ ಸಂತರು ತಮ್ಮ ತ್ರಿವಿಧ ದಾಸೋಹದ ಮೂಲಕ ಈ ನಾಡಿಗೆ ಪ್ರೇರಣೆಯಾದಂತೆ ವಾಣಿಜ್ಯ ನಗರಿ ಕಾರಟಗಿ ಪಟ್ಟಣಕ್ಕೂ ಪ್ರೇರಣೆಯಾಗಿದ್ದಾರೆ. ಹಲವು ದಶಕಗಳ ಹಿಂದೆ ಪಟ್ಟಣದಲ್ಲಿ ದೇವಸ್ಥಾನ ನಿರ್ಮಾಣವಾಗಿ ನಿತ್ಯ ಪೂಜೆ, ಪ್ರತಿ ವರ್ಷ ಜಾತ್ರೆ, ಅನ್ನದಾಸೋಹ ನಡೆಸಿಕೊಂಡು ಬರಲಾಗಿದೆ. ಇಂದು ಆ ದೇವಸ್ಥಾನದ ಸುಂದರವಾದ ಮಹಾದ್ವಾರ (ಸ್ವಾಗತ ಕಮಾನ)ವನ್ನು ದೇವಸ್ಥಾನ ಟ್ರಸ್ಟ್ ಕಮಿಟಿಯವರು ದಾನಿಗಳ ನೆರವಿನಿಂದ ನಿರ್ಮಿಸಿ ಲೋಕಾರ್ಪಣೆಗೊಳಿಸಿರುವುದು ಸಂತಸದ ವಿಷಯ. ಶ್ರೀ ಶರಣಬಸವೇಶ್ವರರು ಈ ನಾಡಿನ ಭಕ್ತರ ಮನೋಭಿಲಾಷೆಗಳನ್ನು ಈಡೇರಿಸಿ ಸಮೃದ್ಧ ಮಳೆ, ಬೆಳೆಯನ್ನು ಕರುಣಿಸಲಿ ಎಂದರು.
Advertisement
ಶರಣಬಸವೇಶ್ವರ ದೇವಸ್ಥಾನದ ಮಹಾದ್ವಾರ ಉದ್ಘಾಟನೆ
02:40 PM May 04, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.