Advertisement

ಚಿತ್ತಾಪುರದಲ್ಲಿ ನಡೆಯಲಿದೆ ಬಸವಣ್ಣನ ಭವ್ಯ ಮೆರವಣಿಗೆ

02:27 PM Apr 29, 2017 | Team Udayavani |

ಚಿತ್ತಾಪುರ: ಬಿಸಿಲು ನಾಡು, ತೊಗರಿ ಖಣಜ ಎಂದೇ ಖ್ಯಾತಿ ಪಡೆದ ಪಟ್ಟಣದ ಎಪಿಎಂಸಿ ಆವರಣದಲ್ಲಿ ಏ.29ರಂದು ಜಗಜ್ಯೋತಿ ಬಸವಣ್ಣನವರ ಜಯಂತಿ ಹಾಗೂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ನಡೆಯಲಿದ್ದು, ಇದಕ್ಕಾಗಿ ವೇದಿಕೆ ಸಜ್ಜಾಗಿದೆ. ಪ್ರವಾಸೋದ್ಯಮ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಉದ್ಘಾಟಿಸಲಿದ್ದಾರೆ. 

Advertisement

ಬಸವ ಜಯಂತ್ಯುತ್ಸವ ಹಾಗೂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಅಧ್ಯಕ್ಷ ನಾಗರೆಡ್ಡಿ ಪಾಟೀಲ ಕರದಾಳ ಅಧ್ಯಕ್ಷತೆಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಶನಿವಾರ ಬೆಳಗ್ಗೆ 9:00ಕ್ಕೆ ಪ್ರವಾಸೋದ್ಯಮ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ, ತಹಶೀಲ್ದಾರ ಮಲ್ಲೇಶಾ ತಂಗಾ, ಸಮಿತಿ ಅಧ್ಯಕ್ಷ ನಾಗರೆಡ್ಡಿ ಪಾಟೀಲ ಕರದಾಳ ಸೇರಿದಂತೆ ವಿವಿಧ ಗಣ್ಯರಿಂದ ಪಟ್ಟಣದ ತಹಶೀಲ್ದಾರ ಕಚೇರಿಯಿಂದ ಭವ್ಯ ಮೆರವಣಿಗೆಗೆ ಚಾಲನೆ ದೊರೆಯಲಿದೆ. 

ತಹಶೀಲ್ದಾರ ಕಚೇರಿಯಿಂದ ಬಸವಣ್ಣನ ಮೆರವಣಿಗೆ ಆರಂಭಗೊಳ್ಳಲಿದ್ದು, ಸ್ಟೇಷನ್‌ ರಸ್ತೆ, ನಾಗಾವಿ ವೃತ್ತ, ಜನತಾ ಚೌಕ್‌, ಚಿತ್ತಾವಲಿ ವೃತ್ತ, ಹಳೆ ಬಸವೇಶ್ವರ ವೃತ್ತ, ಭುವನೇಶ್ವರಿ ಚೌಕ್‌, ಅಂಬೇಡ್ಕರ್‌ ವೃತ್ತ, ಬಸವೇಶ್ವರ ವೃತ್ತದಲ್ಲಿ ಹಾಯ್ದು ಎಪಿಎಂಸಿ ಆವರಣದಲ್ಲಿ ನಡೆಯುವ ಕಾರ್ಯಕ್ರಮದ ಪ್ರಧಾನ ವೇದಿಕೆ ತಲುಪಲಿದೆ. 

ನಂತರ ಎಪಿಎಂಸಿ ಆವರಣದಲ್ಲಿ ನಡೆಯುವ ಬಸವ ಜಯಂತಿ ಹಾಗೂ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಸಾನಿಧ್ಯವನ್ನು ಕಾಶೀ ಪೀಠದ ಕಾಶಿ ಜಂಗಮವಾಡಿಮಠದ ಶ್ರೀ 1008 ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ವಹಿಸುವರು. ಪ್ರವಾಸೋದ್ಯಮ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ ಖರ್ಗೆ ಮಾತನಾಡುವರು. 

ನಾಲವಾರದ ಡಾ| ತೋಟೆಂದ್ರ ಶಿವಾಚಾರ್ಯರು, ಮುಗಳನಾಗಾಂವದ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ನೇತೃತ್ವ ವಹಿಸುವರು. ದಿಗ್ಗಾಂವದ ಸಿದ್ಧವೀರ ಶಿವಾಚಾರ್ಯರು, ತೋನಸನಳ್ಳಿಯ(ಎಸ್‌) ಶ್ರೀ ಮಲ್ಲಣಪ್ಪ ಸ್ವಾಮಿಗಳು, ಅಳ್ಳೊಳ್ಳಿಯ ಸಂಗಮನಾಥ ಸ್ವಾಮಿಗಳು, ಕೋಡ್ಲಾದ ನಂಜುಂಡಯ್ಯ ಸ್ವಾಮಿಗಳು, ಶ್ರೀನಿವಾಸ ಸರಡಗಿಯ ಅಪ್ಪಾರಾವ್‌ ದೇವಿ ಮುತ್ಯಾ,

Advertisement

ಬೆಳಗುಂಪಾದ ಶ್ರೀ ಶಿವಗಂಗಾಧರ ಸ್ವಾಮಿಗಳು, ಚಿತ್ತಾಪುರದ ಬ್ರಹ್ಮಕುಮಾರಿ ಗಿರಿಜಾ ಅಕ್ಕ, ಮರೆಪ್ಪ ತಾತಾ ಹಾಜರಿರುವರು. ಪ್ರವಾಸೋದ್ಯಮ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ ಖರ್ಗೆ ಉದ್ಘಾಟಿಸುವರು. ತಹಶೀಲ್ದಾರ  ಮಲ್ಲೇಶಾ ತಂಗಾ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡುವರು. ಕಲಬುರಗಿ ತೊಗರಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ,

ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಹೊತಿನಮಡಿ, ತಾಪಂ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ, ವೀರಶೈವ ಸಮಾಜದ ಗೌರವಾಧ್ಯಕ್ಷ ಲಿಂಗರೆಡ್ಡಿ ಬಾಸರೆಡ್ಡಿ, ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಶಿವರಾವ್‌ ಪಾಟೀಲ, ಯುವ ವೀರಶೈವ ಸಮಾಜದ ಗೌರವಾಧ್ಯಕ್ಷ ಶಿವಕುಮಾರ ಸುಲ್ತಾನಪುರ, ಯುವ ವೀರಶೈವ ಸಮಾಜದ ಅಧ್ಯಕ್ಷ ನಾಗರಾಜ ಭಂಕಲಗಿ,

ತಾಲೂಕು ನ್ಯಾಯವಾದಿ ಸಂಘದ ತಾಲೂಕು ಅಧ್ಯಕ್ಷ ಶರಣಗೌಡ ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸುವರು. 40 ರಿಂದ 50 ಸಾವಿರ ಜನ ಸೇರುವ ನಿರೀಕ್ಷೆಯಿದೆ. ಹೈ.ಕ ಶೈಲಿಯ ಭೋಜನ ವ್ಯವಸ್ಥೆ ಮಾಡಲಾಗಿದೆ. ಸಮಿತಿಯ ಪದಾಧಿಧಿಕಾರಿಗಳು, ಸ್ವಯಂ ಸೇವಕರು ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.    

Advertisement

Udayavani is now on Telegram. Click here to join our channel and stay updated with the latest news.

Next