Advertisement
ಮಾರೇಹಳ್ಳಿ ಪುರಸಭೆ ವ್ಯಾಪ್ತಿಗೆ: ಮಾರೇಹಳ್ಳಿ ಗ್ರಾಮವನ್ನು ಐದು ವರ್ಷಗಳ ಹಿಂದೆ ಮಳವಳ್ಳಿ ಪಟ್ಟಣದ ಪುರಸಭೆ ವ್ಯಾಪ್ತಿಗೆ ಸೇರಿಸಲಾಗಿದೆ. ಆಗ ನಾಗೇಗೌಡನದೊಡ್ಡಿಯನ್ನು ಗ್ರಾಮ ಪಂಚಾಯಿತಿ ಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಈ ವ್ಯಾಪ್ತಿಗೆ ಬೋಸೇಗೌಡನದೊಡ್ಡಿ, ವಡ್ಡರಹಳ್ಳಿ, ಚನ್ನೇಗೌಡ ನದೊಡ್ಡಿ, ತಮ್ಮಡಹಳ್ಳಿ, ಅಂಚೇದೊಡ್ಡಿ, ಅಣ್ಣೆಕೊಪ್ಪಲು ಗ್ರಾಮಗಳು ಒಳಪಟ್ಟಿವೆ.
Related Articles
Advertisement
ದಾಖಲೆಗಳ ಬದಲಾವಣೆಗೆ ನಿರ್ಲಕ್ಷ್ಯ : ಅಧಿಕಾರಿಗಳ ನಿರ್ಲಕ್ಷ್ಯದಿಂದ ಇನ್ನೂ ದಾಖಲೆಗಳಲ್ಲಿ ಬದಲಾವಣೆಯಾಗಿಲ್ಲ. ಐದು ವರ್ಷ ಕಳೆಯುತ್ತಾ ಬಂದರೂ ಇನ್ನೂ ನಾಗೇಗೌಡನದೊಡ್ಡಿ ಗ್ರಾಮ ಪಂಚಾಯಿತಿಯನ್ನಾಗಿ ಮಾರ್ಪಡಿಸಿರುವುದು ಗ್ರಾಮಸ್ಥರ ಬೇಸರಕ್ಕೆ ಕಾರಣವಾಗಿದೆ. ನರೇಗಾ ಹಾಗೂ ಪಂಚತಂತ್ರ ಅಂತರ್ಜಾಲದಲ್ಲಿ ನಾಗೇಗೌಡನದೊಡ್ಡಿ ಗ್ರಾಮ ಪಂಚಾಯಿತಿಯನ್ನಾಗಿ ಬದಲಾಯಿಸುವಂತೆ ಸರ್ಕಾರ, ತಹಶೀಲ್ದಾರ್, ಪಂಚಾಯತ್ ರಾಜ್ ಇಲಾಖೆಯ ಅಂತರ್ಜಾಲ ವಿಭಾಗಕ್ಕೆ ಪತ್ರ ಬರೆಯಲಾಗಿದೆ. ಆದರೂ, ಇನ್ನೂ ಕ್ರಮ ಕೈಗೊಂಡಿಲ್ಲ.
ನಾಗೇಗೌಡನದೊಡ್ಡಿ ಗ್ರಾಮವನ್ನು ಗ್ರಾಮ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಿ ಐದು ವರ್ಷಗಳು ಕಳೆಯುತ್ತಾ ಬಂದರೂ,ಇನ್ನೂ ದಾಖಲಾತಿಗಳಲ್ಲಿ ಬದಲಾಗಿಲ್ಲ. ಕೂಡಲೇ ಅಧಿಕಾರಿಗಳು ಇದರ ಬಗ್ಗೆ ಕ್ರಮ ಕೈಗೊಂಡು ನಾಗೇಗೌಡನದೊಡ್ಡಿ ಗ್ರಾಪಂ ಎಂದು ಎಲ್ಲ ದಾಖಲಾತಿಗಳಲ್ಲೂ ಬದಲಾಯಿಸಬೇಕು. -ರಮೇಶ್ ಪಟೇಲ್, ನಾಗೇಗೌಡನದೊಡ್ಡಿ
ನರೇಗಾ ಹಾಗೂ ಪಂಚತಂತ್ರ ಅಂತರ್ಜಾಲದಲ್ಲಿ ನಾಗೇಗೌಡನದೊಡ್ಡಿ ಗ್ರಾಮ ಪಂಚಾಯಿತಿಯನ್ನಾಗಿ ಬದಲಾಯಿಸುವಂತೆ ಪತ್ರ ಬರೆದು ಮನವಿ ಮಾಡಲಾಗಿದೆ. ಆದರೂ,ಇನ್ನೂ ಬದಲಾವಣೆ ಮಾಡಿಲ್ಲ. ನಾನೇ ಖುದ್ದಾಗಿ ಹೋಗಿ ಬದಲಾಯಿಸಲು ಕ್ರಮ ಕೈಗೊಳ್ಳುತ್ತೇನೆ. ಕಂದಾಯ ಗ್ರಾಮವನ್ನಾಗಿ ಮಾರ್ಪಡಿಸಿಲ್ಲ. – ಮಂಗಳಾ, ಪಿಡಿಒ, ನಾಗೇಗೌಡನದೊಡ್ಡಿ ಗ್ರಾಪಂ
– ಎಚ್.ಶಿವರಾಜು