Advertisement

ಸರ್ಕಾರದ ಯೋಜನೆ ಜನರಿಗೆ ಆಶಾಕಿರಣ; ಶಾಸಕ ಸಿದ್ದು ಸವದಿ

02:43 PM Aug 27, 2022 | Team Udayavani |

ರಬಕವಿ-ಬನಹಟ್ಟಿ: ಬಡವರ ಪರವಾದ ಉಪಯುಕ್ತ ಯೋಜನೆಗಳನ್ನು ಸರಕಾರ ನೀಡಿದೆ. ಈ ಯೋಜನೆಗಳು ನಮ್ಮ ಜೀವನಕ್ಕೆ ಆಶಾಕಿರಣವಾಗಿದೆ. ಇದು ಬಡ ಜನರಿಗೆ ವರದಾನವಾಗಿದೆ. ಪಿಂಚಣಿ ಮಾಡುವ ನಿಟ್ಟಿನಲ್ಲಿ ಮಧ್ಯವರ್ತಿಗಳಿಗೆ ಹಣ ಕೊಡಬೇಡಿ, ಇದು ಸಂಪೂರ್ಣ ಉಚಿತವಾಗಿದೆ ಎಂದು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ, ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.

Advertisement

ಶುಕ್ರವಾರ ರಾಮಪುರನ ದಾನಮ್ಮದೇವಿ ಸಮುದಾಯ ಭವನದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡ ಪಿಂಚಣಿ ಅದಾಲತ್‌ ಉದ್ಘಾಟಿಸಿ ಅವರು ಮಾತನಾಡಿದರು. ಸಂಧ್ಯಾ ಸುರಕ್ಷಾ, ವಿಧವಾ ವೇತನ, ವಿಕಲಚೇತನರ ಮಾಸಾಶನ, ಮನಸ್ವಿನಿ ಸೇರಿದಂತೆ ಎಲ್ಲ ಬಗೆಯ ಮಾಸಾಶನದ ನೀಡಿಕೆಯ ಮೊತ್ತವನ್ನು ಸಿಎಂ ಬಸವರಾಜ ಬೊಮ್ಮಾಯಿ ಹೆಚ್ಚಿಸಿದ್ದಾರೆ. ಸರ್ಕಾರ ನೀಡುವ ಎಲ್ಲ ಯೋಜನೆಗಳನ್ನು ಅರ್ಹರಿಗೆ ತಿಳಿಸಿ ಅವರು ಸರ್ಕಾರದ ನೆರವು ಪಡೆದು ತಮ್ಮ ಬದುಕು ರೂಪಿಸಿಕೊಳ್ಳಲು ಪ್ರಜ್ಞಾವಂತರು ಯತ್ನಿಸಬೇಕೆಂದರು.

ರೈತರ ಮತ್ತು ನೇಕಾರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ನೆರವಾಗಲು ರಾಜ್ಯ ಸರ್ಕಾರ ವಿದ್ಯಾನಿಧಿ ಯೋಜನೆ ನೀಡುತ್ತಿದೆ. ಸರ್ಕಾರದ ವಿವಿಧ ಇಲಾಖೆಗಳಿಂದ ಹೆಚ್ಚುವರಿ ಅನುದಾನ ತಂದು ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ಶ್ರಮಿಸಲು ಬದ್ಧನಾಗಿದ್ದೇನೆ. ಜನತೆಯ ಸೇವೆ ಮಾಡಲು ಸರ್ಕಾರವಿದೆ. ಸರ್ಕಾರಕ್ಕೆ ಜನತೆಯ ಸಹಕಾರದ ಅಗತ್ಯ. ಇಂದು ಒಟ್ಟು 400 ಪಿಂಚಣಿ ಆದೇಶ ಪತ್ರ ವಿತರಿಸಲಾಗುತ್ತಿದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.

ರಬಕವಿ-ಬನಹಟ್ಟಿ ತಹಶೀಲ್ದಾರ್‌ ಎಸ್‌. ಬಿ. ಇಂಗಳೆ ಮಾತನಾಡಿ, ಸಾಮಾಜಿಕ ಭದ್ರತೆ ಯೋಜನೆಯಡಿ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಸರಕಾರ ಈ ಯೋಜನೆ ಪ್ರಾರಂಭಿಸಿದ್ದು, ತಾವು ಅರ್ಜಿ ಸಲ್ಲಿಸಿದ 72 ಗಂಟೆಯಲ್ಲಿ ತಮಗೆ ಪಿಂಚಣಿ ನೀಡುವ ಸೌಲಭ್ಯ ಸರಕಾರ ಕಲ್ಪಿಸಿದೆ ಎಂದರು. ಗ್ರೇಡ್‌-2 ತಹಶೀಲ್ದಾರ್‌ ಎಸ್‌. ಬಿ. ಕಾಂಬಳೆ, ನಗರಸಭೆ ಅಧ್ಯಕ್ಷ ಸಂಜಯ ತೆಗ್ಗಿ, ನಗರ ಯೋಜನಾ ಪ್ರಾ ಧಿಕಾರ ಅಧ್ಯಕ್ಷ ಬಸಪ್ರಭು ಹಟ್ಟಿ, ಗೌರಿ ಮಿಳ್ಳಿ, ಶ್ರೀಶೈಲ ಆಲಗೂರ, ಯಲ್ಲಪ್ಪ ಕಟಗಿ, ವಿಜಯ ಕಲಾಲ, ಚಿದಾನಂದ ಹೊರಟ್ಟಿ, ಸುರೇಶ ಅಕ್ಕಿವಾಟ, ಅಶೋಕ ಹಳ್ಳೂರ, ರವಿ ಕೊರ್ತಿ, ಕಂದಾಯ ನಿರೀಕ್ಷಕ ಪಿ.ಆರ್‌. ಮಠಪತಿ, ಸದಾಶಿವ ಕುಂಬಾರ, ಮಂಜು ನೀಲನ್ನವರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next