Advertisement

ಸರಕಾರ ಸಂವಿಧಾನ ಪ್ರಕಾರವೇ ನಡೆಯಬೇಕು: ನಳಿನ್‌

10:54 PM May 10, 2022 | Team Udayavani |

ಮಣಿಪಾಲ: ನಮ್ಮದು ಹಾಗೂ ಪ್ರಮೋದ್‌ ಮುತಾಲಿಕರದ್ದು ವಿಚಾರಧಾರೆಗಳು ಒಂದೇ ಇದ್ದರೂ ಸರಕಾರ ಸಂವಿಧಾನಾತ್ಮಕವಾಗಿ ನಡೆಯ ಬೇಕಿರುವುದರಿಂದ ಕಾನೂನಾತ್ಮಕವಾಗಿ ಯಾವುದು ಸಾಧ್ಯವೋ ಅದನ್ನು ಸರಕಾರ ಮಾಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ಮಣಿಪಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೋರಾಟಗಾರರ ಮನೋಭಾವ ಬೇರೆ ಇರುತ್ತದೆ. ಅದರಂತೆ ಸರಕಾರ ನಡೆಯಲು ಸಾಧ್ಯವಿಲ್ಲ. ನಾವು ಅನೇಕ ಬಾರಿ ಸಂಘಟನಾತ್ಮಕವಾದ ಹಲವು ವಿಚಾರ ಹೇಳಿದಾಗ ಸರಕಾರಕ್ಕೆ ಮಾಡಲು ಸಾಧ್ಯವಾಗುವುದಿಲ್ಲ.

ಹೀಗಾಗಿ ಅಜಾನ್‌ ಕುರಿತು ಪ್ರಮೋದ್‌ ಮುತಾಲಿಕರು ಸಹಜವಾದ ಅಪೇಕ್ಷೆ ಯನ್ನು ವ್ಯಕ್ತಪಡಿಸಿದ್ದಾರೆ. ಸಂವಿಧಾನ, ಕಾನೂನಿನ ಅಡಿಯಲ್ಲಿ ನ್ಯಾಯಾಲಯದ ತೀರ್ಪಿನಂತೆ ಸರಕಾರ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.

ಇದು ಮೋದಿಯುಗ
ನಮ್ಮ ಪಕ್ಷದ ಶಾಸಕರಾದ ಯತ್ನಾಳ್‌ ಪದೇಪದೆ ಅವರ ಹೇಳಿಕೆಯನ್ನು ಬದಲಿಸುತ್ತಿರುತ್ತಾರೆ. ಈ ಬಗ್ಗೆ ಕ್ರಮಕ್ಕೆ ಕೇಂದ್ರದ ಶಿಸ್ತುಪಾಲನ ಸಮಿತಿಗೆ ಕಳುಹಿಸಿಕೊಟ್ಟಿದ್ದೇವೆ. ಅಲ್ಲಿಂದಲೇ ಕ್ರಮ ಆಗಲಿದೆ. ನಾವು ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ವಿಸ್ತಾರಕ ಯೋಜನೆ ಪೂರ್ಣಗೊಂಡಿದೆ. ಬೂತ್‌ ಸಮಿತಿ, ಪೇಜ್‌ ಪ್ರಮುಖರ ನೇಮಕವೂ ಆಗಿದೆ. ಪಕ್ಷದ ರಾಷ್ಟ್ರೀಯ ನಾಯಕರ ಅಪೇಕ್ಷೆಯಂತೆ 150 ಸೀಟು ಮುಂದಿನ ಚುನಾವಣೆಯಲ್ಲಿ ಗೆದ್ದೆ ಗೆಲ್ಲುತ್ತೇವೆ. ಹಾಗೆಯೇ ಮುಂದೆಯೂ ಮೋದಿಯವರೇ ಪ್ರಧಾನಿಯಾಗಿರುತ್ತಾರೆ. ಇದು ಮೋದಿಯುಗ. ಜನ ಪರ ಸರಕಾರ ನಮ್ಮದು ಎಂದರು.

ಅರ್ಕಾವತಿ ಡಿನೋಟಿಫಿಕೇಶನ್‌ ಪ್ರಕರಣವನ್ನು ರೀಡೂ ಮಾಡುವ ಸಂಬಂಧ ಮುಖ್ಯಮಂತ್ರಿಯವರಿಗೆ ಪಕ್ಷದಿಂದ ಈಗಾಗಲೇ ಸೂಚನೆ ನೀಡ ಲಾಗಿದೆ. ಅವರು ಕೂಡ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಆದಷ್ಟು ಬೇಗ ಈ ಕಾರ್ಯ ಆಗಲಿದೆ. ಭ್ರಷ್ಟಾಚಾರದ ವಿರುದ್ಧ ಸರಕಾರ ಕಠಿನ ಕ್ರಮ ತೆಗೆದುಕೊಳ್ಳಲಿದೆ ಎಂದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next