Advertisement

ಹುಲಸೂರ ತಾಲೂಕು ರಚನೆಗೆ ಸರ್ಕಾರ ಬದ್ಧ

11:35 AM Dec 31, 2017 | |

ಬಸವಕಲ್ಯಾಣ: ನೂತನ ಹುಲಸೂರು ತಾಲೂಕು ರಚನೆಗೆ ಸರ್ಕಾರ ಬದ್ಧವಿದೆ. ಎಲ್ಲ ಅಡ್ಡಿ ಅತಂಕಗಳೂ ದೂರವಾಗಿದ್ದು, ಶೀಘ್ರದಲ್ಲಿಯೇ ಹೊಸ ತಾಲೂಕು ಕಾರ್ಯಾರಂಭವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು. ತಾಲೂಕಿನ ಹುಲಸೂರಿನಲ್ಲಿ ಶ್ರೀ ಜಗದ್ಗುರು ಬಸವಕುಮಾರ ಶಿವಯೋಗಿಗಳ 42ನೇ ಪುಣ್ಯ ಸ್ಮರಣೋತ್ಸವ, ಬೀದರ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹುಲಸೂರು ತಾಲೂಕು ಕೇಂದ್ರವಾಗಬೇಕು ಎನ್ನುವುದು ಈ ಭಾಗದ ಜನರ ಬಹು ದಿನಗಳ ಬೇಡಿಕೆಯಾಗಿದೆ. ಇದು ಅವಶ್ಯವೂ ಆಗಿದೆ ಎಂದು ಹೇಳಿದರು.

Advertisement

ಹೊಸ ತಾಲೂಕು ರಚನೆಯಾಗಬೇಕಾದರೆ ಕನಿಷ್ಠ 1 ಲಕ್ಷ ಜನಸಂಖ್ಯೆ ಅಥವಾ 50 ಗ್ರಾಮಗಳು ಇರಬೇಕು ಎನ್ನುವ ನಿಯಮಗಳಿವೆ. ಆದರೆ ನಿಯಮಗಳನ್ನು ಮೀರಿ ವಿಶೇಷ ಪ್ರಕರಣ ಎಂದು ಪರಿಗಣಿಸುವಂತೆ ತಾವು ಮಾಡಿದ
ಮನವಿ ಸ್ಪಂದಿಸಿದ ಮುಖ್ಯಮಂತ್ರಿಗಳು, ಈಗ ಅ ಧಿಕೃತವಾಗಿ ಅಧಿಸೂಚನೆ ಹೊರಡಿಸಿದ್ದಾರೆ. ಶೀಘ್ರದಲ್ಲಿಯೇ
ತಾಲೂಕು ರಚನೆ ಮಾಡಿ, ಅಗತ್ಯ ಅನುದಾನ ಕಲ್ಪಿಸಲಾಗುವುದು ಎಂದು ಹೇಳಿದರು. ಬೀದರ ಕನ್ನಡ ಭವನ
ನಿರ್ಮಾಣಕ್ಕೆ 1 ಕೋಟಿ ರೂ. ಅನುದಾನ ಕಲ್ಪಿಸಿ ನಮ್ಮ ಸಕಾರದ ಅವಧಿ ಯಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು. ಸಾನ್ನಿಧ್ಯ ವಹಿಸಿದ್ದ ಹಾರಕೂಡ ಡಾ| ಚನ್ನವೀರ ಶಿವಾಚಾರ್ಯರು ಆಶೀರ್ವಚನ ನೀಡಿ, ಸೂರ್ಯ-ಚಂದ್ರರು ಇರುವ ವರೆಗೂ ಕನ್ನಡ, ಕನ್ನಡ ಸಾಹಿತ್ಯ ಇರುತ್ತದೆ.

ಕನ್ನಡಿಗರಾದ ಪ್ರತಿಯೊಬ್ಬರೂ ಕನ್ನಡ ಬಗ್ಗೆ ಅಭಿಮಾನ ವಿರಬೇಕು ಎಂದು ಹೇಳಿದರು. ಸಮ್ಮೇಳನದ ಸರ್ವಾಧ್ಯಕ್ಷ
ಡಾ| ಎಂ.ಜಿ.ದೇಶಪಾಂಡೆ ಅಧ್ಯಕ್ಷೀಯ ಭಾಷಣ ಮಾಡಿದರು. ಡಾ| ಶಿವಾನಂದ ಮಹಾಸ್ವಾಮೀಜಿ ನೇತೃತ್ವ. ಡಾ| ಅಕ್ಕ
ಅನ್ನಪೂರ್ಣ ಸಮ್ಮುಖ ವಹಿಸಿದ್ದರು. ಶ್ರೀ ಶಿವಾನಂದ ದೇವರು, ನಿಕಟಪೂರ್ವ ಅಧ್ಯಕ್ಷ ಹಣಮಂತಪ್ಪ ಪಾಟೀಲ, ಮಾಜಿ ಶಾಸಕ ಎಂ.ಜಿ. ಮುಳೆ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜೇಂದ್ರ ಗಂದಗೆ, ಜಿಪಂ ಸದಸ್ಯ ಸುಧೀರ ಕಾಡಾದಿ, ಕೆಪಿಸಿಸಿ ಕಾರ್ಯದರ್ಶಿ ಬಿ. ನಾರಾಯಣರಾವ, ಬಿಕೆಡಿಬಿ ಸದಸ್ಯ ಶಿವರಾಜ ನರಶೆಟ್ಟಿ, ಮುಖಂಡ ಶಿವಶರಣ ಬಿರಾದಾರ, ಗ್ರಾಪಂ ಅಧ್ಯಕ್ಷೆ ಮಂಗಲಾಬಾಯಿ ದೊಂಣಗಾಂವಕರ, ಗೋವಿಂದರಾವ ಸೋಮವಂಶಿ, ಜಿಪಂ ಮಾಜಿ ಉಪಾಧ್ಯಕ್ಷೆ ಲತಾ ಶಾಂತಕುಮಾರ ಹಾರಕೂಡೆ, ಕನ್ನಡಾಂಬೆ ಗೆಳೆಯರ ಬಳಗದ ಅಧ್ಯಕ್ಷ ವಿರುಪಾಕ್ಷ ಗಾದಗಿ, ಧನರಾಜ ರಾಜೋಳೆ, ಕಸಾಪ ಹುಲಸೂರ ಅಧ್ಯಕ್ಷೆ ಶಿವಲೀಲಾ ಮಠಪತಿ ಇದ್ದರು. 

ಸಚಿವ ಈಶ್ವರ ಖಂಡ್ರೆ, ಎಂಎಲ್‌ಸಿ ಅಮರನಾಥ ಪಾಟೀಲ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದರು. ಇದೇ
ಸಂದರ್ಭದಲ್ಲಿ 16 ಕೃತಿ ಲೋಕಾರ್ಪಣೆ ಮಾಡಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಸ್ವಾಗತಿಸಿದರು.
ಕಾರ್ಯದರ್ಶಿ ಬಸವರಾಜ ಬಲ್ಲೂರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next