Advertisement
ರಾಜ್ಯದಲ್ಲಿ ಎಚ್‌ಐವಿ ಬಾಧಿತ 10 ಸಾವಿರ ಹಾಗೂ ಸೋಂಕು ಇರುವ ಪೋಷಕರ 15 ಸಾವಿರ ಮಕ್ಕಳು ಸೇರಿ ರಾಜ್ಯದಲ್ಲಿ ಒಟ್ಟು 25 ಸಾವಿರ ಎಚ್‌ಐವಿ ಬಾಧಿತ ಮತ್ತು ಸೋಂಕಿತ ಮಕ್ಕಳಿದ್ದಾರೆ. ಇವರ ಪೋಷಣೆಗಾಗಿ ರಾಜ್ಯ ಸರ್ಕಾರ 2010ರಲ್ಲಿ ವಿಶೇಷ ಪಾಲನಾ ಯೋಜನೆಯನ್ನು ಜಾರಿಗೆ ತಂದಿತ್ತು.
Related Articles
Advertisement
ಎಸ್ಸಿ, ಎಸ್ಟಿ ಮಕ್ಕಳಿಗೆ ಮಾತ್ರ ಹಣ?: ಈ ಮಧ್ಯೆ ಕಳೆದ ವರ್ಷದಿಂದ ಕೇವಲ ಎಸ್ಸಿ, ಎಸ್ಟಿ ಮಕ್ಕಳಿಗೆ ಮಾತ್ರ ವಿಶೇಷ ಪಾಲನಾ ಯೋಜನೆಯಡಿ ಸೌಲಭ್ಯ ನೀಡಲಾಗುತ್ತಿದೆ. ಹೀಗಾಗಿ ಎಚ್‌ಐವಿ ಬಾಧಿತ, ಸೋಂಕಿತ ಮತ್ತು ಪೋಷಕರ 4 ಸಾವಿರ ಎಸ್ಸಿ, ಎಸ್ಟಿ ಮಕ್ಕಳು ಮಾತ್ರ ಸಹಾಯ ಧನ ಪಡೆದುಕೊಳ್ಳುತ್ತಿದ್ದು, ಇತರ ಮಕ್ಕಳಿಗೆ ಈ ಸೌಲಭ್ಯ ಸಿಗುತ್ತಿಲ್ಲ ಎಂಬ ಆರೋಪವಿದೆ. ಆದರೆ, ಈ ಆರೋಪವನ್ನು ನಿರಾಕರಿಸಿರುವ ಅಧಿಕಾರಿ ಗಳು, ಎಸ್ಸಿ, ಎಸ್ಟಿ ಮಕ್ಕಳಿಗೆ ಮಾತ್ರ ಹಣ ಕೊಡಲಾಗುತ್ತಿದೆ ಎಂಬುದು ಸುಳ್ಳು. ಕಳೆದ ವರ್ಷ ಸರ್ಕಾರ ನೀಡಿದ್ದ ಎಸ್‌ಸಿಪಿ-ಟಿಎಸ್‌ಪಿ ಯೋಜನೆಯ ಉಳಿಕೆ ಹಣವನ್ನು ಎಸ್ಸಿ, ಎಸ್ಟಿ ಮಕ್ಕಳಿಗೆ ನೀಡಿದ್ದೇವೆ. ಇನ್ನು ನಮಗೆ ಸಿಕ್ಕ ಫೂರ್ಣ ಅನುದಾನವನ್ನು ಬೇರೆ ಮಕ್ಕಳಿಗೆ ಹಂಚಿದ್ದೇವೆ ಎಂದು ಹೇಳುತ್ತಾರೆ.
ವಿಶೇಷ ಪಾಲನಾ ಯೋಜನೆಯಡಿ ಎಚ್‌ಐವಿ ಬಾಧಿತ ಮಕ್ಕಳಿಗೆ ಅವರ ಪೋಷಕರ ಪೋಷಣೆಯ ಜೊತೆಗೆ ಸರ್ಕಾರ ಹೆಚ್ಚುವರಿಯಾಗಿ ಸಹಾಯಧನ ನೀಡುತ್ತದೆ. ಲಭ್ಯವಿರುವ ಅನುದಾನದಲ್ಲಿ ಎಷ್ಟು ತಿಂಗಳು ಸಾಧ್ಯವೋ ಅಷ್ಟು ತಿಂಗಳು ಹಣ ನೀಡುತ್ತೇವೆ. ಹಾಗಂತ, ಮಕ್ಕಳ ಪೋಷಣೆ ನಿಲ್ಲುತ್ತದೆ ಎಂದರ್ಥವಲ್ಲ. ಅದಾಗ್ಯೂ ಈಗಿರುವ ಅನುದಾನದಲ್ಲಿ ಎಲ್ಲ ಮಕ್ಕಳಿಗೂ ಸೌಲಭ್ಯ ನೀಡಲು ಸಾಧ್ಯವಿಲ್ಲ. ಹಾಗಾಗಿ ಹೆಚ್ಚುವರಿ ಅನುದಾನ ನೀಡುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗುವುದು.– ನರ್ಮದಾ ಆನಂದ್, ಯೋಜನಾ ನಿರ್ದೇಶಕಿ ಎಲ್ಲ ಮಕ್ಕಳಿಗೂ ಪೂರ್ಣ ಪ್ರಮಾಣದ ಪೋಷಣಾ ಭತ್ಯೆ ಸಿಗಬೇಕು. ಎಸ್ಸಿ, ಎಸ್ಟಿ ಮಕ್ಕಳಿಗೆ ಮಾತ್ರ ಸಹಾಯಧನ ನೀಡುವ ಮಾತುಗಳು ಕೇಳಿ ಬರುತ್ತಿವೆ. ಇದು ಸರಿಯಲ್ಲ. ಈ ವಿಚಾರದಲ್ಲಿ ಶೀಘ್ರದಲ್ಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರನ್ನು ಭೇಟಿ ಮಾಡುತ್ತೇವೆ
– ಚಂದ್ರಿಕಾ, ಬೆಂಗಳೂರು ಎಚ್‌ಐವಿ ಏಡ್ಸ್ ಫೋರಂ – ರಫೀಕ್ ಅಹ್ಮದ್