Advertisement

ಗ್ರಾಮೀಣ ಭಾಗದಲ್ಲಿ ಕೋವಿಡ್ ನಿಯಂತ್ರಿಸಲು ಸರ್ಕಾರ ಏನನ್ನೂ ಮಾಡ್ತಿಲ್ಲ : ಉಗ್ರಪ್ಪ

07:19 PM May 17, 2021 | Team Udayavani |

ಬೆಂಗಳೂರು : ಗ್ರಾಮೀಣ ಭಾರತದ ಜನ ಶೇ. 73 ರಷ್ಟಿದ್ದಾರೆ, ಅವರಿಗೆ ಈಗ ಕೋವಿಡ್ ಸ್ಪ್ರೆಡ್ ಆಗ್ತಿದೆ. ಸಿ.ಎಸ್. ಪುರದ ಪ್ರತಿ ಮನೆಯಲ್ಲಿ ಒಂದಲ್ಲ ಒಂದು‌ ಮಗುವಿಗೆ ಜ್ವರ ಶುರುವಾಗಿದೆ. ಗ್ರಾಮೀಣ ಭಾರತದಲ್ಲಿ ಆಗ್ತಿರೋ ಹಾನಿ ಪರಿಣಾಮಕಾರಿಯಾಗಿ ಎದುರಿಸಲು ರಾಜ್ಯ ಸರ್ಕಾರ ಏನನ್ನೂ ಮಾಡಿಲ್ಲ ಎಂದು ಮಾಜಿ ಸಂಸದ ಉಗ್ರಪ್ಪ‌ ಆರೋಪ ಮಾಡಿದ್ದಾರೆ.

Advertisement

ಇಂಟರ್ ನ್ಯಾಷನಲ್ ಸ್ಟ್ಯಾಂಡರ್ಡ್ ಪ್ರಕಾರ ಶೇ. 80 ರಷ್ಟು ಜನರಿಗೆ ವ್ಯಾಕ್ಸಿನ್ ಕೊಡಬೇಕು. ಅಂದರೆ ಭಾರತದಲ್ಲಿ ನೂರಾ ಎಂಟು ಕೋಟಿ ಜನರಿಗೆ ವ್ಯಾಕ್ಸಿನ್ ಹಾಕಿಸಬೇಕು. 17 ಮೇ ವರೆಗೆ 14 ಕೋಟಿ ಜನರಿಗೆ ಮಾತ್ರ ಮೊದಲ ಡೋಸ್ ವ್ಯಾಕ್ಸಿನ್ ಕೊಡಲಾಗಿದೆ.

ಸುಮಾರು 4 ಕೋಟಿ ಜನರಿಗೆ ಮಾತ್ರ ಎರಡನೇ ಡೋಸ್ ಕೊಡಲಾಗಿದೆ ಅಂದರೆ 3.1% ಜನರಿಗೆ ಮಾತ್ರ ವ್ಯಾಕ್ಸಿನ್ ನೀಡಲಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next